ನಟ ಶಾರೂಖ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನ ಮುಂಬೈ ಸೆಷನ್ಸ್ ಕೋರ್ಟ್ ವಜಾ ಮಾಡಿದೆ. ಈ ಮೂಲಕ ಆರ್ಯನ್ ಖಾನ್ ಆರ್ಥರ್ ಜೈಲಿನಲ್ಲೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಮಗನನ್ನು ಹೊರತರಲು ಇನ್ಯಾವ ಪ್ರಯತ್ನ ಮಾಡಬೇಕೋ ಅನ್ನೋ ಚಿಂತೆ ಈಗ ಕಿಂಗ್ ಖಾನ್‌ದ್ದಾಗಿದೆ.
ಮುಂಬೈನ ಐಷಾರಾಮಿ ಕ್ರೂಸ್‌ನಲ್ಲಿ ಡ್ರಗ್ ಕೇಸ್‌ಗೆ ಸಂಬಂಧಿಸಿದಂತೆ ಆರ್ಯನ್ ಖಾನ್ ಮತ್ತಷ್ಟು ದಿನ ಜೈಲಿನಲ್ಲೇ ಕಳೆಯಬೇಕಾಗಿ ಬಂದಿದೆ. ಆರ್ಯನ್ ಪರ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನ ಮುಂಬೈ ಸೆಷನ್ಸ್ ಕೋರ್ಟ್ ವಜಾ ಮಾಡಿದೆ. ಹೀಗಾಗಿ ಆರ್ಥರ್ ರೋಡ್ ಜೈಲಿನಲ್ಲಿರುವ ಆರ್ಯನ್ ಖಾನ್ ಸದ್ಯಕ್ಕೆ ರಿಲೀಸ್ ಆಗದ ಸ್ಥಿತಿ ಏರ್ಪಟ್ಟಿದೆ.
ಸೆಷನ್ಸ್ ಕೋರ್ಟ್‌ನಲ್ಲಿ ಸದ್ಯ ಜಾಮೀನು ಅರ್ಜಿ ನಿರಾಕರಿಸಿರುವುದರಿಂದ, ಖಾನ್ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಅಕ್ಟೋಬರ್ 26ನೇ ತಾರೀಕು ಮುಂಬೈ ಹೈಕೋರ್ಟ್ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನ ವಿಚಾರಣೆ ನಡೆಸಲಿದೆ. ಈ ಹಿಂದೆ ಮುಂಬೈ ಸೆಷನ್ಸ್ ಕೋರ್ಟ್ ಜಾಮೀನು ನಿರಾಕರಣೆಗೆ ನೀಡಿದ್ದ ಕಾರಣಗಳನ್ನು ಹೈಕೋರ್ಟ್ ಪರಿಶೀಲಿಸಲಿದೆ.
ಜಾಮೀನು ನಿರಾಕರಿಸಲು ಕೋರ್ಟ್ ನೀಡಿದ್ದ ಕಾರಣಗಳು
1. ಆರ್ಯನ್‌ಗೆ ಅಂತರಾಷ್ಟ್ರೀಯ ಡ್ರಗ್ ಜಾಲದ ವ್ಯಾಪಾರಿಗಳೊಂದಿಗೆ ಸಂಪರ್ಕವಿದೆ
2. ಆರ್ಯನ್ ಖಾನ್ ಸಾಕ್ಷ್ಯವನ್ನು ತಿರುಚುವ ಎಲ್ಲ ಅವಕಾಶಗಳಿವೆ.
3. ಚಾಟ್‌ಗಳು ಮಾದಕವಸ್ತು ಚಟುವಟಿಕೆಗಳಲ್ಲಿ ತೊಡಗಿದ್ದನ್ನು ಪ್ರತಿಬಿಂಬಿಸುತ್ತದೆ
4. ಬಂಧಿತರಾದ ಪ್ರತಿಯೊಬ್ಬರೂ ವಶಪಡಿಸಿಕೊಂಡ ಮಾದಕದ್ರವ್ಯಗಳಿಗೆ ಹೊಣೆಗಾರರು
5. ಆರ್ಯನ್ ಖಾನ್‌ಗೆ ಮಾದಕ ದ್ರವ್ಯ ವ್ಯವಹರಿಸುವವರ ವ್ಯಕ್ತಿಗಳೊಂದಿಗೆ ಸಂಪರ್ಕ
ಕೇಸ್ ವಿಚಾರಣೆ ವೇಳೆ ಎನ್ಸಿಬಿ ಟೀಮ್ ಕೋರ್ಟ್ಗೆ ವಾಟ್ಸ್‌ಪ್ ಚಾಟ್‌ನ ಡಿಟೇಲ್ಸ್ ಸಲ್ಲಿಸಿತ್ತು. ಅದರಲ್ಲಿ ಆರ್ಯನ್ ತನ್ನೊಬ್ಬ ಸಹನಟಿ ಜೊತೆ ಚಾಟ್ ಮಾಡಿರೋ ವಿವರಗಳಿದ್ದವು. ಅದರಲ್ಲೂ ಡ್ರಗ್ಸ್‌ಗೆ ಸಂಬಂಧಿಸಿದ ಮಾತುಕತೆ ನಡೆದಿರೋದು ಅಚ್ಚರಿ.
ಕೋರ್ಟ್‌ಗೆ ‘ಡ್ರಗ್ಸ್‘ ಚಾಟ್!
ಕೋರ್ಟ್ಗೆ ವಾಟ್ಸ್‌ಪ್ ಚಾಟ್ ಸಲ್ಲಿಸಿದ ಎನ್ಸಿಬಿ ಡ್ರಗ್ಸ್ಗೆ ಸಂಬಂಧಿಸಿಂತೆ ವಾಟ್ಸ್‌ಪ್‌ನಲ್ಲಿ ಮಾತುಕತೆ ಆರ್ಯನ್ ಖಾನ್-ನಟಿಯೋರ್ವಳ ಜೊತೆ ಚಾಟಿಂಗ್ ಚೊಚ್ಚಲ ಸಿನಿಮಾ ಮಾಡ್ತಿರೋ ನಟಿಯೊಂದಿಗೆ ಚಾಟಿಂಗ್ ಡ್ರಗ್ಸ್ ವಿಚಾರವಾಗಿ ಇಬ್ಬರು ಚಾಟ್ ಮಾಡಿರೋದು ಬಹಿರಂಗ ಡ್ರಗ್ ಪಾರ್ಟಿ ಕೇಸ್ಗೆ ಸಂಬಂಧಿಸಿದಂತೆ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ವಾಟ್ಸ್‌ಪ್ ಚಾಟ್ ಡಿಟೇಲ್ಸ್ ಅನ್ನು ಎನ್ ಸಿ ಬಿ ಅಧಿಕಾರಿಗಳು ಕೋರ್ಟ್ಗೆ ಸಲ್ಲಿಸಿದ್ದಾರೆ.
ಆರೋಪಿ ಆರ್ಯನ್ ಖಾನ್ ನಟಿಯೊರ್ವರ ಜೊತೆ ಡ್ರಗ್ಸ್ಗೆ ಸಂಬಂಧಿಸಿಂತೆ ವಾಟ್ಸ್ ಆ್ಯಪ್ನಲ್ಲಿ ಚಾಟ್ ಮಾಡಿರುವ ವಿಷಯ ತನಿಖೆ ವೇಳೆ ಬಹಿರಂಗವಾಗಿದೆ. ಬಾಲಿವುಡ್ನಲ್ಲಿ ಚೊಚ್ಚಲ ಸಿನಿಮಾ ಮಾಡ್ತಿರೋ ನಟಿಯೊಂದಿಗೆ ಆರ್ಯನ್ ಖಾನ್ ಡ್ರಗ್ಸ್ ಕುರಿತು ಚಾಟ್ ಮಾಡಿದ್ದಾರೆ ಎನ್ನಲಾಗ್ತಿದೆ.