ವಾತಾವರಣದಲ್ಲಿ ಸ್ವಲ್ಪ ಏರುಪೇರು ಆದ್ರೂ ಕೂಡ ನಮ್ಮ ಆರೋಗ್ಯ ಹದಗೆಡುತ್ತದೆ. ಅದರಲ್ಲೂ ಕೂಡ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕಾಡ್ತಾ ಇರುವಂತಹ ಒಂದು ಸಮಸ್ಯೆ ಅಂತ ಹೇಳಿದ್ರೆ ಒಣಕೆಮ್ಮು. ಒಣಕೆಮ್ಮು ಬಂದರೆ ಒಂದು ರೀತಿಯ ಹಿಂಸೆ ,ಗಂಟಲು ಕಿರಿಕಿರಿ ,ಜೊತೆಗೆ ಗಂಟಲು ನೋವಾಗುವುದು ಸಹಜ.. ಒಣಕೆಮ್ಮು ಬಂದಾಗ ಹೆಚ್ಚಾಗಿ ಯಾರು ಸಹ ಡಾಕ್ಟರ್ ಹತ್ರ ಹೋಗೊದಿಲ್ಲ. ಬದಲಿಗೆ ಮನೆಯಲ್ಲೇ ಒಂದಿಷ್ಟು ಮದ್ದುಗಳನ್ನ ಮಾಡ್ತಾರೆ. ಈ ಡ್ರೈ ಕೌಫ್ ಬಂದ ಥಟ್ ಅಂತ ಕಡಿಮೆ ಆಗ್ಬೇಕು ಅಂದ್ರೆ ಈ ರೆಮಿಡೀಸ್ ಫಾಲೋ ಮಾಡಿ..
ಜೇನುತುಪ್ಪ
ಒಣಕೆಮ್ಮು ಶುರುವಾದಾಗ ಪ್ರತಿದಿನ ನಾಲ್ಕರಿಂದ ಐದು ಬಾರಿ ಒಂದು ಟೇಬಲ್ ಸ್ಪೂನ್ ಅಷ್ಟು ಜೇನುತುಪ್ಪವನ್ನು ತಿನ್ನಬೇಕು.ಅದರಲ್ಲೂ ಕೂಡ ರಾತ್ರಿ ಹೊತ್ತು ಕೆಮ್ಮು ಜಾಸ್ತಿ ಆಗೋದ್ರಿಂದ ನೈಟ್ ಟೈಮ್ ಮಲಗುವುದಕ್ಕಿಂತ ಮುಂಚೆ ಒಂದು ಟೇಬಲ್ ಸ್ಪೂನ್ ಅಷ್ಟು ಜೇನುತುಪ್ಪವನ್ನು ತಿಂದು ಮಲಗುವುದು ಉತ್ತಮ. ಜೇನುತುಪ್ಪದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶ ಇರುತ್ತದೇ ಇದು ಗಂಟಲ್ಲೆನಲ್ಲಾಗಿರುವ ಇನ್ಫೆಕ್ಷನ್ ಅನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೇ. ಇದನ್ನ ನೀವು ಮಕ್ಕಳಿಗೂ ಕೂಡ ತಿನ್ನಿಸಬಹುದು ಬರಿ ಜೇನನ್ನ ತಿನ್ನೋದಕ್ಕೆ ಆಗಿಲ್ಲ ಅಂತ ಅಂದ್ರೆ ಟಿಯಲ್ಲಿ ಅಥವ ಬಿಸಿನೀರಿಗೆ ಜೇನುತುಪ್ಪ ಹಾಕಿ ಕುಡಿಬಹುದು.. ಆದರೆ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿರುವ ಮಕ್ಕಳಿಗೆ ಜೇನುತುಪ್ಪವನ್ನು ತಿನ್ನಿಸುವುದು ಒಳ್ಳೆಯದಲ್ಲ..
ಅರಿಶಿಣ ಮತ್ತು ಮೆಣಸು
ಅರಿಶಿಣದಲ್ಲಿ ಕರ್ಕ್ಯುಮಿನ್ ಅಂಶ ಇರುತ್ತದೆ ಇದು ಆಂಟಿ ಇನ್ಫ್ಲಮೇಟರಿ,ಆಂಟಿವೈರಸ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಅಂಶವನ್ನು ಹೊಂದಿರುತ್ತದೆ. ಇದು ಒಣಕೆಮ್ಮು ಸೇರಿದಂತೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ತುಂಬಾನೇ ಪ್ರಯೋಜನಕಾರಿ.ಕರಿಮೆಣಸಿನೊಂದಿಗೆ ಅರಿಶಿನವನ್ನು ಬೆರೆಸಿ ಸೇವಿಸುವುದು ಉತ್ತಮ. ಟೇಬಲ್ ಸ್ಪೂನ್ ಅಷ್ಟು ಅರಿಶಿನ ಮತ್ತು ಅರ್ಧ ಟೇಬಲ್ ಸ್ಪೂನ್ ಅಷ್ಟು ಮೆಣಸನ್ನ ಬಳಸಿ ಕಷಾಯ ಮಾಡಿಕೊಂಡು ಕುಡಿಯಬಹುದು..
ಮಸಾಲಾ ಟೀ
ಒಣ ಕೆಮ್ಮು ಶುರುವಾದಾಗ ಪ್ರತಿದಿನ ನೀವು ಎರಡು ಬಾರಿ ಮಸಾಲೆ ಟೀಯನ್ನು ಸೇವಿಸುವುದು ಉತ್ತಮ .ಇದರಲ್ಲಿ ಏಲಕ್ಕಿ ಲವಂಗ ದಂತಹ ಇಂಗ್ರಿಡಿಯಂಟ್ಸ್ ಇರುವುದರಿಂದ ಆಂಟಿಆಕ್ಸಿಡೆಂಟ್ ಅಂಶ ನಮ್ಮ ದೇಹಕ್ಕೆ ಸೇರುತ್ತದೆ ಹಾಗೂ ಕೆಮ್ಮನ್ನು ಕಡಿಮೆ ಮಾಡುತ್ತದೆ..
ಒಟ್ಟಿನಲ್ಲಿ ಕೆಮ್ಮು ಹೆಚ್ಚಾದಾಗ ಬಿಸಿನೀರನ್ನು ಕುಡಿಯುವುದು ಉತ್ತಮ.ಹಾಗೂ ಎಣ್ಣೆಯಲ್ಲಿ ಕರೆದ ಪದಾರ್ಥವನ್ನು ಸೇವಿಸಬಾರದು..ಸ್ವಚ್ಛವಾದ ಆಹಾರ ತಿನ್ನಬೇಕು..