ಡಿಸಿಎಂ ಡಿ.ಕೆ ಶಿವಕುಮಾರ್ (Dcm Dk Shivakumar) ಇಂದು ಬೆಂಗಳೂರಿನಿಂದ ಪ್ರಯಾಗರಾಜ್ (Prayagaraj) ಕಡೆ ಹೊರಟಿದ್ದಾರೆ. ಮಹಾ ಕುಂಭಮೇಳದಲ್ಲಿ (Maha kumbh 2025) ಭಾಗಿಯಾಗುವ ಸಲುವಾಗಿ ಡಿಸಿಎಂ ಡಿಕೆ ಶಿವಕುಮಾರ್ (Dcm dk Shivakumar) ಕುಟುಂಬ ಸಮೇತರಾಗಿ ಉತ್ತರಪರದೇಶಕ್ಕೆ ತೆರಳಿದ್ದಾರೆ.

ಇಂದು (ಫೆ 9) ಬೆಳಗ್ಗೆ 5:30ಕ್ಕೆ ಮನೆಯಿಂದ ಕುಟುಂಬ ಸಮೇತ ಹೊರಟ್ಟಿದ್ದಾರೆ. ಈ ವೇಳೆ ಮಾತ್ನಾಡಿದ ಅವರು, ನಮ್ಮ ರಾಜ್ಯದಲ್ಲೂ ನಡೆಯುವ ಕಾವೇರಿ ಕುಂಭಮೇಳದಲ್ಲಿ ಭಾಗವಹಿಸುತ್ತೇನೆ ಎಂದಿದ್ದಾರೆ.
ಈಗಾಗಲೇ ಕೆಲವು ಸ್ವಾಮೀಜಿಗಳು ಮಾತುಕತೆ ನಡೆಸಿದ್ದಾರೆ.ಇದಾದ ನಂತರ ಗ್ಲೋಬಲ್ ಇನ್ವೆಸ್ಟೆಂಟ್ ಮೀಟಿಂಗ್ ಇದೆ. ಅದರಲ್ಲೂ ಸಹ ನಾನು ಭಾಗವಹಿಸುತ್ತೇನೆ. ಹೀಗಾಗಿ ಇನ್ನು ನಾಲ್ಕು ದಿನ ಫುಲ್ ಬ್ಯೂಸಿ ಆಗಿರುವೆ ಎಂದು ಡಿಕೆಶಿ ಹೇಳಿದ್ದಾರೆ.
ಇನ್ನು ಈ ಹಿಂದೆ ಬಿಜೆಪಿ ನಾಯಕರು ಡಿಕೆ ಕುಂಭಮೇಳಕ್ಕೆ ಹೋಗುವ ಬಗ್ಗೆ ಟೀಕೆ ಮಾಡಿದ ವೇಳೆ ಗರಂ ಆಗಿದ್ದ ಡಿಕೆ, ನನ್ನ ಧರ್ಮ, ನಂಬಿಕೆ, ಆಚರಣೆಯ ಬಗ್ಗೆ ಯಾರೂ ಕೂಡ ಮಾತನಾಡಬಾರದು ಎಂದು ಕೌಂಟರ್ ಕೊಟ್ಟಿದ್ದರು.