ಕೇಂದ್ರದಲ್ಲಿ ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿಯವರು ಎಲ್ಲಿಯೂ ಸಾಧನೆ ಬಗ್ಗೆ ಮಾತನಾಡಲ್ಲ. ಕೊಟ್ಟಿರುವ ಭರವಸೆಯಲ್ಲಿ ಇದನ್ನು ಈಡೇರಿಸಿದ್ದೇನೆ ಎಂದು ಹೇಳಲ್ಲ. ಕೇವಲ ದ್ವೇಷ ಭಾಷಣ, ದೇಶ ವಿಭಜನೆಯ ಮಾತು. ಧರ್ಮದ ಆಧಾರದ ಮೇಲೆ ಮತಗಳ ಕ್ರೋಢೀಕರಣಕ್ಕೆ ಮುಂದಾಗಿದ್ದಾರೆ. ರಾಹುಲ್ ಗಾಂಧಿ ಮನಸ್ಸುಗಳನ್ನು ಒಗ್ಗೂಡಿಸಲು ನ್ಯಾಯ ಯಾತ್ರೆಯನ್ನು ಮಾಡಿದ್ರು. ಯಾರು ಕೂಡ ಇಷ್ಟೊಂದು ನ್ಯಾಯ ಯಾತ್ರೆ ಮಾಡಿರಲಿಲ್ಲ ಎಂದಿದ್ದಾರೆ.

ದೇಶದ ಸಮಸ್ಯೆಗಳು ಏನು, ಪರಿಹಾರ ಮಾಡುವ ಬಗ್ಗೆ ಚಿಂತನೆ ರಾಹುಲ್ ಚಿಂತನೆ ಮಾಡಿದ್ದಾರೆ. 25 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಗ್ಯಾರಂಟಿಗಳಿಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸಹ ಸಹಿ ಮಾಡಿದ್ದಾರೆ. ಕರ್ನಾಟಕಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ದೊಡ್ಡ ಅನ್ಯಾಯ ಮಾಡಿದೆ. ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಆಗಿದೆ. ಕನ್ನಡಿಗರ ಶ್ರಮದ ಫಲದಿಂದ ತೆರಿಗೆ ಪಾವತಿಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಆದರೆ ರಾಜ್ಯದಿಂದ ಒಂದು ರೂಪಾಯಿ ಕೊಟ್ಟರೆ ನಮಗೆ ಕೇವಲ 13 ಪೈಸೆ ವಾಪಸ್ ಕೊಡ್ತಾರೆ ಎಂದು ಕಿಡಿಕಾರಿದ್ದಾರೆ.

ತೆರಿಗೆ ಮೋಸದ ಬಗ್ಗೆ ದೆಹಲಿಯಲ್ಲಿಯೂ ಸಹ ನಾವು ಪ್ರತಿಭಟನೆ ಮಾಡಿದ್ದೇವೆ. ವಿಶೇಷ ಅನುದಾನ 5,495 ಕೋಟಿ ವಿಶೇಷ ಅನುದಾನ ಕೊಡಬೇಕಿತ್ತು. ರಿಂಗ್ ರಸ್ತೆಗಾಗಿ, ಕೆರೆ ಅಭಿವೃದ್ಧಿಗೆ ತಲಾ ಮೂರು ಸಾವಿರ ಕೋಟಿ ಕೊಡಬೇಕಿತ್ತು. ಅದರೇ ಅದನ್ನೂ ಕೊಡಲಿಲ್ಲ. ಭದ್ರಾ ಯೋಜನೆಗೆ ಕೊಡಬೇಕಿದ್ದ ಹಣವನ್ನೂ ಕೊಡಲಿಲ್ಲ. 2019ರಲ್ಲಿ 25 ಜನ ಸಂಸದರು ಆಯ್ಕೆ ಆಗಿದ್ದರು. ಒಬ್ಬರೂ ಕೂಡ ಕನ್ನಡಿಗರಿಗೆ ಆಗ್ತಿರುವ ಅನ್ಯಾಯದ ಬಗ್ಗೆ ಮಾತನಾಡಲಿಲ್ಲ. ಮಾತನಾಡುವ ಧೈರ್ಯ ತೋರಿಸಲಿಲ್ಲ. ಮೋದಿ ಎದುರು ಮಾತನಾಡಲು ಪುಕ್ಕಲತನ ತೋರಿಸಿದ್ರು ಎಂದು ಟೀಕಿಸಿದ್ದಾರೆ.

ರಾಜ್ಯದ 223 ತಾಲೂಕಿನಲ್ಲಿ ಬರ ಪರಿಸ್ಥಿತಿ ನಿರ್ಮಾಣ ಆಗಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿಯೇ ನಾವು ಕೇಂದ್ರ ಸರ್ಕಾರಕ್ಕೆ ಮನವಿ ಕೊಟ್ಟಿದ್ದೇವೆ. ಅಕ್ಟೋಬರ್ನಲ್ಲಿ ಕೇಂದ್ರ ತಂಡವೇ ಆಗಮಿಸಿ ಪರಿಸ್ಥಿತಿ ಅವಲೋಕಿಸಿ ಕೇಂದ್ರ ಸರ್ಕಾರಕ್ಕೆ ವರದಿ ಕೊಟ್ಟಿದೆ. NDRF ನಿಯಮದ ಪ್ರಕಾರ ಪರಿಹಾರ ಕೇಳಿದ್ದೆವು. 35 ಸಾವಿರ ಕೋಟಿ ಬೆಳೆ ನಷ್ಟ ಆಗಿದೆ, ಪರಿಹಾರ ಕೊಡಿ ಎಂದರೂ ಕೊಡಲಿಲ್ಲ. ಆದರೆ ನಿರ್ಮಲಾ ಸಿತಾರಾಮನ್, ಅಮಿತ್ ಶಾ ಈ ಬಗ್ಗೆ ಸುಳ್ಳು ಹೇಳಿದ್ರು. ನಾವು ಅನಿವಾರ್ಯವಾಗಿ ಸುಪ್ರೀಂಕೋರ್ಟ್ ಮೊರೆ ಹೋಗಬೇಕಾಯಿತು. ಸುಪ್ರೀಂಕೋರ್ಟ್ ಚಾಟಿ ಬಿಸೋವರೆಗೆ ಒಂದು ರೂಪಾಯಿ ಕೊಡಲಿಲ್ಲ. ಈಗ 3,200 ಕೋಟಿ ರೂಪಾಯಿ ಬರ ಪರಿಹಾರ ಕೊಟ್ಟಿದ್ದಾರೆ.

ಹೀಗೆ ಒಂದೊಂದು ಅಂಶವನ್ನು ಹಿಡಿದು ಸಿಎಂ ಸಿದ್ದರಾಮಯ್ಯ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ರಾಜ್ಯದ ಮತದಾರರಿಗೆ ನಾನು ಮನವಿ ಮಾಡ್ತಿನಿ. ಮೋದಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿದ್ದು ಬರೀ ಚೊಂಬು. ಜಾತಿ, ಧರ್ಮದ ನಡುವೆ ಒಡಕು ಉಂಟು ಮಾಡುತ್ತಿದ್ದಾರೆ. ಈ ಸಲ ಕರ್ನಾಟಕದ ಜನ ಕಾಂಗ್ರೆಸ್ ಮೇಲೆ ವಿಶ್ವಾಸವಿಟ್ಟು. ರಾಜ್ಯದಲ್ಲಿ ಹೆಚ್ಚು ಸ್ಥಾನ ಕೊಡುತ್ತಾರೆ ಎಂಬ ನಂಬಿಕೆ ಇದೆ. ಬೆಳಗಾವಿ, ಚಿಕ್ಕೋಡಿ ಎರಡೂ ಸ್ಥಾನ ಗೆಲ್ಲುತ್ತೇವೆ ಎಂದಿದ್ದಾರೆ.






