ಕೆಲವೊಮ್ಮೆ ಕುಡುಕರು ಸೃಷ್ಠಿಸುವ ಅವಾಂತರ ಅಷ್ಟಿಷ್ಟಲ್ಲ. ಕುಡಿದ ಮತ್ತಿನಲ್ಲಿ ತಾವೇನು ಮಾಡುತ್ತಿದ್ದೇವೆ ಎಂಬ ಪ್ರಜ್ಞೆಯೇ ಇಲ್ಲದಂತೆ ಸಾಕಷ್ಟು ಮಂದಿ ಕುಡುಕರು ವರ್ತಿಸುತ್ತಾರೆ. ಇದರಿಂದ ಪರದಾಟಕ್ಕೆ ಈಡಾಗೋದು ಮಾತ್ರ ಸಾಮಾನ್ಯ ಜನರು, ಕೆಲವೊಮ್ಮೆ ಕುಡುಕರು ಮಾಡುವ ಅವಾಂತರದಿಂದ ಜನರ ಪ್ರಾಣಕ್ಕೆ ಕೂಡ ಸಂಚಕಾರ ಬಂದ ಉದಾಹರಣೆ ಕೂಡ ಇದೆ.
ಇದೀಗ ಇದಕ್ಕೆ ಪೂರಕ ಅನ್ನೋ ಹಾಗೆ ಒಂದು ಸುದ್ದಿ ಎಲ್ಲೆಡೆ ಹರಿದಾಡ್ತಾ ಇದೆ. ಈ ಸುದ್ದಿಯನ್ನ ಕೇಳಿದ್ರೆ ಅಳಬೇಕೋ ನಗಬೇಕೋ ಅನ್ನೋದನ್ನ ನೀವೆ ನಿರ್ಧರಿಸಿ. ಅಷ್ಟಕ್ಕೂ ಆಗಿದ್ದೇನು ಅಂದ್ರೆ, ಊರಿಗೆ ಹೋಗೋದಕ್ಕೆ ಎಷ್ಟು ಕಾದರೂ ಬಸ್ ಬರದೇ ಇದ್ದುದರಿಂದ ಬೇಸತ್ತ ಕುಡುಕನೊಬ್ಬ, ಬಸ್ ಸ್ಟ್ಯಾಂಡ್ನಲ್ಲಿ ನಿಂತಿದ್ದ ಬಸ್ನ್ನ ತಾನೇ ಓಡಿಸಿ ಅವಾಂತರ ಸೃಷ್ಟಿಸಿರುವ ಘಟನೆ ನಡೆದಿದೆ. ಅಷ್ಟಕ್ಕೂ ಈ ಘಟನೆ ನಡೆದಿರೋದು ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ, ತಾನೇ ಬಸ್ ಚಲಾಯಿಸಿದ ವ್ಯಕ್ತಿ ಬಸ್ನ್ನು ಡಿವೈಡರ್ ಮೇಲೆ ಹತ್ತಿಸಿದ್ದಾನೆಮ ಅಪಘಾತವನ್ನ ಕೂಡ ಮಾಡಿದ್ದಾನೆ, ಆದ್ರೆ ಅದೃಷ್ಟವಷತ್ ಯಾರಿಗೂ ಏನು ಆಗಲಿಲ್ಲ ಅನ್ನೋದು ಖಚಿತವಾಗಿದೆ.

ಕರಂಜಿ ಗ್ರಾಮದ ಯಶಪ್ಪ ಸೂರ್ಯವಂಶಿ ಅನ್ನೋ ಪುಣ್ಯಾತ್ಮನೇ ಬಸ್ ಓಡಿಸಿದಾತ. ಈತ ಬೆಳಗ್ಗೆಯಿಂದ ತನ್ನ ಊರಿಗೆ ಹೋಗೋದಕ್ಕೆ ಮದ್ಯಪಾನ ಮಾಡಿ ಬಸ್ಗಾಗಿ ಕಾಯುತ್ತಿದ್ದ. ಆದ್ರೆ ಬಸ್ ಬಂದೇ ಇಲ್ಲ. ಇದೇ ವೇಳೆ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಚಾಲಕ ಹಾಗೂ ನಿರ್ವಾಹಕರು ಹೋಗಿದ್ದಾರೆ. ಇದೇ ವೇಳೆ ಯಶಪ್ಪ ಬಸ್ನ್ನು ತಾನೇ ಡ್ರೈವ್ ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ ಆತ ಬಸ್ ಚಲಾಯಿಸಿದ್ದಾನೆ.
ಹೀಗೆ ಬಸ್ ಚಲಾಯಿಸೋದಕ್ಕೆ ಆರಂಭಿಸಿದ ಆತ ಮೊದಲು ಕ್ರೂಸರ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅನಂತರ ಡಿವೈಡರ್ಗೆ ಗುದ್ದಿದ್ದಾನೆ. ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ. ಆರೋಪಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾನೆಂದು ಗೊತ್ತಾಗಿದೆ, ಇನ್ನು ಸದ್ಯದಕ್ಕೆ ಈತನನ್ನ ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರು ಈತನಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ
ಒಟ್ಟಾರೆಯಾಗಿ ಈ ಕುಡುಕ ಮಹಾಷಯ ಸೃಷ್ಠಿಸಿದ ಅವಾಂತರದಿಂದ ಬೆಚ್ಚಿಬಿದ್ದಿರುವ ನಾಗರಿಕರು, ಈತನಿಗೆ ಸರಿಯಾದ ಶಿಕ್ಷೆಯನ್ನ ವಿಧಿಸುವಂತೆ ಪೊಲೀಸರ ಬಳಿ ಮನವಿಯನ್ನ ಮಾಡುತ್ತಿದ್ದಾರೆ.