• Home
  • About Us
  • ಕರ್ನಾಟಕ
Wednesday, October 1, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

‘ಕುಸುಮ್‌ ಸಿ’ಯೋಜನೆಗೆ ಭೂಮಿ ನೀಡಿ ಸಹಕರಿಸಿ: ಬೆಸ್ಕಾಂ ಎಂ.ಡಿ. ಡಾ. ಎನ್‌ ಶಿವಶಂಕರ್‌

ಪ್ರತಿಧ್ವನಿ by ಪ್ರತಿಧ್ವನಿ
September 25, 2025
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ
0
Share on WhatsAppShare on FacebookShare on Telegram

ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆಯೇ ಸಮರ್ಪಕ ವಿದ್ಯುತ್ ಪೂರೈಸಲು ನೆರವಾಗುವ ‘ಕುಸುಮ್‌ ಸಿ’ಯೋಜನೆಗೆ ಭೂಮಿ ಗುತ್ತಿಗೆ ನೀಡುವ ಮೂಲಕ ರೈತರು ಬೆಂಬಲ ನೀಡಬೇಕು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್‌ ಶಿವಶಂಕರ್‌ ಗುರುವಾರ ಮನವಿ ಮಾಡಿದ್ದಾರೆ.

ADVERTISEMENT

ಸೇವಾ ಪರ್ವ ಆಚರಣೆ ಕಾರ್ಯಕ್ರಮದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ರಾಜಸ್ಥಾನದ ಬನ್ವಾರಾದಲ್ಲಿ ಕುಸುಮ್‌ ಸಿ ಯೋಜನೆಗೆ ಚಾಲನೆ ನೀಡಿದರು. ಈ ಕಾರ್ಯಕ್ರಮವನ್ನು ದೃಶ್ಯ ಮಾಧ್ಯಮದ ಮೂಲಕ ಇಂಧನ ಇಲಾಖೆ ಮತ್ತು ತುಮಕೂರು ಜಿಲ್ಲಾ ಆಡಳಿತದ ಸಂಯುಕ್ತಾಶ್ರಯದಲ್ಲಿ ತುಮಕೂರಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನೇರ ಪ್ರಸಾರ ಮಾಡಲಾಯಿತು.

ಕಾರ್ಯಕ್ರಮದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು,”ಪಿಎಂ ಕುಸುಮ್-ಸಿ ಯೋಜನೆ ರೈತರಿಗೆ ಅದರಲ್ಲೂ ಮುಖ್ಯವಾಗಿ ಬಯಲು ಸೀಮೆ ಭಾಗದ ರೈತರಿಗೆ ವರದಾನವಾಗಿದೆ. ಯೋಜನೆ ಜಾರಿಗೊಳಿಸಲು ಸರ್ಕಾರ ಎಲ್ಲಾ ರೀತಿಯ ಬೆಂಬಲ ನೀಡುತ್ತಿದೆ. ಆದರೆ, ಅದಕ್ಕೆ ಭೂಮಿ ಕೊರತೆ ಇದೆ. ಹೀಗಾಗಿ ಸ್ಥಳೀಯ ಶಾಸಕರು ಆಸಕ್ತಿ ವಹಿಸಿ ಯೋಜನೆ ಅನುಷ್ಠಾನಗೊಳಿಸಲು ಸಹಕರಿಸಿದರೆ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಸರ್ಕಾರಿ ಭೂಮಿ ಲಭ್ಯವಿರದ ಸ್ಥಳಗಳಲ್ಲಿ ರೈತರೇ ಭೂಮಿಯನ್ನು ಗುತ್ತಿಗೆ ನೀಡುವ ಮೂಲಕ ವಾರ್ಷಿಕ ಆದಾಯಗಳಿಸಬಹುದಾಗಿದೆ. ಹಾಗಾಗಿ,ರೈತರು ಭೂಮಿ ನೀಡಲು ಮುಂದೆ ಬರಬೇಕು,” ಎಂದು ಮನವಿ ಮಾಡಿದರು.

“ಫೀಡರ್‌ ಮಟ್ಟದ ಸೌರೀಕರಣ ಯೋಜನೆ ಕುಸುಮ್-ಸಿ ಅಡಿಯಲ್ಲಿ ರಾಜ್ಯದಲ್ಲಿ ಒಟ್ಟು 3,900 ಮೆಗಾವ್ಯಾಟ್‌ಗಳ ವಿದ್ಯುತ್‌ ಉತ್ಪಾದನೆ ಗುರಿ ಇದೆ. ಸದ್ಯ 359 ಕಡೆಗಳಲ್ಲಿ 2,400 ಮೆಗಾವ್ಯಾಟ್‌ ಸಾಮರ್ಥ್ಯದ ಸ್ಥಾವರಗಳನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ. ತುಮಕೂರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ವಿದ್ಯುತ್‌ ಬೇಡಿಕೆ ಇದೆ. ಹಾಗಾಗಿಯೇ ಇದೇ ಭಾಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಯಿತು,” ಎಂದರು.

“ಮನೆ ಮನೆಗಳಲ್ಲೂ ಸೌರ ಶಕ್ತಿ ಬಳಕೆ ಉತ್ತೇಜಿಸುವ ‘ಪಿಎಂ ಸೂರ್ಯ ಘರ್‌’ ಯೋಜನೆ ಬಗ್ಗೆಯೂ ರೈತಾಪಿ ವರ್ಗ ಹಾಗೂ ಸಾರ್ವಜನಿಕರು ಆಸಕ್ತಿ ತೋರಬೇಕು. ಮನೆಯ ಮೇಲ್ಛಾವಣಿ ಮೇಲೆ ಸೌರ ಫಲಕ ಅಳವಡಿಸಿ, ವಿದ್ಯುತ್‌ ಉತ್ಪಾದಿಸಬಹುದಾಗಿದೆ. ಮನೆಗೆ ಬಳಕೆಯಾಗಿ ಉಳಿದ ಹೆಚ್ಚುವರಿ ವಿದ್ಯುತ್ತನ್ನು ಮಾರಾಟ ಮಾಡುವ ಮೂಲಕ ಹೆಚ್ಚುವರಿ ಆದಾಯ ಗಳಿಸಬಹುದಾಗಿದೆ. ಯೋಜನೆಗೆ ಕೇಂದ್ರ ಸರ್ಕಾರ ಸಹಾಯಧನ ನೀಡುತ್ತಿದ್ದು, ಪ್ರತಿ ಕಿ.ವ್ಯಾ.ಗೆ 30 ಸಾವಿರ ರೂಪಾಯಿ ಸಬ್ಸಿಡಿ ದೊರೆಯುತ್ತದೆ,” ಎಂದು ಸಲಹೆ ನೀಡಿದರು.

“ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರ ನೇತೃತ್ವದಲ್ಲಿ ಕಳೆದ ಜೂನ್‌ 11ರಂದು ಗೌರಿಬಿದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಸುಮ್- ಸಿ ಯೋಜನೆಗೆ ರಾಜ್ಯದಲ್ಲಿ ಚಾಲನೆ ನೀಡಲಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆಯೇ 7 ಗಂಟೆಗಳ ಕಾಲ ವಿದ್ಯುತ್‌ ಪೂರೈಸಲು ನೆರವಾಗುವ ಸೌರಶಕ್ತಿ ಯೋಜನೆ- ‘ಕುಸುಮ್‌ ಸಿ’ ರೈತರಿಗೆ ವರದಾನ,” ಎಂದು ಕ್ರೆಡಲ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಹೇಳಿದರು.

ಕಾರ್ಯಕ್ರಮದಲ್ಲಿ ತುಮಕೂರಿನ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಹಾಗೂ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

“ಪಂಪ್‌ಸೆಟ್‌ಗೆ ಅಗತ್ಯ ಇರುವ ವಿದ್ಯುತ್ತನ್ನು ಜಮೀನಿನಲ್ಲೇ ಉತ್ಪಾದಿಸಲು ನೆರವಾಗುವ ಪಿಎಂ ಕುಸುಮ್-ಬಿ ಯೋಜನೆಯ ಲಾಭವನ್ನು ರೈತರು ಪಡೆಯಬೇಕು. ಕೇಂದ್ರ ಸರ್ಕಾರವು ಯೋಜನೆಗೆ ಶೇ. 30ರಷ್ಟು ಸಹಾಯಧನ ಒದಗಿಸಿದರೆ, ರಾಜ್ಯ ಸರ್ಕಾರದ ಶೇ. 50ರಷ್ಟು ಸಬ್ಸಿಡಿ ನೀಡುತ್ತಿದೆ. ಫಲಾನುಭವಿಗಳು ಶೇ. 20ರಷ್ಟನ್ನು ಭರಿಸಿದರೆ ಸಾಕು. ಇಂಧನ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ಸಹಕಾರದಿಂದ ಹೆಚ್ಚಿನ ಸಂಖ್ಯೆಯ ರೈತರು ಇದರ ಲಾಭ ಪಡೆಯಬಹುದು'”

Tags: BescomDC TumkurDr N Shivashankardr n shivashankar iasKEBKJ GeorgeKusum Cn shiva shankar raoshiva shankrShivashankarShuba KalyanShubha Kalyana
Previous Post

ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತಂದ ಮುಖ್ಯಮಂತ್ರಿಗಳು ನಾಡಿನ ಕ್ಷಮೆ ಕೇಳಬೇಕು – ವಿಜಯೇಂದ್ರ ಆಗ್ರಹ

Next Post

ಸೈಕಲ್ ಯಾತ್ರೆಯ ಮೂಲಕ ಹನ್ನೆರಡೂ ಜ್ಯೋತಿರ್ಲಿಂಗಗಳ ದರ್ಶನ ಮಾಡಿ ದಾಖಲೆ

Related Posts

ಶೂನ್ಯ ಐಎಎಸ್‌ ಸೆಂಟರ್‌ ಖಾದರ್‌ ರಿಂದ ಉದ್ಘಾಟನೆ !
ಇತರೆ / Others

ಶೂನ್ಯ ಐಎಎಸ್‌ ಸೆಂಟರ್‌ ಖಾದರ್‌ ರಿಂದ ಉದ್ಘಾಟನೆ !

by ಪ್ರತಿಧ್ವನಿ
September 30, 2025
0

ಇಂದು ನಗರದಲ್ಲಿನ ಚಂದ್ರ ಲೇಔಟ್‌ನಲ್ಲಿ Sunya IAS ನೂತನ ಸೆಂಟರ್‌ ಉದ್ಘಾಟನೆಗೊಂಡಿತು. ಚಂದ್ರ ಬಡಾವಣೆಯಲ್ಲಿ Civil Services Training Institutions ಗಳಿಗೆ ಹೆಸರುವಾಸಿಯಾಗಿದೆ. ರಾಜ್ಯ ಬೇರೆ ಬೇರೆ...

Read moreDetails
NAASH Studio Launch ಮಾಡಿದ ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ !

NAASH Studio Launch ಮಾಡಿದ ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ !

September 30, 2025
UAPA ಕಾನೂನಿನ ಅಡಿಯಲ್ಲಿ ಮೋದಿಯ ಬಹಳ ದೊಡ್ಡ ಅಭಿಮಾನಿ ಬಂಧನ !

UAPA ಕಾನೂನಿನ ಅಡಿಯಲ್ಲಿ ಮೋದಿಯ ಬಹಳ ದೊಡ್ಡ ಅಭಿಮಾನಿ ಬಂಧನ !

September 30, 2025
ಹೆಚ್ಚುವರಿ ಸೌಕರ್ಯಕ್ಕೆ ನಟ ದರ್ಶನ್‌ ಪರ ವಕೀಲರು ಕೋರ್ಟ್‌ ನಲ್ಲಿ ವಾದ !

ಹೆಚ್ಚುವರಿ ಸೌಕರ್ಯಕ್ಕೆ ನಟ ದರ್ಶನ್‌ ಪರ ವಕೀಲರು ಕೋರ್ಟ್‌ ನಲ್ಲಿ ವಾದ !

September 30, 2025
ಬಿಜೆಪಿ ವಕ್ತಾರನಿಂದ ರಾಹುಲ್‌ ಗಾಂಧಿ ಹತ್ಯೆ ಬೆದರಿಕೆ,  ಕೇಂದ್ರ ಹಾಗೂ ಕೇರಳ ಸರ್ಕಾರಗಳ ನಿರ್ಲಕ್ಷ್ಯ !

ಬಿಜೆಪಿ ವಕ್ತಾರನಿಂದ ರಾಹುಲ್‌ ಗಾಂಧಿ ಹತ್ಯೆ ಬೆದರಿಕೆ, ಕೇಂದ್ರ ಹಾಗೂ ಕೇರಳ ಸರ್ಕಾರಗಳ ನಿರ್ಲಕ್ಷ್ಯ !

September 30, 2025
Next Post

ಸೈಕಲ್ ಯಾತ್ರೆಯ ಮೂಲಕ ಹನ್ನೆರಡೂ ಜ್ಯೋತಿರ್ಲಿಂಗಗಳ ದರ್ಶನ ಮಾಡಿ ದಾಖಲೆ

Recent News

UAPA ಕಾನೂನಿನ ಅಡಿಯಲ್ಲಿ ಮೋದಿಯ ಬಹಳ ದೊಡ್ಡ ಅಭಿಮಾನಿ ಬಂಧನ !
Top Story

UAPA ಕಾನೂನಿನ ಅಡಿಯಲ್ಲಿ ಮೋದಿಯ ಬಹಳ ದೊಡ್ಡ ಅಭಿಮಾನಿ ಬಂಧನ !

by ಪ್ರತಿಧ್ವನಿ
September 30, 2025
ಬಿಜೆಪಿ ವಕ್ತಾರನಿಂದ ರಾಹುಲ್‌ ಗಾಂಧಿ ಹತ್ಯೆ ಬೆದರಿಕೆ,  ಕೇಂದ್ರ ಹಾಗೂ ಕೇರಳ ಸರ್ಕಾರಗಳ ನಿರ್ಲಕ್ಷ್ಯ !
Top Story

ಬಿಜೆಪಿ ವಕ್ತಾರನಿಂದ ರಾಹುಲ್‌ ಗಾಂಧಿ ಹತ್ಯೆ ಬೆದರಿಕೆ, ಕೇಂದ್ರ ಹಾಗೂ ಕೇರಳ ಸರ್ಕಾರಗಳ ನಿರ್ಲಕ್ಷ್ಯ !

by ಪ್ರತಿಧ್ವನಿ
September 30, 2025
ಪ್ರಸಿದ್ದ ಹಾಸ್ಯ ಕಲಾವಿದ, ರಂಗ ನಿರ್ದೇಶಕ ಯಶವಂತ ಸರದೇಶಪಾಂಡೆ ವಿಧಿವಶ!
Top Story

ಪ್ರಸಿದ್ದ ಹಾಸ್ಯ ಕಲಾವಿದ, ರಂಗ ನಿರ್ದೇಶಕ ಯಶವಂತ ಸರದೇಶಪಾಂಡೆ ವಿಧಿವಶ!

by ಪ್ರತಿಧ್ವನಿ
September 29, 2025
ಕಲ್ಯಾಣ ಕರ್ನಾಟಕದಲ್ಲಿ ನೆರೆ ಪರಿಹಾರ ಕಾರ್ಯ ತುರ್ತಾಗಿ ಕೈಗೊಳ್ಳಲು ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಆಗ್ರಹ
Top Story

ಕಲ್ಯಾಣ ಕರ್ನಾಟಕದಲ್ಲಿ ನೆರೆ ಪರಿಹಾರ ಕಾರ್ಯ ತುರ್ತಾಗಿ ಕೈಗೊಳ್ಳಲು ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಆಗ್ರಹ

by ಪ್ರತಿಧ್ವನಿ
September 28, 2025
ನಟ ವಿಜಯ್‌ : ಕಾಲ್ತುಳಿತದಲ್ಲಿ ಮೃತರ ಕುಟುಂಬಕ್ಕೆ ಸಂತಾಪ, ಪರಿಹಾರದ ವಾಗ್ದಾನ
Top Story

ನಟ ವಿಜಯ್‌ : ಕಾಲ್ತುಳಿತದಲ್ಲಿ ಮೃತರ ಕುಟುಂಬಕ್ಕೆ ಸಂತಾಪ, ಪರಿಹಾರದ ವಾಗ್ದಾನ

by ಪ್ರತಿಧ್ವನಿ
September 29, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಶೂನ್ಯ ಐಎಎಸ್‌ ಸೆಂಟರ್‌ ಖಾದರ್‌ ರಿಂದ ಉದ್ಘಾಟನೆ !

ಶೂನ್ಯ ಐಎಎಸ್‌ ಸೆಂಟರ್‌ ಖಾದರ್‌ ರಿಂದ ಉದ್ಘಾಟನೆ !

September 30, 2025
NAASH Studio Launch ಮಾಡಿದ ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ !

NAASH Studio Launch ಮಾಡಿದ ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ !

September 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!