ಸಿಲಿಕಾನ್ ಸಿಟಿಯ ಔಟರ್ ರಿಂಗ್ ರೋಡ್ ಭಾಗದಲ್ಲಿ ಹೆಚ್ಚು ಮಳೆ ಬಿದ್ದ ಪರಿಣಾಮ ಜನರು ತೊಂದರೆ ಅನುಭವಿಸುವ ಸ್ಥಿತಿ ಎದುರಾಯ್ತು. ಹೀಗಾಗಿ ಐಟಿ ಕಂಪನಿಗಳು ಪಾಲಿಕೆ ವಿರುದ್ಧ ತಿರುಗಿ ಬಿದ್ದಿದ್ದು, ನಮಗೆ ಬಿಬಿಎಂಪಿ ಬೇಡ ಎಂದು ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ.
ಐಟಿಬಿಟಿ ಸಚಿವ ಡಾ.ಅಶ್ವಥ್ ನಾರಾಯಣ್‌ಗೆ ಪತ್ರ ಬರೆದ ORRCA
ಬರೀ ಒಂದು ಮಳೆಗೆ ಔಟರ್ ರಿಂಗ್ ರೋಡ್ ಭಾಗದ ಜನರ ಜೀವನ ಬೀದಿಗೆ ಬಂದಿತ್ತು. ಇದರ ಜೊತೆಗೆ ಐಟಿ ಕಂಪನಿಗಳಿಗೂ ಕೂಡಾ ಭಾರೀ ಹೊಡೆತ ಬಿತ್ತು. ಇದರಿಂದ ಐಟಿ ಕಂಪನಿಗಳಿಗೆ ನಷ್ಟ ಕೂಡಾ ಉಂಟಾಗಿತ್ತು. ಹೀಗಾಗಿ ಪಾಲಿಕೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಅಂತ ಆಕ್ರೋಶ ಹೊರಹಾಕಿದೆ. ನಮಗೆ ಬಿಬಿಎಂಪಿ ಬೇಡ ಪ್ರತ್ಯೇಕ ಮುನ್ಸಿಪಲ್ ವಲಯ ಸೇರಿದಂತೆ 13 ಬೇಡಿಕೆಗಳನ್ನಿಟ್ಟು ಔಟರ್ ರಿಂಗ್ ರೋಡ್ ಕಂಪನಿಗಳ ಸಂಘ ಐಟಿಬಿಟಿ ಸಚಿವ ಡಾ. ಅಶ್ವಥ್ ನಾರಾಯಣ್ ಗೆ ಪತ್ರ ಬರೆದಿದೆ.
ಬಿಬಿಎಂಪಿಯಿಂದ ಸರಿಯಾಗಿ ಕೆಲಸ ಆಗ್ತಿಲ್ಲ. ಪ್ರತ್ಯೇಕ ಮುನ್ಸಿಪಲ್ ವಲಯ ಮಾಡಿ. ಔಟರ್ ರಿಂಗ್ ರೋಡ್ ನ ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಕೆಆರ್ ಪುರ ಜಂಕ್ಷನ್ ವರೆಗೆ ಪ್ರತ್ಯೇಕ ಮುನ್ಸಿಪಲ್ ವಲಯ ಮಾಡಿ, ಔಟರ್ ರಿಂಗ್ ರೋಡ್ ನ 17 ಕಿಲೋಮೀಟರ್ ಪ್ರದೇಶವನ್ನು ಪ್ರತ್ಯೇಕ ಮುನ್ಸಿಪಲ್ ವಲಯ ಎಂದು ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಡ ಹಾಕ್ತಿದೆ.
ORRCA ಸರ್ಕಾರದ ಮುಂದೆ ಇಟ್ಟಿರುವ ಬೇಡಿಕೆಗಳೇನು?
- ಇಕೋಸ್ಪೇಸ್ ರಸ್ತೆಯ ಸಮಸ್ಯೆಗೆ ಕೂಡಲೇ ಪರಿಹಾರ ನೀಡಬೇಕು
- ಔಟರ್ ರಿಂಗ್ ರೋಡ್ ಮೆಟ್ರೊ ಕಾಮಗಾರಿ ಬೇಗ ಮುಗಿಸಬೇಕು
- 6 ತಿಂಗಳಲ್ಲಿ ರಸ್ತೆಗಳ ಕಾಮಗಾರಿ ಆಗಬೇಕು
- ಮೆಟ್ರೋ ಕಾಮಗಾರಿಯಿಂದ ಆಗುತ್ತಿರೋ ಟ್ರಾಫಿಕ್ ಸಮಸ್ಯೆ ಬಗೆಹರಿಸಬೇಕು
- ಔಟರ್ ರಿಂಗ್ ರೋಡ್‌ನಲ್ಲಿ ಹೈ ಕ್ವಾಲಿಟಿ ರಸ್ತೆ ನೀಡಬೇಕು
- 5 ವರ್ಷದ ಅಭಿವೃದ್ಧಿ ಕಾರ್ಯಗಳನ್ನು ಇಟ್ಟುಕೊಂಡು ಪ್ರತ್ಯೇಕ ಮುನಿಸಿಪಲ್ ಬೇಕು
- 2027ರವರೆಗೂ ಏನೆಲ್ಲಾ ಅಭಿವೃದ್ಧಿ ಕಾರ್ಯ ಮಾಡಬೇಕೆಂದು ಪ್ಲಾನ್
- ಹೊಸ ಮುನಿಸಿಪಲ್ ಪಬ್ಲಿಕ್ ಪ್ರೈವೇಟ್ ಪಾರ್ಟನರ್‌ಶಿಪ್‌ನ್ನು ಒಳಗೊಂಡಿರಬೇಕು
- ಇನ್‌ಫ್ರಾಸ್ಟ್ರಚರ್, ಡಿಸೈನ್, ಪ್ಲಾನಿಂಗ್ ಕುರಿತು ಅಭಿವೃದ್ಧಿ ಪಡೆಸುವ ನುರಿತ ತಜ್ಞರು ಇರಬೇಕು
- ವರ್ಲ್ಡ್ ಕ್ಲಾಸ್ ಕಾರಿಡಾರ್‌ಗೆ ಫಂಡಿಂಗ್ ಬೇಕಿದೆ
- ಸರ್ಜಾಪುರ, ಸಿಲ್ಕ್‌ಬೋರ್ಡ್, ಹೊಸೂರು ರಸ್ತೆ, ಓಲ್ಡ್ ಏರ್‌ಪೋರ್ಟ್ ರೋಡ್, ಕೆ.ಆರ್.ಪುರಂ ರಸ್ತೆ ಸೇರಿದಂತೆ ಈ ಭಾಗದಲ್ಲಿ ಡೆಸ್ಟಿನಿ ಕಾರಿಡಾರ್ ಯೋಜನೆ ಮಾಡಬೇಕು
- ಶೂನ್ಯ ಷಹಿಷ್ಣುತೆ ಪಾಲಿಸಿ ಜಾರಿಯಾಗಬೇಕು
ಸಿವಿಕ್ ವಿಚಾರಗಳಾದ ಒಳಚರಂಡಿ, ರಸ್ತೆ , ಕೇಬಲ್‌ಗಳು ಸೇರಿದಂತೆ ಹಲವು ವಿಚಾರಗಳಿಗೆ ಮಾನ್ಯತೆ ನೀಡಬೇಕೆಂದು ಮನವಿ
ಇದಿಷ್ಟು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದು, ಇನ್ನು ಕೂಡಾ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಐಟಿ ಕಂಪನಿಗಳಿಂದ ಮತ್ತೊಮ್ಮೆ ಸರ್ಕಾರದ ಗಮನಕ್ಕೆ ಪ್ರತ್ಯೇಕ ಮುನಿಸಿಪಲ್ ಬೇಕು ಎಂಬ ಪ್ರಸ್ತಾವನೆಯನ್ನು ಮುಂದಿಡಲು ಚಿಂತನೆಯಲ್ಲಿದೆ.