ಗರ್ಭವಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ ಸರಿಯಾಗಿ ಊಟ ಸೇರುವುದಿಲ್ಲ, ತಲೆಸುತ್ತಿರುತ್ತದೆ ಹಾಗೂ ಮತ್ತೊಂದು ದೊಡ್ಡ ಸಮಸ್ಯೆ ಅಂದ್ರೆ ವಾಕರಿಕೆ ಹಾಗೂ ವಾಂತಿಯಾಗುವುದು.ಏನೇ ಆಹಾರವನ್ನ ಸೇವನೆ ಮಾಡಿದರು ಕೂಡ ವಾಂತಿಯಾಗುತ್ತದೆ. ಇದು ಗರ್ಭಧಾರಣೆಯ ಆರನೇ ವಾರದಿಂದ ಪ್ರಾರಂಭವಾಗುತ್ತದೆ. ಹೆಚ್ಚಿನ ಗರ್ಭಿಣಿಯರು ಈ ವಾಂತಿಯ ಸಮಸ್ಯೆಯನ್ನು ಅನುಭವಿಸುತ್ತಾರೆ. ಕೆಲವೊಬ್ಬರಿಗೆ ದಿನಕ್ಕೆ ಐದರಿಂದ ಆರು ಬಾರಿ ವಾಂತಿ ಆಗುವುದು ಸಹಜ ಇನ್ನು ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ವಾಂತಿಯಾಗುತ್ತದೆ.
![](https://pratidhvani.com/wp-content/uploads/2024/05/IMG_7602-1.jpeg)
ಹಾಗೂ ಕೆಲವು ಹೆಣ್ಣು ಮಕ್ಕಳಿಗೆ ತಿಂದರೆ ಮಾತ್ರವಲ್ಲದೆ ಅದರ ಸ್ಮೆಲ್ ನಿಂದನು ಕೂಡ ವಾಮಿಟ್ ಆಗುವಂತ ಚಾನ್ಸಸ್ ಹೆಚ್ಚಿರುತ್ತದೆ. ಉದಾಹರಣೆಗೆ ಕೆಲವೊಬ್ಬರಿಗೆ ಒಗ್ಗರಣ್ಣೆ ಪರಿಮಳ ಆಗುವುದಿಲ್ಲ ,ಪರ್ಫ್ಯೂಮ್ ಅಂದ್ರೆ ಹಿಂಸೆ ಅನಿಸುತ್ತದೆ.ಕೆಲವೊಬ್ಬರಿಗೆ ಅನ್ನ ತಿನ್ನಬೇಕು ಅನ್ಸಲ್ಲ ಇದರಿಂದ ವಾಂತಿಯಾಗುತ್ತದೆ. ಹೀಗೆ ಸಾಕಷ್ಟಿವೆ. ಪ್ರತಿ ಸಾರಿ ವಾಂತಿಯಾದಾಗಲೂ ತುಂಬಾನೇ ಸುಸ್ತಾಗ್ತಾರೆ ಈ ವಾಂತಿಯನ್ನ ತಡೆಗಟ್ಟುವುದಾದರೆ ಏನು ಮಾಡಬೇಕು ಅನ್ನೋದರ ಮಾಹಿತಿ ಹೀಗಿದೆ.
ಪುದಿನ
ಐದರಿಂದ ಆರು ಎಸಳು ಪುದಿನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ನೀರಿನಲ್ಲಿ ತೊಳೆದು ಸ್ವಲ್ಪ ಉಪ್ಪನ್ನು ಸೇರಿಸಿ ನಿಧಾನವಾಗಿ ಜಗಿದು ಅದರ ರಸವನ್ನ ನುಂಗುವುದರಿಂದ ವಾಕರಿಕೆ ಅಥವಾ ವಾಂತಿ ಬರುವುದು ನಿಲ್ಲುತ್ತದೆ ಇದೊಂದು ತಕ್ಷಣದ ಪರಿಹಾರ. ಇಲ್ಲವಾದಲ್ಲಿ ಪುದಿನ ಟಿ ಯನ್ನು ಕೂಡ ಮಾಡಿಕೊಂಡು ಕುಡಿಯಬಹುದು.
![](https://pratidhvani.com/wp-content/uploads/2024/05/IMG_7599-1.jpeg)
ಕಿತ್ತಲೆ ಹಣ್ಣು
ಕಿತ್ತಲೆ ಹಣ್ಣಿನಲ್ಲಿ ಸಿಟ್ರಿಕ್ ಅಂಶ ಇರುವುದರಿಂದ ವಾಕರಿಕೆ ಅಥವಾ ವಾಂತಿಯನ್ನು ತಡೆಗಟ್ಟುತ್ತದೆ ದಿನಕ್ಕೆ ಅಬ್ಬಬ್ಬಾ ಅಂದ್ರೆ ಒಂದು ಕಿತ್ತಲೆ ಹಣ್ಣನ್ನ ತಿನ್ನಬಹುದು ಇಲ್ಲವಾದಲ್ಲಿ ಎರಡು ಅಥವಾ ಮೂರು ಕಿತ್ತಳೆ ಹಣ್ಣಿನ ತೊಳೆಗಳನ್ನ ತಿನ್ನುವುದರಿಂದ ವಾಕರಿಕೆಯನ್ನ ತಡೆಗಟ್ಟಲು ಸಹಾಯಕಾರಿ.
ಶುಂಠಿ ಟೀ
ಶುಂಠಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಅದಕ್ಕೆ ಸ್ವಲ್ಪ ಬೆಲ್ಲ ಹಾಗೂ ಜೀರಿಗೆಯನ್ನು ಬೆರೆಸಿ. ಪ್ರತಿದಿನ ಬೆಳಗ್ಗೆ ಇದನ್ನ ಕುಡಿಯುವುದರಿಂದ ವಾಂತಿ ಕಡಿಮೆಯಾಗುತ್ತದೆ. ಹಾಗೂ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಮತ್ತು ಆಹಾರವು ಕೂಡ ಸೇರುತ್ತದೆ.
ನಿಂಬೆಹಣ್ಣಿನ ಜ್ಯೂಸ್
ದೇಹದ ಧಣಿವನ್ನ ಕಡಿಮೆ ಮಾಡುತ್ತದೆ ಜೊತೆಗೆ ವಾಕರಿಕೆಯೂ ಕೂಡ ನಿಲ್ಲುತ್ತದೆ ಪ್ರತಿ ದಿನ ಈ ಜ್ಯೂಸ್ ಅನ್ನ ಕುಡಿಯುವುದು ಗರ್ಭಿಣಿಯರಿಗೆ ಉತ್ತಮ. ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಅಂಶ ಇರುವುದರಿಂದ ಆರೋಗ್ಯಕ್ಕೂ ಕೂಡ ಒಳ್ಳೆಯದು.
![](https://pratidhvani.com/wp-content/uploads/2024/05/IMG_7600-1.jpeg)
ಗರ್ಭಾವಸ್ಥೆಯಲ್ಲಿ ಹೆಣ್ಣು ಮಕ್ಕಳು ಆಹಾರವನ್ನು ಸೇವನೆ ಮಾಡಬೇಕಾದರೆ ಹೆಚ್ಚು ಕಾಳಜಿಯನ್ನ ವಹಿಸಬೇಕು. ಈ ಸಂದರ್ಭದಲ್ಲಿ ಎಲ್ಲವನ್ನು ತಿನ್ನೋದಕ್ಕೆ ಆಗೋದಿಲ್ಲ. ಯಾಕೆಂದರೆ ಜೀರ್ಣಕ್ರಿಯೆ ನಿಧಾನವಾಗುತ್ತದೆ.ಗರ್ಭಿಣಿಯಾದಾಗ ಒಂದೇ ಸಮಯದಲ್ಲಿ ಹೆಚ್ಚು ಆಹಾರವನ್ನು ಸೇವನೆ ಮಾಡುವ ಬದಲು ನೀವು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಆಹಾರವನ್ನ ತಿನ್ನೋದು ಉತ್ತಮ. ಆಹಾರಕ್ಕಿಂತ ಹೆಚ್ಚಾಗಿ ಜ್ಯೂಸ್ ಹಾಗೂ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಉತ್ತಮ