ಅಮೇರಿಕಾ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (American president Donald trump) ರನ್ನ ಪ್ರಧಾನಿ ನರೇಂದ್ರ ಮೋದಿ (Pm modi) ಭೇಟಿಯಾಗಲಿದ್ದಾರೆ. ಬಹುತೇಕ ಮುಂದಿನ ತಿಂಗಳು ಫೆಬ್ರವರಿಯಂದು ಭೇಟಿಯಾಗುವ ಸಾದ್ಯತೆ ಬಗ್ಗೆ ಸ್ವತಹ ಡ್ರೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಬ್ಬರು ದೂರವಾಣಿ ಕರೆ ಮೂಲಕ ಮಾತನಾಡಿದ್ದು,ತಂತ್ರಜ್ಞಾನ, ಅಭಿವೃದ್ದಿ ಮತ್ತು ಒಪ್ಪಂದಗಳ ಬಗ್ಗೆ ಮುಂದಿನ ಭೇಟಿಯಲ್ಲಿ ಚರ್ಚೆ ಮಾಡುವ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ.

ಈ ಮುಂಚೆ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣ ವಚನಕ್ಕೆ ಮೋದಿಗೆ ಆಹ್ವಾನ ನೀಡಿಲ್ಲದ ವಿಚಾರವಾಗಿ ದೊಡ್ಡ ಚರ್ಚೆ ನಡೆದಿತ್ತು. ಹೀಗಾಗಿ ಈ ಕಾರ್ಯಕ್ರಮದಲ್ಲೂ ಮೋದಿ ಬದಲಿಗೆ ವಿದೇಶಾಂಗ ಸಚಿವ ಜೈಶಂಕರ್ (Jai shankar) ಭಾಗಿಯಾಗಿದ್ದರು.ಈ ಬೆನ್ನಲ್ಲೇ ಟ್ರಂಪ್ ಎರಡನೆ ಬಾರಿಗೆ ಅದ್ಯಕ್ಷರಾದ ಮೇಲೆ ಮೊದಲ ಬಾರಿಗೆ ಉಭಯ ನಾಯಕರು ಫೆಬ್ರವರಿಯಲ್ಲಿ ಭೇಟಿಯಾಗಲಿದ್ದಾರೆ.