ಬೆಂಗಳೂರು(Bangalore) ಗ್ರಾಮಾಂತರ(Rural) ಲೋಕಸಭಾ(LokaSaba) ಕ್ಷೇತ್ರದಲ್ಲಿ ಡಿ.ಕೆ ಸುರೇಶ್(DKSuresh) ಕಾಂಗ್ರೆಸ್ ಸಂಸದರಾಗಿದ್ದಾರೆ. ಈ ಬಾರಿಯೂ ಕಾಂಗ್ರೆಸ್ನಿಂದ ಡಿ.ಕೆ ಸುರೇಶ್ ಅಭ್ಯರ್ಥಿ ಆಗಿದ್ದಾರೆ. ಇನ್ನು ಬಿಜೆಪಿ – ಜೆಡಿಎಸ್(BJP-JDS) ಮೈತ್ರಿ ಅಭ್ಯರ್ಥಿ ಆಗಿ ಜಯದೇವ ಹೃದ್ರೋಗ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ ಮಂಜುನಾಥ್ ಅಭ್ಯರ್ಥಿ ಆಗುವುದು ಬಹುತೇಕ ಖಚಿತ ಆಗಿದೆ. ಆದರೆ ಡಿ.ಕೆ ಸುರೇಶ್ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್ ಕ್ಷೇತ್ರದಲ್ಲಿ ಪ್ರಭಾವ ಹೆಚ್ಚಾಗಿದ್ದು, ಡಾ ಮಂಜುನಾಥ್(Dr Manjunath) ಅವರನ್ನು ಹರಕೆಯ ಕುರಿ ಮಾಡಲಾಗ್ತಿದೆ. ಡಿ.ಕೆ ಸುರೇಶ್ ಅವರನ್ನು ಸೋಲಿಸುವ ಆಸೆಯಲ್ಲಿ ಡಾ ಮಂಜುನಾಥ್ ಅವರನ್ನು ರಾಜಕೀಯಕ್ಕೆ ಕರೆತಂದು ಸೋಲಿಸಲಾಗುತ್ತದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಆದರೆ ಗೆಲುವು ಶತಸಿದ್ಧ. ಸೋಮವಾರ ನಡೆದ ನಾಯಕರ ಸಭೆಯಲ್ಲಿ ಡಾ ಮಂಜುನಾಥ್ ಅಭ್ಯರ್ಥಿ ಅನ್ನೋದನ್ನು ಖಚಿತವಾಗಿ ತಿಳಿಸಿದ್ದಾರೆ. ಡಿ.ಕೆ ಸುರೇಶ್ರನ್ನು ಸೋಲಿಸಿಯೇ ತೀರುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ(Kumaraswamy) ಶಪಥ ಮಾಡಿದ್ದಾರೆ ಎನ್ನಲಾಗ್ತಿದೆ.

ಡಾ. ಮಂಜುನಾಥ್ ಗೆಲುವು ಸಾಧ್ಯನಾ..? ಇಲ್ವಾ..?
ಡಾ ಮಂಜುನಾಥ್ ವೈದ್ಯಕೀಯ ಸೇವೆಯಲ್ಲಿ ಮಾಡಿರುವ ಕೆಲಸಗಳಿಂದಲೇ ಜನಜನಿತರು. ಬೆಂಗಳೂರು ಹಾಗು ಹಳೇ ಮೈಸೂರು ಭಾಗದಲ್ಲಿ ಡಾ ಮಂಜುನಾಥ್ ಹೆಸರು ಖ್ಯಾತಿ ಪಡೆದಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ರಾಜಕಾರಣದಲ್ಲಿ ಜನರನ್ನು ಯಾವ ಪ್ರಮಾಣದಲ್ಲಿ ಸೆಳೆಯುತ್ತಾರೆ ಎನ್ನುವುದರ ಮೇಲೆ ಸೋಲು ಗೆಲುವು ನಿರ್ಧಾರ ಆಗಲಿದೆ. ಇನ್ನು ಡಿ.ಕೆ ಸುರೇಶ್ ಹಾಗು ಡಿ.ಕೆ ಶಿವಕುಮಾರ್ ರಾಜಕೀಯ ಪ್ರಭಾವ ಹೆಚ್ಚಾಗಿದ್ದು, ಈ ಬಾರಿ ಸೋಲಿನ ಭೀತಿ ಕಾಡುತ್ತಿದೆ. ಇದೇ ಕಾರಣಕ್ಕೆ ಕ್ಷೇತ್ರದಲ್ಲಿ ಈಗಾಗಲೇ ಅಬ್ಬರದ ಪ್ರಚಾರ ಮಾಡುತ್ತಾ, ಮತ್ತೆ ಗೆಲ್ಲಿಸಬೇಕು ಎಂದು ಕರೆ ನೀಡುತ್ತಿದ್ದಾರೆ. ಜೊತೆಗೆ ಮತದಾರರ ಓಲೈಕೆ ಮಾಡಲು ವಿಧಾನಸಭಾವಾರು ಕುಕ್ಕರ್ ಸೇರಿದಂತೆ ಹಿಲವಾರು ಗಿಫ್ಟ್ಗಳನ್ನು ಹಂಚಲಾಗ್ತಿದೆ. ಇನ್ನು ಮೋದಿ ಅಲೆ ಜೊತೆಗೆ ಡಾ ಮಂಜುನಾಥ್ ಅಭ್ಯರ್ಥಿ ಆದರೆ ಡಿ.ಕೆ ಸುರೇಶ್ಗೆ ಸೋಲು ಖಚಿತ ಅನ್ನೋ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.

ಡಿಕೆಸು, ಡಿಕೆಶಿ ವಿರುದ್ಧ ಕುಮಾರಸ್ವಾಮಿ ಕೆಂಡ ಯಾಕೆ..?
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅಖಾಡಕ್ಕೆ ಇಳಿದಿದ್ದರು. ಕಾಂಗ್ರೆಸ್ ನಾಯಕರಾದ ಡಿ.ಕೆ ಶಿವಕುಮಾರ್ ಹಾಗು ಸಿದ್ದರಾಮಯ್ಯ ಪ್ರಚಾರ ಮಾಡಿದರು. ಆದರೆ ಪರೋಕ್ಷವಾಗಿ ಸುಮಲತಾ ಬೆಂಬಲಿಸಿ ನಿಖಿಲ್ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣ ಎನ್ನುವುದು ಕುಮಾರಸ್ವಾಮಿ ಆರೋಪ. ಇದಕ್ಕೆ ಪುಷ್ಟಿ ನೀಡುವಂತೆ ಸಿಎಂ ಸಿದ್ದರಾಮಯ್ಯ, ಮೊನ್ನೆ ಮೊನ್ನೆ ಸುಮಲತಾ ಕಳೆದ ಬಾರಿ ಕಾಂಗ್ರೆಸ್ ಸಪೋರ್ಟ್ನಿಂದಲೇ ಗೆಲುವು ಕಂಡರು ಎಂದಿದ್ದು, ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಆಗಿತ್ತು. ಅಷ್ಟು ಮಾತ್ರವಲ್ಲದೆ ಕಳೆದ ಬಾರಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿದಾಗ ಇಕ್ಬಾಲ್ ಹುಸೇನ್ ಗೆಲ್ಲಿಸುವ ಮೂಲಕ ನಿಖಿಲ್ ಕುಮಾರಸ್ವಾಮಿಗೆ ಮತ್ತೆ ಸೋಲುಣಿಸಿದ್ದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ನಿಗಿನಿಗಿ ಕೆಂಡವಾಗಿದ್ದಾರೆ.
ಡಾ. ಮಂಜುನಾಥ್ ಆಯ್ಕೆ ದೇಶಕ್ಕೆ ಹಿತ ಯಾಕೆ..?
ಸಂಸದ ಡಿ.ಕೆ ಸುರೇಶ್ ಹಾಗು ಡಾ ಮಜುನಾಥ್ ಅವರನ್ನು ರಾಜಕೀಯ ಶಕ್ತಿಯಿಂದ ನೋಡಿದಾಗ ಡಿ.ಕೆ ಸುರೇಶ್ ಮೇಲುಗೈ ಸಾಧಿಸುತ್ತಾರೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಡಿ.ಕೆ ಸುರೇಶ್ಗೆ ಹೋಲಿಸಿದಾಗ ಡಾ ಮಂಜುನಾಥ್ ಉತ್ತಮ ಅಭ್ಯರ್ಥಿ ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ರಾಷ್ಟ್ರಾಧ್ಯಂತ ಉತ್ತಮ ಕೆಲಸಗಳನ್ನು ಮಾಡಲಿದ್ದಾರೆ ಎನ್ನುವುದು ಸತ್ಯವೇ ಸರಿ. ರಾಜ್ಯದಲ್ಲಿ ಜಯದೇವ ಸಂಸ್ಥೆಯಲ್ಲಿ ಬಡವರಿಗೂ ಉತ್ತಮ ಚಿಕಿತ್ಸೆ ನೀಡುವಂತೆ ಮಾಡಿರುವುದು ಸಣ್ಣ ಸಾಧನೆಯೇನಲ್ಲ. ಆದರೆ ಮೋದಿ ಅಲೆ ಹಾಗು ಜೆಡಿಎಸ್ ಶಕ್ತಿ ಎರಡೂ ಸೇರಿದ್ರೆ ಗೆದ್ದು ಬೀಗುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಭಯ ಕಾಡ್ತಿರೋದು ಯೋಗೇಶ್ವರ್ ಡಬಲ್ ಗೇಮ್ ಆಡ್ತಾರಾ..? ಅನ್ನೋದು.

ಯೋಗೇಶ್ವರ್ ಮೇಲೆ ಭಯ ಇರೋದು ಯಾಕೆ..?
ಸಿಪಿ ಯೋಗೇಶ್ವರ್ ಕೂಡ ಮಂಗಳವಾರ ನಡೆದ ಸಭೆಯಲ್ಲಿ ಡಾ ಮಂಜುನಾಥ್ ಅವರೇ ಅಭ್ಯರ್ಥಿ ಎಂದು ಬಹಿರಂಗವಾಗಿ ಹೇಳಿದ್ದಾರೆ. ಆದರೆ ಯೋಗೇಶ್ವರ್ ಪೂರ್ಣ ಮನಸ್ಸಿನಿಂದ ಬೆಂಬಲಿಸ್ತಾರಾ ಅನ್ನೋ ಅನುಮಾನ ಕಾಡುವುದಕ್ಕೆ ಪ್ರಮುಖ ಕಾರಣ ಅಂದ್ರೆ ಕಳೆದ ಕೆಲವು ದಿನಗಳ ಹಿಂದೆ ನಿಶಾ ಯೋಗೇಶ್ವರ್ ಡಿ.ಕೆ ಸುರೇಶ್ ಜೊತೆಗೆ ಕಾಣಿಸಿಕೊಂಡು ಚರ್ಚೆ ನಡೆಸಿದ್ದರು. ರಘುನಂದನ್ ರಾಮಣ್ಣ ನಿಗಮ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ನಡೆ ಬಗ್ಗೆ ಅನುಮಾನಗಳು ಹರಿದಾಡುತ್ತಿದ್ದು, ಹರಕೆ ಕುರಿ ಮಾಡಿದರೆ ಡಾ ಮಂಜುನಾಥ್ ರಾಜಕೀಯದ ಬಗ್ಗೆ ಬೇಸರಗೊಳ್ಳುವಂತೆ ಮಾಡುವುದು ಖಚಿತ ಎನ್ನಬಹುದು.
#DrCNmanjunath #JayadevaHospital #Lokasaba2024 #BJPJDS #DKShivakumar #DKSuresh






