ಕೇಂದ್ರ ತನಿಖಾ ಸಂಸ್ಥೆ (ED) ಜೊತೆ ನೇರ ಸಂಘರ್ಷಕ್ಕೆ ಇಳಿತಾ ರಾಜ್ಯ ಸರ್ಕಾರ ಎಂಬ ಅನುಮಾನ ಮೂಡಿದೆ. ವಾಲ್ಮೀಕಿ ನಿಗಮ ಹಗರಣ ಕೇಸ್ (Valmiki board scam) ನಲ್ಲಿ ಇಡಿ ಅಧಿಕಾರಿಗಳ ವಿರುದ್ದವೇ FIR ದಾಖಲಾಗಿದೆ. ಆ ಮೂಲಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಡಿ ಅಧಿಕಾರಿಗಳ ವಿರುದ್ದ FIR ಮಾಡಲಾಗಿದೆ.

ಅದು ಸಹ ಪ್ರಕರಣದ ತನಿಖೆಯೊಂದು, ತನಿಖಾ ಹಂತದಲ್ಲಿಯೇ ಇಡಿ ಅಧಿಕಾರಿಗಳ ವಿರುದ್ದ ಕೇಸ್ ಹಾಕಲಾಗಿದ್ದು, ಇಡಿ ಅಧಿಕಾರಿಗಳಿಂದ ಒತ್ತಡ, ಕಿರುಕುಳ ಎಂದು ದೂರು ನೀಡಿರೋ ರಾಜ್ಯ ಸರ್ಕಾರಿ ನೌಕರ ಕಲ್ಲೇಶ್ ಇಡಿ ಅಧಿಕಾರಿಗಳ ವಿರುದ್ಧವೇ ದೂರು ದಾಖಲಿಸಿದ್ದಾನೆ.

ಹಣ ವರ್ಗಾವಣೆಗೆ ಸಿಎಂ ಸಿದ್ದರಾಮಯ್ಯ (Cm siddaramaiah), ಆಗಿನ ಸಚಿವ ನಾಗೇಂದ್ರ (X minister nagendra) ಹಣಕಾಸು ಇಲಾಖೆ ಸೂಚನೆ ಇತ್ತು ಎಂದು ಒಪ್ಪಿಕೊಳ್ಳುವಂತೆ ತನಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪದಡಿ ಇ ಡಿ ಅಧಿಕಾರಿಗಳ ವಿರುದ್ಧ FIR ದಾಖಲಾಗಿದೆ.
ಕೇಂದ್ರ ವಿಭಾಗದ ವಿಲ್ಸನ್ ಗಾರ್ಡನ್ (Wilson garden) ಠಾಣೆಯಲ್ಲಿ FIR ದಾಖಲು ಮಾಡಲಾಗಿದ್ದು, ಇಡಿ ಕಚೇರಿ ಶಾಂತಿನಗರದಲ್ಲಿ ಇರುವುದರಿಂದ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.