2019ರಲ್ಲಿ ರಾಜ್ಯದ ಲೋಕಸಬಾ ಚುನಾವಣೆಯಲ್ಲಿ ಕಾಂಗ್ರೇಸ್ (congress) ಗೆದ್ದಿದ್ದು ಕೇವಲ ಒಂದು ಸ್ಥಾನ. ಅದು ಬೆಂಗಳೂರು ಗ್ರಾಮಾಂತರ (Bangalore rural) ಕ್ಷೇತ್ರ. ಡಿಕೆ ಶಿವಕುಮಾರ್ (DK shivakumar) ಸಹೋದರ, ಡಿಕೆ ಸುರೇಶ್ (Dk suresh) ಅಭ್ಯರ್ಥಿಯಾಗಿ ಗೆಲ್ಲುವ ಮೂಲಕ ಕಾಂಗ್ರೇಸ್ ಶೂನ್ಯಕ್ಕೆ ತಲುಪೋದನ್ನ ತಪ್ಪಿಸಿದ್ರು. ಇದು ಸಹೋದರರ ಭದ್ರಕೋಟೆಯಾಗಿದ್ದ ಕಾರಣ ಈ ಒಂದು ಕ್ಷೇತ್ರ ಮಾತ್ರ ಕಾಂಗ್ರೇಸ್ ಕೈ ವಶವಾಗಿತ್ತು. ಆದ್ರೆ ಈ ಬಾರಿ ಅದೇ ಕ್ಷೇತ್ರ ಡಿಕೆಶಿಗೆ ಮುಳುವಾಗಲಿದ್ಯಾ ಎಂಬ ಚರ್ಚೆ ಶುರುವಾಗಿದೆ.
ಇದಕ್ಕೆ ಕಾರಣ, ಬಿಜೆಪಿ ಜೆಡಿಎಸ್ (BJP JDS) ಉರುಳಿಸಿರುವ ಸಖತ್ ದಾಳ. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಡಿಕೆಶಿ ಪಾರುಪತ್ಯ ಸಾಧಿಸಿಬಿಟ್ರೆ, ಆಗ ಡಿಕೆಶಿಯ ಸಿಎಂ (CM) ಹಾದಿ ಸುಗಮವಾಗಿಬಿಡುತ್ತೆ. ಹೀಗಾಗಿ ಡಿಕೆಶಿಯನ್ನ ಕಟ್ಟಿಹಾಕಬೇಕು ಅಂದ್ರೆ ಸ್ವಕ್ಷೇತ್ರದಲ್ಲೇ ಸೋಲಿನ ರುಚಿ ತೋರಿಸುವ ಮೂಲಕ ಮುಖಭಂಗ ಮಾಡಬೇಕು ಎಂಬುದು ಮೈತ್ರಿ ನಾಯಕರ ಪ್ಲಾನ್. ಆ ಕಾರಣಕ್ಕಾಗಿಯೇ ಸಜ್ಜನ ಹಾಗೂ ಹೃದಯವಂತ ವೈದ್ಯ ಎಂದು ಗುರುತಿಸಿಕೊಂಡಿರುವ ಡಾಕ್ಟರ್ ಮಂಜುನಾಥ್‌ರನ್ನ (Dr. manjunath) ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ.
ಇಲ್ಲಿ ಮತ್ತೊಮದು ಟ್ವಿಸ್ಟ್ ಅಂದ್ರೆ ದೇವೇಗೌಡರ (Devegowda) ಅಳಿಯ ಮಂಜುನಾಥ್‌ರನ್ನ ಜೆಡಿಎಸ್ ನಿಂದ ಕಣಕ್ಕಿಳಿಸಿದ್ರೆ ಲೆಕ್ಕಾಚಾರ ಬೇರೆಯೇ ಇರ್ತಿತ್ತು. ಆಗ ಡಿಕೆ ಬ್ರದರ್ಸ್ ಇಷ್ಟು ಟೆನ್ನನ್ (Tension) ಆಗ್ತಿರಲಿಲ್ಲ. ಆದ್ರೆ ಯಾವಾಗ ಬಿಜೆಪಿ ಚಿನ್ನೆಯಿಂದ ಅವರನ್ನ ಅಖಾಡಕ್ಕಿಳಿಸಲಾಯ್ತ ಅಲ್ಲಿಗೆ ಮೈತ್ರಿ ಪ್ಲಾನ್ ಡಿಕೆಶಿಗೆ ಅರ್ಥವಾಗಿತ್ತು. ಸೋ ತಮ್ಮನ್ನು ಹಣಿಯಲು ಮೈತ್ರಿ ರೂಪಿಸಿರುವ ತಂತ್ರವನ್ನು ಡಿಕೆ ವಿಫಲಗೊಳಿಸಬೇಕಿದೆ. ಇಲ್ಲವಾದ್ರೆ ವರ್ಚಸ್ಸು ಕುಗ್ಗಿದೆ ಎಂಬ ಅಭಿಪ್ರಾಯ ಮೂಡಿಸಿದ್ರೆ ಸಿಎಂ ಸ್ಥಾನದ ಆಸೆಯನ್ನೇ ಬಿಡಬೇಕಾಗುತ್ತದೆ.
ಹೇಗೆ ಮೈಸೂರು (mysuru) ಮತ್ತು ಚಾಮರಾಜನಗರ (chamarajanagar) ಕ್ಷೇತ್ರಗಳನ್ನ ಕಾಂಗ್ರೇಸ್ ಗೆಲ್ಲದಿದ್ರೆ ಸಿಎಂ ಸಿದ್ದುಗೆ ಮುಖಭಂಗವಾಗಲಿದ್ಯೋ, ಬಹುಶಃ ಸಿಎಂ ಖುರ್ಚಿ ಅಲುಗಾಡಬಹುದು ಎಂದೂ ಹೇಳಲಾಗ್ತಿದ್ಯೋ, ಅದೇ ರೀತಿ ಈ ಬಾರಿ ಡಿಕೆಶಿಗೂ ಸಹೋದರನ ಗೆಲು ಅಥವಾ ಸೋಲು ಮುಂದಿನ ರಾಜಕಾರಣದ ಭವಿಷ್ಯವನ್ನು ಬರೆಯುವ ಫಲಿತಾಂಶವಾಗಲಿದೆ. ಇದೇ ಕಾರಣಕ್ಕಾಗಿ ಒಂದಾಗಿರುವ ಮೈತ್ರಿ ನಾಯಕಾರು ಡಿಕೆಗೆ ಸರಿಯಾಗೇ ಖೆಡ್ಡಾ ತೋಡಿದ್ದು, ಭವಿಷ್ಯ ಮತದಾರ ನಿರ್ಧರಿಸಲಿದ್ದಾನೆ