ಅಫ್ಘಾನಿಸ್ತಾನದಲ್ಲಿ (Afghanistan) ಇಂದು (ಸೆ.5) ಬೆಳಿಗ್ಗೆ ಮತ್ತೆ ಪ್ರಬಲ ಭೂಕಂಪ (Earthquake) ಸಂಭವಿಸಲಾಗಿದೆ. ಇಂದು 4.9 ತೀವ್ರತೆಯಲ್ಲಿ ಭೂಕಂಪನವಾಗಿರೋ ಮಾಹಿತಿ ಲಭ್ಯವಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಕೂಡ ಪ್ರಬಲ ಭೂಕಂಪನ ಸಂಭವಿಸಿದ್ದು, ಇನ್ನೂ ಚೇತರಿಸಿಕೊಳ್ಳದ ಅಫ್ಘಾನಿಸ್ತಾನಕ್ಕೆ ಮತ್ತೆ ಶಾಕ್ ಎದುರಾಗಿದೆ.

ಈ ಹಿಂದಿನ ಭೂಕಂಪನದಲ್ಲಿ ಬರೋಬ್ಬರಿ 2204 ಜನ ಸಾವಿಗಿಡಾಗಿ, 3500 ಕ್ಕೂ ಹೆಚ್ಚುಜನರಿಗೆ ಗಾಯಗಳಾಗಿ ನರಕವೇ ಸೃಷ್ಟಿಯಾಗಿತ್ತು. ಇಂದು ಮತ್ತೆ ಭೂಕಂಪನವಾಗಿ ಆತಂಕ ಇನ್ನಷ್ಟು ಹೆಚ್ಚಾಗಿದೆ. ಅಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯದ ಜಲಾಲಾಬಾದ್‌ನಲ್ಲಿ ಈ ಹಿಂದೆ 6.3 ತೀವ್ರತೆಯಲ್ಲಿ ಭೂಕಂಪವಾಗಿತ್ತು.

ಈ ವೇಳೆ ರಕ್ಷಣಾ ಕಾರ್ಯಾಚರಣೆಯೂ ಸವಾಲಾಗಿ ಪರಿಣಮಿಸಿದೆ. ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿದವರನ್ನು ರಕ್ಷಿಸುವ ಕಾರ್ಯ ಮುಂದುವರೆದಿದ್ದು, ಸಾವಿರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮತ್ತು ವೈದ್ಯಕೀಯ ವ್ಯವಸ್ಥೆಗಳು ಸವಾಲಾಗಿ ಪರಿಣಂಶಿಸಿದೆ.












