ಚನ್ನಪಟ್ಟಣ ಉಪಚುನಾವಣೆ (channapattana bi election) ಹಿನ್ನೆಲೆ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ್ದೇನೆ. ಯಾರು ಸ್ಪರ್ಧೆ ಮಾಡಬೇಕೆಂಬುದು ತೀರ್ಮಾನ ಮಾಡಲು ಇನ್ನು ಕಾಲಾವಕಾಶ ಬೇಕು ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP yogeshwar) ತಿಳಿಸಿದ್ರು.

ಈ ಬಗ್ಗೆ ದೆಹಲಿಯಲ್ಲಿ (Delhi) ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಇತ್ತೀಚೆಗೆ ಡಿಸಿಎಂ (Dcm) ವಾರದಲ್ಲಿ ಎರಡು ದಿನ ಠಿಕಾಣಿ ಹೂಡುತ್ತಿದ್ದಾರೆ. ಚನ್ನಪಟ್ಟಣಕ್ಕೆ ಈವರೆಗೂ ತಿರುಗಿನೋಡದವರು ಈಗ ಮತ್ತೆ ಬಂದಿದ್ದಾರೆ. ಜನ ಅವರಿಗೆ ಸರಿಯಾಗಿ ಉತ್ತರಿಸುತ್ತಾರೆ ಎಂದು.
ಇನ್ನು ಕಾಂಗ್ರೆಸ್ (Congress) ನಿಂದ ಡಿಕೆಶಿ ಕುಟುಂಬದವರೆ ನಿಲ್ಲುತ್ತಾರೆ ಎಂಬುದು ನಮ್ಮ ಅಭಿಪ್ರಾಯ ಅಥವಾ ಡಿಕೆಶಿ ಕುಟುಂಬದಿಂದ ಯಾರೇ ನಿಂತರೆ, ನಮ್ಮ ಕಡೆಯಿಂದ ದೊಡ್ಡ ಹೋರಾಟ ನಡೆಯಲಿದೆ ಎಂದು ಡಿ.ಕೆ ಶಿವಕುಮಾರ್‌ಗೆ (Dk shivakumar) ಟಾಂಗ್ ಕೊಟ್ಟಿದ್ದಾರೆ.