ಬೆಳಗಾವಿ:ಕರ್ನಾಟಕದ ಎಲ್ಲಡೆ ನವರಾತ್ರಿ (Navratri) ಹಬ್ಬದ ಸಡಗರ ಮನೆ ಮಾಡಿದೆ. ಆದರೆ, ಬಾಕಿ ಇರುವ ಜುಲೈ ಮತ್ತು ಆಗಸ್ಟ್ ತಿಂಗಳ ಗೃಹಲಕ್ಷ್ಮೀ ಹಣ ಇನ್ನೂ ಜಮೆಯಾಗಿಲ್ಲ ಎಂದು ಸರ್ಕಾರದ ವಿರುದ್ಧ ಮಹಿಳೆಯರು ಮುನಿಸಿಕೊಂಡಿದ್ದಾರೆ. ಆದರೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಗುಡ್ನ್ಯೂಸ್ ನೀಡುವ ಮೂಲಕ ಮುನಿಸನ್ನು ತಣ್ಣಗಾಗಿಸಿದ್ದಾರೆ.
ಜುಲೈ ಮತ್ತು ಆಗಸ್ಟ್ ತಿಂಗಳ ಹಣ ಎರಡು ಹಂತದಲ್ಲಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ದಸರಾ ಒಳಗಡೆಯೇ ಮಹಿಳೆಯರ ಖಾತೆಗೆ ಹಣ ಜಮೆಯಾಗಲಿದೆ. ಜುಲೈ ತಿಂಗಳ ಹಣ ಸೋಮವಾರ (ಅ.7) ಮತ್ತು ಆಗಸ್ಟ್ ತಿಂಗಳ ಹಣ ಬುಧವಾರ (ಅ.09) ರಂದು ಗೃಹಲಕ್ಷ್ಮೀಯರ ಖಾತೆಗೆ ಜಮೆಯಾಗಲಿದೆ ಎಂದು ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. 1 ಕೋಟಿಗೂ ಅಧಿಕ ಮಹಿಳೆಯರ ಖಾತೆಗೆ ಒಟ್ಟು ನಾಲ್ಕು ಸಾವಿರ ರೂ. ಬರಲಿದೆ.