ಬೆಂಗಳೂರು ಗ್ರಾಮಾಂತರ (Bangalore rural) ಅಂದ್ರೆ ಡಿಕೆ ಬ್ರದರ್ಸ್ (DK brothers) ಭದ್ರಕೋಟೆ. 2019ರಲ್ಲಿ ಇಡೀ ಕರ್ನಾಟಕದಲ್ಲೇ ಕಾಂಗ್ರೆಸ್ (congress) ಮಕಾಡೆ ಮಲಗಿದ್ರೆ ಅಲ್ಲೊಬ್ಬ ಸಂಸದ ಮಾತ್ರ ಗೆದ್ದು ಬೀಗಿದ್ದು ಇತಿಹಾಸ.. ಇದೀಗ 2024ರಲ್ಲೂ ಬೆಂಗಳೂರು ಗ್ರಾಮಾಂತರದಲ್ಲಿ ದೋಸ್ತಿಯ ರಣತಂತ್ರವನ್ನೇ ಭೇಧಿಸಲು ಡಿಕೆ ಬ್ರದರ್ಸ್ ಸಜ್ಜಾಗ್ತಿದ್ದಾರೆ.. ಇವರ ಅರ್ಭಟಕ್ಕೆ ಬ್ರೇಕ್ ಹಾಕೋಕೆ ಬಿಜೆಪಿಯ ಚಾಣಕ್ಯ ಎಂಟ್ರಿ ಕೊಡ್ತಿದ್ದಾರೆ.
ಲೋಕಸಮರದಲ್ಲಿ ಬೆಂಗಳೂರು ಗ್ರಾಮಾಂತರ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್ (DK suresh) ಅಖಾಡದಲ್ಲಿ ಅಬ್ಬರಿಸ್ತಿದ್ದಾರೆ.. ಇತ್ತ ಕಾಂಗ್ರೆಸ್ ವಿರುದ್ಧ ಡಾ.ಸಿ.ಎನ್.ಮಂಜುನಾಥ್ (Dr.manjunath) ಎಂಬ ಮೈತ್ರಿ ಅಭ್ಯರ್ಥಿಯನ್ನ ಕಣಕ್ಕಿಳಿಸಿ ಜೆಡಿಎಸ್-ಬಿಜೆಪಿ (Ids-Bjp) ಚೆಕ್‌ಮೇಟ್ ಇಟ್ಟಿದೆ.. ಇದೀಗ ಮಂಜುನಾಥ್ ಪ್ರಚಾರಕ್ಕೆ ಮತ್ತಷ್ಟು ಬಲ ತರಲು ಗೃಹ ಸಚಿವ ಅಮತ್ ಶಾ (Amit sha) ರಾಜ್ಯಕ್ಕೆ ಬರ್ತಿದ್ದಾರೆ.. ಏ.2ರಂದು ಡಿಕೆ ಬ್ರದರ್ಸ್ ಕೋಟೆಗೆ ಬಿಜೆಪಿ ಚಾಣಕ್ಯ ಲಗ್ಗೆ ಇಡಲಿದ್ದು, ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಪರ ರಣಕಹಳೆಯನ್ನ ಮೊಳಗಿಸಲು ಮುಂದಾಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಪರ ಏ.2ರಂದು ಬೆಂ.ಗ್ರಾಮಾಂತರ ವ್ಯಾಪ್ತಿಯ ಚನ್ನಪಟ್ಟಣದಲ್ಲಿ (Chennapattana) ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.. ಈ ಮೂಲಕ ಡಿ.ಕೆ.ಬ್ರದರ್ಸ್ ಭದ್ರಕೋಟೆ ಬೇಧಿಸುವ ಪ್ಲಾನ್ ಮಾಡಿದ್ದಾರೆ. ಮಂಡ್ಯದಿಂದ (Mandya) ಸ್ಪರ್ಧೆ ಮಾಡ್ತಿರೋ ಹೆಚ್‌ಡಿಕೆ (Hdk) ಸದ್ಯ ಚನ್ನಪಟ್ಟಣ ಶಾಸಕ. ಹೀಗಾಗಿ ಹೆಚ್‌ಡಿಕೆ ಸ್ಪರ್ಧೆಯಿಂದ ಇಲ್ಲಿರೋ ಬಿಜೆಪಿ ಅಲೆ ಮಂಡ್ಯಕ್ಕೂ ತಲುಪಬೇಕು ಅನ್ನೋದು ಅಮಿತ್ ಶಾರ ತಂತ್ರ.