ಭಾರತದಲ್ಲಿ ಸೂಪರ್ ಹೀರೋ (super hero) ಚಿತ್ರಗಳು (movies) ಸಕ್ಸಸ್ (success) ಕಂಡಿದ್ದು ಕಡಿಮೆ, ಆದ್ರೆ ಕಳೆದ 2 ದಶಕಗಳ ಹಿಂದೆ ಬಂದಿದ್ದ ಸೂಪರ್ ಹೀರೋ ಧಾರವಾಹಿ (serial) ಇಂದಿದೂ ಸಾಕಷ್ಟು ಮಂದಿಗೆ ಫೇವರಿಟ್ (favourite) ಆಗಿದೆ. ಇವತ್ತಿಗೆ ಸೂಪರ್ ಮ್ಯಾನ್ (superman), ಐರನ್ ಮ್ಯಾನ್(ironman) , ಬ್ಯಾಟ್ಮ್ಯಾನ್(batman), ಸೇರಿದ ಹಾಗೆ ವಿವಿಧ ಸೂಪರ್ ಹೀರೋ ಪಾತ್ರಗಳು ಜಗತ್ತಿನ ಸಿನಿ ಲೋಕವನ್ನೇ ಆಳುತ್ತಿವೆ. ಆದ್ರೆ ಭಾರತದ ಆ ಸೂಪರ್ ಹೀರೋ ಕತೆ ಮಾತ್ರ ನೆನೆಗುದಿಗೆ ಬಿದ್ದಿತ್ತು. ಆದ್ರೆ ಈಗ ಅದಕ್ಕೆ ಜೀವ ಬಂದಿದೆ.
ಹೌದು.. ಭಾರತೀಯ ಕಿರುತೆರೆಯಲ್ಲಿ ಮಾಲ್ಗುಡಿ ಡೇಸ್ನ ನಂತರ ಬಹುದೊಡ್ಡ ಮಟ್ಟಿಗೆ ಸಂಚಲನ ಮೂಡಿಸಿದ್ದ ಧಾರವಾಹಿ ಅಂದ್ರೆ ಅದು ಶಕ್ತಿಮಾನ್, ಈ ಧಾರವಾಹಿ ಭಾರತದ ಮೊದಲ ಸೂಪರ್ ಹಿರೋ ಲೈವ್ ಆಕ್ಷನ್ ಧಾರವಾಹಿ ಆಗಿತ್ತು, ಇನ್ನು ಈ ಧಾರವಾಹಿ ಅಂದಿನ ಕಾಲದಲ್ಲಿ ಕೇವಲ ಮಕ್ಕಳಿಗೆ ಮಾತ್ರ ಇಷ್ಟ ಆಗಿರಲಿಲ್ಲ. ಈ ಶಕ್ತಿಮಾನ್ ಧಾರವಾಹಿಯಲ್ಲಿನ ಕತೆ ಸಣ್ಣವರಿಂದ ಹಿರಿಯರವರೆಗೆ ಕೂಡ ಸಾಕಷ್ಟು ಮಂದಿ ಈ ಧಾರವಾಹಿಯನ್ನ ಇಷ್ಟ ಪಟ್ಟು ನೋಡುತ್ತಿದ್ರು, ಇದೇ ಕಾರಣಕ್ಕೆ ಅಂದು ಈ ಶಕ್ತಿಮಾನ್ ಧಾರವಾಹಿ 1997 ರಿಂದ 2005 ರವರೆ 8ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಲಾಗಿತ್ತು.
ಇನ್ನು ಈಗ ಈ ಕತೆಯನ್ನ ಸೋನಿ ಪಿಕ್ಚರ್ಸ್ ಕೊಂಡುಕೊಂಡಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಕತೆಯನ್ನ ಸಿನಿಮಾ ಮಾಡಲು ಹೊರಟಿದೆ. ಈಗಾಗ್ಲೆ ಸ್ಪೈಡರ್ ಮ್ಯಾನ್ ಸರಣಿಯ ಸೂಪರ್ ಹೀರೋ ಲೈವ್ ಆಕ್ಷನ್ ಸಿನಿಮಾಗಳನ್ನ ಮಾಡಿರುವ ಸೋನಿ, ಬಹುದೊಡ್ಡ ಯಶಸ್ಸನ್ನ ಕೂಡ ಕಂಡಿತ್ತು. ಇದೀಗ ಇದೇ ಕಾರಣಕ್ಕೆ ಸೂಪರ್ ಹಿರೋ ಚಿತ್ರಗಳತ್ತ ಸೋನಿ ಮುಖ ಮಾಡಿರೋದು ಮಾತ್ರವಲ್ಲ ಪ್ರಮುಖ ಸೂಪರ್ ಹಿರೋ ಕತೆಗಳನ್ನ ಸಿನಿಮಾ ಮಾಡೋದಕ್ಕೆ ಹೊರಟಿದೆ. ಹಾಗಾಗಿ ಈ ಸಿನಿಮಾ ಕೂಡ ಸೋನಿಗೆ ಬಹುದೊಡ್ಡ ಯಶಸ್ಸು ತಂದುಕೊಡಲಿದೆ ಅಂತ ಹೇಳಲಾಗ್ತಾ ಇದೆ.
ಇನ್ನು ಸಾಕಷ್ಟು ದಿನಗಳಿಂದ ಕೇಳಿ ಬಂದಿರುವ ಮಾತು ಅಂದ್ರೆ ಅದು ಶಕ್ತಿಮಾನ್ ಸಿನಿಮಾ ತಯಾರಿಗೆ ವಿಳಂಬವಾಗ್ತಾ ಇದೆ ಅಂತ. ಇದೀಗ ಶಕ್ತಿಮಾನ್’ ಸಿನಿಮಾ ಸೆಟ್ಟೇರಲು ವಿಳಂಬ ಆಗುತ್ತಿರೋದಕ್ಕೆ ಕಾರಣ ಏನು ಅನ್ನೋದನ್ನ ಮುಕೇಶ್ ಖನ್ನಾ ತಿಳಿಸಿದ್ದಾರೆ. ಯೂಟ್ಯೂಬ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಸ್ವತಃ ಮುಕೇಶ್ ಖನ್ನಾ ಅವರೇ ತಿಳಿಸಿದ್ದಾರೆ.
ಈಗಾಗ್ಲೆ ಈ ಚಿತ್ರ ನಿರ್ಮಾಣದ ‘ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಇದು ತುಂಬ ದೊಡ್ಡ ಸಿನಿಮಾ ಆಗಲಿದೆ. ಇದರ ಬಜೆಟ್ 200-300 ಕೋಟಿ ರೂಪಾಯಿ. ‘ಸ್ಪೈಡರ್ ಮ್ಯಾನ್’ ಸಿನಿಮಾ ಮಾಡಿದ್ದ ಸೋನಿ ಪಿಕ್ಚರ್ಸ್ ಸಂಸ್ಥೆಯವರು ‘ಶಕ್ತಿಮಾನ್’ ಸಿನಿಮಾ ಮಾಡಲಿದ್ದಾರೆ. ಆದರೆ ಸೆಟ್ಟೇರುವುದು ತಡವಾಗುತ್ತಿದೆ. ಮೊದಲು ಕೊರೊನಾ ಬಂತು. ಅದರಿಂದ ವಿಳಂಬ ಆಯಿತು’ ಅಂತ ಮುಕೇಶ್ ಖನ್ನಾ ಆದಷ್ಟು ಬೇಗ ಈ ಚಿತ್ರ ಸೆಟ್ಟೇರಲಿದೆ ಅಂತ ಮಾಹಿತಿ ನೀಡಿದ್ದಾರೆ..