ಕ್ಯಾನ್ಸರ್ ಅಪಾಯದ ಹಿನ್ನೆಲೆಯಲ್ಲಿ ಡವ್ ಸೇರಿದಂತೆ ಡ್ರೈ ಶಾಂಪೂಗಳ ಉತ್ಪನ್ನಗಳನ್ನು ಯೂನಿಲೆವೆರ್ ಕಂಪನಿ ವಾಪಸ್ ಪಡೆದಿದೆ.
ಡ್ರೈ ಶಾಂಪೂಗಳ ಉತ್ಪನ್ನಕ್ಕಾಗಿ ಬಳಸುವ ಬೆನ್ಜೆನ್ ರಾಸಾಯನಿಕ ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದು ಸಂಶೋಧನೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಡವ್ ಹಾಗೂ ಇತರೆ ಡ್ರೈ ಶಾಂಪೂಗಳನ್ನು ವಾಪಸ್ ಪಡೆದಿದೆ.
ನೆಕ್ಸಾಸ್, ಟ್ರೆಸ್ಸೆಮೆ ಮತ್ತು ಟಿಗಿ ಮುಂತಾದ ರಾಸಾಯನಿಕ ಬಳಸಿ ತಯಾರಿಸಲಾದ ರೊಕೊಲಿಕ್ ಮತ್ತು ಬೆಡ್ ಹೆಡ್ ಡ್ರೈ ಶಾಂಪೂಗಳನ್ನು ಕೂಡ ವಾಪಸ್ ಪಡೆಯಲಾಗಿದೆ.
ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ವೆಬ್ ಸೈಟ್ ನಲ್ಲಿ ಈ ವಿಷಯವನ್ನು ಪ್ರಕಟಿಸಲಾಗಿದ್ದು, ಪಿ ಅಂಡ್ ಜಿ ಪರೀಕ್ಷೆಯಲ್ಲಿ ಸ್ಪ್ರೈ ಅಥವಾ ಡ್ರೈ ಶಾಂಪೂಗಳಲ್ಲಿ ಕ್ಯಾನ್ಸರ್ ಸೇರಿದಂತೆ ಅನಾರೋಗ್ಯಕ್ಕೆ ಕಾರಣವಾಗುವ ರಾಸಯನಿಕ ಪತ್ತೆ ಆಗುತ್ತಿರುವುದು ಇದೇ ಮೊದಲಲ್ಲ.