ಮನುಷ್ಯನ ದೇಹದ ಅತ್ಯಂತ ಸೂಕ್ಷ್ಮವಾದ ಅಂಗ ಅಂದರೆ ಕಣ್ಣುಗಳು ಕಣ್ಣುಗಳ ಮೇಲೆ ಎಷ್ಟೇ ಕಾಳಜಿ ವಹಿಸಿದ್ರು ಅದು ಕಡಿಮೆ. ಕೆಲವು ಬಾರಿ ಗಾಡಿ ಓಡಿಸಬೇಕಾದರೆ ಅಥವಾ ಓಡಾಡ್ಬೇಕಾದ್ರೆ ಹೀಗೆ ಸುಮ್ನೆ ಇದ್ದರೂ ಕೂಡ ಕಣ್ಣಿಗೆ ಕಸ ಬೀಳುತ್ತದೆ, ಇಲ್ಲವಾದರೆ ಕಣ್ಣಿನ ರೆಪ್ಪೆಯು ಕಣ್ಣಿನ ಒಳಗೆ ಹೋಗುತ್ತದೆ..ಇಂತಹ ಸಂಧರ್ಬದಲ್ಲಿ ನೋವು, ಉರಿ ಹಾಗೂ ನೀರು ಸುರಿಯುತ್ತದೆ .ಕಣ್ಣಿಗೆ ಕಸವಿದ್ದಾಗ ತಕ್ಷಣಕ್ಕೆ ಗಾಬರಿಯಾಗುತ್ತೇವೆ ,ಹಾಗೆ ಹೆದರಿ ಕೆಲವು ತಪ್ಪುಗಳನ್ನು ಮಾಡ್ತಿವಿ..

- ಕಣ್ಣಿನ ಉಚಿಕೊಳ್ಳುವುದು ಕಸ ಬಿದ್ದಾಗ ಕಣ್ಣನ್ನ ಉಜ್ಜಿಕೊಳ್ಳುವುದರಿಂದ ಧೂಳು ಅಥವಾ ಕಸ ಎಲ್ಲಾ ಕಡೆ ಸ್ಪ್ರೆಡ್ ಆಗುತ್ತದೆ ಹಾಗೂ ಕಣ್ಣು ಉರಿಯುವುದಕ್ಕೆ ಹಾಗೂ ನೀರು ಸುರಿಯುವುದಕ್ಕೆ ಶುರುವಾಗುತ್ತೆ.. ಹಾಗಾಗಿ ಉಜ್ಜಿಕೊಳ್ಳಬೇಡಿ.
- ಬದಲಿಗೆ ತಕ್ಷಣಕ್ಕೆ ಕಣ್ಣನ್ನು ಮಿಟುಕಿಸಿ.ಇದರಿಂದ ಕಸ ಹೊರಗೆ ಬರುತ್ತದೆ ಹಾಗೂ ಉರಿ ಮತ್ತು ನೋವು ಶಮನಗೊಳ್ಳುತ್ತದೆ.
- ತಕ್ಷಣಕ್ಕೆ ಒಂದು ಬಟ್ಟೆಯನ್ನು ಗಂಟು ಕಟ್ಟಿ ನಿಮ್ಮ ಬಾಯಿಂದ ಬಿಸಿ ಗಾಳಿಯನ್ನು ಊದಿ,ಆ ಬಟ್ಟೆ ಬಿಸಿಯಾದ ನಂತರ ಆ ಬಟ್ಟೆಯನ್ನ ಕಣ್ಣಿನ ಮೇಲೆ ಇಟ್ಟು ಕೆಲ ಸೆಕೆಂಡ್ಗಳು ಹಾಗೆ ಇರಿ, ಇದರಿಂದ ಕಸ ಹೋಗುತ್ತದೆ ಹಾಗೂ ನೋವು ಕಡಿಮೆಯಾಗುತ್ತದೆ. ಈ ಒಂದು ಸಿಂಪಲ್ ಟ್ರಿಕ್ ಅನ್ನ ಹೆಚ್ಚು ಮಂದಿ ಚಿಕ್ಕ ವಯಸ್ಸಿಂದಲೂ ಮಾಡ್ತಾ ಬಂದಿದ್ದಾರೆ.
- ಒಂದು ಬೌಲ್ ಗೆ ನೀರನ್ನು ಹಾಕಿ, ಆ ಬೌಲ್ ಒಳಗಡೆ ನಿಮ್ಮ ಮುಖವನ್ನು ಅದ್ದಿ ,ನಿಧಾನವಾಗಿ ಕಣ್ಣ ಓಪನ್ ಮಾಡಿ ಕೆಲ ಸೆಕೆಂಡ್ಗಳು ಹಾಗೆ ಇರಿ.ಇದರಿಂದ ಕಣ್ಣಿನ ಕಸವು ಬೇಗನೆ ಹೊರಗೆ ಬರುತ್ತದೆ.
- ಒಂದು ಸಾಫ್ಟ್ ಬಟ್ಟೆ ಅಥವಾ ಕರ್ಚಿಫ್ ತುದಿಯನ್ನು ಬಳಸಿ ನಿಧಾನವಾಗಿ ಕಣ್ಣಿನ ಕಸವನ್ನ ನಾವೇ ತೆಗೆದುಕೊಳ್ಳಬಹುದು.
- ಕಣ್ಣಿನ ರೆಪ್ಪೆಯನ್ನು ಮೇಲೆ ಮಾಡಿ ಇತರದ ಸಹಾಯದಿಂದ ಗಾಳಿಯನ್ನ ಊದಿಸಬೇಕು ಅದರಿಂದ ಕಸವು ಹೋಗುತ್ತದೆ..