• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಡಿಕೆ ಶಿವಕುಮಾರ್ ನಟ್ಟು ಬೋಲ್ಟ್ ವಿಚಾರ; ಆ ಕೆಲಸ ಮಾಡಲು ಬೇರೆ ಜನ ಇದ್ದಾರೆ ಎಂದು ಕುಟುಕಿದ HD ಕುಮಾರಸ್ವಾಮಿ

ಪ್ರತಿಧ್ವನಿ by ಪ್ರತಿಧ್ವನಿ
March 3, 2025
in Uncategorized
0
ಡಿಕೆ ಶಿವಕುಮಾರ್ ನಟ್ಟು ಬೋಲ್ಟ್ ವಿಚಾರ; ಆ ಕೆಲಸ ಮಾಡಲು ಬೇರೆ ಜನ ಇದ್ದಾರೆ ಎಂದು ಕುಟುಕಿದ HD ಕುಮಾರಸ್ವಾಮಿ
Share on WhatsAppShare on FacebookShare on Telegram

ಡಿಕೆ ಶಿವಕುಮಾರ್ ನಟ್ಟು ಬೋಲ್ಟ್ ವಿಚಾರ; ಆ ಕೆಲಸ ಮಾಡಲು ಬೇರೆ ಜನ ಇದ್ದಾರೆ ಎಂದು ಕುಟುಕಿದ HD ಕುಮಾರಸ್ವಾಮಿ||

ADVERTISEMENT

||135 ಸೀಟು ಕೊಟ್ಟಿರುವುದು ನಟ್ಟು ಬೋಲ್ಟ್ ರಿಪೇರಿ ಮಾಡೋಕೆ ಅಲ್ಲ ಎಂದ ಕೇಂದ್ರ ಸಚಿವರು||

ಕ್ಷೇತ್ರ ಮರು ವಿಂಗಡಣೆ ಬಗ್ಗೆ ಕಾದು ನೋಡೋಣ ಎಂದ HDK

ಬೆಂಗಳೂರು: ನಟ್ಟು ಬೋಲ್ಟ್ ರಿಪೇರಿ ಮಾಡಲು ಬಹಳ ಜನ ಇದ್ದಾರೆ. ರಾಜ್ಯದ ಜನತೆ ಇವರಿಗೆ 135 ಸೀಟು ಕೊಟ್ಟಿರುವುದು ರಿಪೇರಿ ಮಾಡುವುದಕ್ಕಲ್ಲ, ರಾಜ್ಯದ ಜನರ ಸಮಸ್ಯೆ ಆಲಿಸಲಿಕ್ಕೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟರು.

ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಡಿಕೆ ಶಿವಕುಮಾರ್ ಅವರು ಬಹುಶಃ ಭೂಮಿ ಮೇಲಿಲ್ಲ ಅನಿಸುತ್ತದೆ. ಅಧಿಕಾರದ ಹಾಗೆ ಮಾತನಾಡಿಸುತ್ತಿದೆ. ಅವರ ಬಗ್ಗೆ ಮಾತನಾಡುವುದಕ್ಕಿಂತ ಮೌನವಾಗಿರುವುದೇ ಒಳ್ಳೆಯದು ಎಂದು ಸಚಿವರು ವ್ಯಂಗ್ಯವಾಡಿದರು.

ಡಿಕೆ ಶಿವಕುಮಾರ್ ಹಿಂದುತ್ವದ ಜಪ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು; ಅದು ಅವರವರ ಭಾವಕ್ಕೆ ಬಿಟ್ಟದ್ದು. ನಾನು ಟೀಕೆ ಮಾಡಲು ಹೋಗಲ್ಲ. ಡಾ. ಬಿ.ಆರ್.ಅಂಬೇಡ್ಕರ್ ಅವರೇ ಅವರವರ ಭಾವನೆಗೆ ಅವಕಾಶ ನೀಡಿದ್ದಾರೆ. ಇದರಲ್ಲಿ ವಿಶ್ಲೇಷಣೆ ಮಾಡುವುದಕ್ಕೆ ಏನಿದೆ? ಎಂದು ಪ್ರಶ್ನಿಸಿದರು.

ನಾನೇ ರಾಜಕೀಯಕ್ಕೆ ಬರುತ್ತೇನೆ ಅಂದುಕೊಂಡಿರಲಿಲ್ಲ:

ರಾಜಕಾರಣಿಗಳ ಮಕ್ಕಳು ಚಲನಚಿತ್ರ ಕ್ಷೇತ್ರದಲ್ಲಿ ಪ್ಲ್ಯಾಪ್ ಆಗಿ ಈಗ ರಾಜಕಾರಣಕ್ಕೆ ಬಂದಿದ್ದಾರೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಮಾತನಾಡಿದ ಸಚಿವರು ; ಜೀವನದಲ್ಲಿ ಅನೇಕ ಬಾರಿ ಸೋಲು, ಗೆಲುವು ಇರುತ್ತದೆ. ಕೆಲವು ಬಾರಿ ಬದಲಾವಣೆ ಆಗುತ್ತದೆ. ನಾನೇ ಒಂದು ಕಾಲದಲ್ಲಿ ಸಿನಿಮಾ ಕ್ಷೇತ್ರದಲ್ಲಿ ಇದ್ದೆ. ಸಿನಿಮಾ ಹಂಚಿಕೆದಾರನಾಗಿದ್ದೆ. ಯಾವುದೇ ಸಂದರ್ಭದಲ್ಲಿಯೂ ರಾಜಕೀಯಕ್ಕೆ ಬರುತ್ತೇನೆ ಎಂದುಕೊಂಡಿರಲಿಲ್ಲ. ನಾನೇ ಅಚಾನಕ್ಕಾಗಿ ರಾಜಕೀಯಕ್ಕೆ ಬಂದೆ. ಏಳು ಬೀಳು ಎನ್ನುವುದು ಎಲ್ಲರಿಗೂ ಇರುತ್ತದೆ. ಅವರ ಹೇಳಿಕೆಗೆ ಅಷ್ಟೇನೂ ಪ್ರಾಮುಖ್ಯತೆ ಕೊಡಬೇಕಿಲ್ಲ ಎಂದು ತಿಳಿಸಿದರು.

ವಿಧಾನ ಮಂಡಲ ಅಧಿವೇಶನ ವಿಚಾರಕ್ಕೆ ಪ್ರತಿಕ್ರಿಯೆಸಿದ ಸಚಿವರು; ಈಗಿನ ಸರ್ಕಾರದಲ್ಲಿ ಏನೇ ಚರ್ಚೆ ಮಾಡಿದರೂ ಉಪಯೋಗವಿಲ್ಲ. ಕಲ್ಯಾಣ ಕರ್ನಾಟಕಕ್ಕೆ ₹5000 ಕೋಟಿ ಕೊಡುತ್ತೇವೆ, ಕ್ರಿಯಾ ಯೋಜನೆ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದರು. ಮತ್ತೊಂದು ಬಜೆಟ್ ಬಂದಿದೆ. ಹಳೆಯ ಬಜೆಟ್ ಘೋಷಣೆಗಳಿಗೆ ದಿಕ್ಕಿಲ್ಲ. ಕಲ್ಯಾಣ ಕರ್ನಾಟಕಕ್ಕೆ ಎಷ್ಟು ಕೊಟ್ಟರು? ರಾಜ್ಯದಲ್ಲಿ ಇರುವ ಸಮಸ್ಯೆಗಳಿಗಿಂತ ರಾಜಕೀಯ ಹೇಳಿಕೆಗಳಿಗೆ ಮಹತ್ವ ಹೆಚ್ಚು ಮಹತ್ವ ಕೊಡುತ್ತಿದ್ದಾರೆ. ಜನರ ಕಷ್ಟ ಬಗೆಹರಿವುದಕ್ಕೆ ಸರ್ಕಾರ ಗಮನ ಕೊಡುತ್ತಿಲ್ಲ ಎಂದು ಕೇಂದ್ರ ಕಳವಳ ವ್ಯಕ್ತಪಡಿಸಿದರು.

ಕ್ಷೇತ್ರ ಮರು ವಿಂಗಡಣೆ ಬಗ್ಗೆ ಈಗಲೇ ಚರ್ಚೆ ಅನಗತ್ಯ:

ಲೋಕಸಭೆ ಕ್ಷೇತ್ರಗಳ ಮರು ವಿಂಗಡಣೆ ಬಗ್ಗೆ ಈಗಲೇ ಚರ್ಚೆ ಮಾಡುವ ಅಗತ್ಯ ಇಲ್ಲ. ಇನ್ನು ಸಮಯಾವಕಾಶ ಇದೆ. ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ರಾಜ್ಯಕ್ಕೆ ಅನ್ಯಾಯ ಆಗಬಾರದು. ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ನವರೇ ಆಡಳಿತ ಮಾಡಿಕೊಂಡು ಬಂದಿದ್ದಾರೆ. ಎಲ್ಲಾ ಸೀಟುಗಳೂ ಕಾಂಗ್ರೆಸ್ ಪಕ್ಷಕ್ಕೇ ಇದ್ದವು. ಈಗ ಅವರು ನಿರಂತರವಾಗಿ ಸೋಲುತ್ತಿದ್ದಾರೆ. ಹೀಗಾಗಿ ತಪ್ಪು ಹುಡುಕುತ್ತಿದ್ದಾರೆ. ಯಾವ ಆಧಾರದ ಮೇಲೆ ಕ್ಷೇತ್ರ ವಿಂಗಡಣೆ ಆಗಲಿದೆ ಎಂದು ನೋಡೋಣ ಎಂದು ಅವರು ಹೇಳಿದರು.

Tags: cm kumaraswamydk shivakumar and kumaraswamydk shivakumar vs hd kumaraswamydk shivakumar vs kumaraswamyH D KumaraswamyHD Kumaraswamyhd kumaraswamy dk shivakumarhd kumaraswamy latest newshd kumaraswamy newshd kumaraswamy on dk shivakumarhd kumaraswamy speechhd kumaraswamy vs dk shivakumarkumaraswamykumaraswamy and dk shivakumarkumaraswamy newskumaraswamy speechkumaraswamy today newskumaraswamy vs dk shivakumar
Previous Post

ಚಾಂಪಿಯನ್ಸ್ ಟ್ರೋಫಿಯಲ್ಲಿ ವರುಣ್ ಚಕ್ರವರ್ತಿಯ ಸ್ಪಿನ್ ಮ್ಯಾಜಿಕ್!

Next Post

ಇಂದಿನಿಂದ ರಾಜ್ಯ ಬಜೆಟ್​​ ಅಧಿವೇಶನ.. ವಿಪಕ್ಷಗಳ ಅಸ್ತ್ರ.. ಸರ್ಕಾರದ ಪ್ರತ್ಯಾಸ್ತ್ರ ಏನು..?

Related Posts

BREAKING NEWS ; ನಟ ದರ್ಶನ್‌ಗೆ ಇನ್ನೂ 1 ವರ್ಷ ಜೈಲು ವಾಸ : ಕಾಲಾವಕಾಶ ಕೇಳಿದ ಸುಪ್ರೀಂಕೋರ್ಟ್‌
Uncategorized

BREAKING NEWS ; ನಟ ದರ್ಶನ್‌ಗೆ ಇನ್ನೂ 1 ವರ್ಷ ಜೈಲು ವಾಸ : ಕಾಲಾವಕಾಶ ಕೇಳಿದ ಸುಪ್ರೀಂಕೋರ್ಟ್‌

by ಪ್ರತಿಧ್ವನಿ
May 15, 2026
0

ನವದೆಹಲಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್‌ಗೆ ಸುಪ್ರೀಂಕೋರ್ಟ್‌ ಆಘಾತ ನೀಡಿದೆ. ಇಂದು ನಡೆದ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್‌...

Read moreDetails
BREAKING NEWS : ನಾಳೆ ಡಿ ಫ್ಯಾನ್ಸ್‌ಗೆ ಬಿಗ್‌ ಡೇ : ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ

BREAKING NEWS : ನಾಳೆ ಡಿ ಫ್ಯಾನ್ಸ್‌ಗೆ ಬಿಗ್‌ ಡೇ : ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ

May 14, 2026
ಕುಟುಂಬ ಕಲಹ, ರಾಜಕೀಯ ಬಿಕ್ಕಟ್ಟು; ಪ್ರತೀಕ್ ಯಾದವ್ ಜೀವನ ಮತ್ತೆ ಚರ್ಚೆಯಲ್ಲಿ!

ಕುಟುಂಬ ಕಲಹ, ರಾಜಕೀಯ ಬಿಕ್ಕಟ್ಟು; ಪ್ರತೀಕ್ ಯಾದವ್ ಜೀವನ ಮತ್ತೆ ಚರ್ಚೆಯಲ್ಲಿ!

May 14, 2026
ಕೇರಳ ಸಿಎಂ ಆಗಿ ಕೆ.ಸಿ. ವೇಣುಗೋಪಾಲ್ ಆಯ್ಕೆ?

ಕೇರಳ ಸಿಎಂ ಆಗಿ ಕೆ.ಸಿ. ವೇಣುಗೋಪಾಲ್ ಆಯ್ಕೆ?

May 14, 2026
ಧೋನಿ ಯಾವಾಗ ಕಣಕ್ಕಿಳಿಯುತ್ತಾರೆ?; ಸಿಎಸ್‌ಕೆ ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

ಧೋನಿ ಯಾವಾಗ ಕಣಕ್ಕಿಳಿಯುತ್ತಾರೆ?; ಸಿಎಸ್‌ಕೆ ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

May 14, 2026
Next Post
ಇಂದಿನಿಂದ ರಾಜ್ಯ ಬಜೆಟ್​​ ಅಧಿವೇಶನ.. ವಿಪಕ್ಷಗಳ ಅಸ್ತ್ರ.. ಸರ್ಕಾರದ ಪ್ರತ್ಯಾಸ್ತ್ರ ಏನು..?

ಇಂದಿನಿಂದ ರಾಜ್ಯ ಬಜೆಟ್​​ ಅಧಿವೇಶನ.. ವಿಪಕ್ಷಗಳ ಅಸ್ತ್ರ.. ಸರ್ಕಾರದ ಪ್ರತ್ಯಾಸ್ತ್ರ ಏನು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada