ಬೆಳಗಾವಿ: ಜಗತ್ತಿನ ಯಾವುದೇ ಮೂಲೆಗೆ ಹೋದರೂ ಸಿವಿಲ್ ಇಂಜಿನಿಯರಿಂಗ್ಗೆ ಮಹತ್ವದ ಸ್ಥಾನವಿದೆ.ಹಾಗಾಗಿ, ಸಿವಿಲ್ ಇಂಜಿನಿಯರಿಂಗ್ ಎಂಬುದು ಮದರ್ ಆಫ್ ಇಂಜಿನಿಯರ್ಸ್ ಎಂದು ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ, ಪದ್ಮಭೂಷಣ ಪುರಸ್ಕೃತೆ ಡಾ.ಸುಧಾಮೂರ್ತಿ ಹೇಳಿದರು.
ಬೆಳಗಾವಿಯ ಕೆಎಲ್ಇ ಸಂಸ್ಥೆಯ ಜೀರಗೆ ಸಭಾಭವನದಲ್ಲಿ ನಡೆದ ‘ದಿ ಇನಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್’ ವತಿಯಿಂದ ಹಮ್ಮಿಕೊಂಡಿದ್ದ ಸಿವಿಲ್ ಇಂಜಿನಿಯರ್ಸ್ 38ನೇ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಿವಿಲ್ ಇಂಜಿನಿಯರಿಂಗ್ ಕುರಿತು ಬಣ್ಣಿಸಿದರು.
“ಹಣವೇ ಎಲ್ಲ ಖುಷಿ ಕೊಡುತ್ತದೆ ಎಂಬುದು ಸರಿಯಲ್ಲ. ಹಾಗಂತ ಹಣದಿಂದ ಖುಷಿ ಸಿಗಲ್ಲ ಎಂದೇನಿಲ್ಲ. ಆದರೆ, ಹಣಕ್ಕಿಂತ ಹೆಚ್ಚಾಗಿ ಕಾಂಬಿನೇಷನ್ ಬೇಕು. ವೃತ್ತಿ ನೈತಿಕತೆ ಜೊತೆಗೆ ಪರಿಶ್ರಮ ಬೇಕು. ಹೀಗಿದ್ದಾಗ ಮಾತ್ರ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು. ಅದರಿಂದ ಯಶಸ್ಸು ಲಭಿಸುವುದು ಖಂಡಿತ” ಎಂದು ನುಡಿದರು.