ಇಬ್ಬರು ಒಕ್ಕಲಿಗ ಪ್ರಮುಖ ನಾಯಕರ ನಡುವೆ ವಿಷ – ಅಮೃತದ ಫೈಟ್ ಶುರುವಾಗಿದೆ. ಲೋಕಸಭಾ ಚುನಾವಣೆ ಹಿನ್ನಲೆ ಈಗಾಗಲೇ ರಾಜ್ಯದಲ್ಲಿ ಪ್ರಮುಖ ನಾಯಕರ ನಡುವೆ ಮಾತಿನ ಯುದ್ಧ ಆರಂಭವಾಗಿದೆ. ಟೀಕೆ ಟಿಪ್ಪಣಿಗಳು ಈಗಾಗಲೇ ಆರಂಭವಾಗಿದೆ. ಪ್ರಧಾನಿ ಮೋದಿಯಿಂದ (pm modi) ಆರಂಭವಾಗಿ ಇಲ್ಲಿನ ಸಿದ್ದರಾಮಯ್ಯ (siddaramaiah) ವರೆಗೂ ಯಾರು ಈ ಟೀಕೆಗಳಿಂದ ದೂರ ಉಳಿಯಲು ಸಾಧ್ಯವೇ ಇಲ್ಲ . ಇದೇ ರೀತಿ ಇದೀಗ ಹೆಚ್.ಡಿ ಕುಮಾರಸ್ವಾಮಿ(HD Kumaraswamy) ಮತ್ತು ಡಿಕೆ.ಶಿವಕುಮಾರ್ (DK Shivakumar) ನಡುವೆ ಮಾತಿನ ಯುದ್ಧವೇ ಆರಂಭವಾಗಿದೆ.
ಮಂಡ್ಯದಿಂದ (mandya) ಕುಮಾರಸ್ವಾಮಿ ಕಣಕ್ಕಿಳಿಯೋದು ಕನ್ಫರ್ಮ್ ಆಗ್ತಿದಂಗೆ ಡಿಕೆ ಶಿವಕುಮಾರ್ (Dk shivakumar) ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ. ಕುಮಾರಸ್ವಾಮಿ ಆಡಿದ ಮಾತು ಡಿಕೆಶಿ ಯನ್ನ ಕೆರಳಿಸಿದೆ. ಕಾಂಗ್ರೆಸ್ ನವರು ನನಗೆ ವಿಷ ಹಾಕಿದ್ರು ಎಂದು ಪರೋಕ್ಷವಾಗಿ ಡಿಕೆ ಕುರಿತು ಕುಮಾರಸ್ವಾಮಿ ಆಡಿದ ಮಾತು ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿದೆ.
ಮಳೆ-ಚಳಿ ಎನ್ನದೇ ಸರ್ಕಾರಕ್ಕಾಗಿ ಬೀದಿಯಲ್ಲಿ ನಿಂತಿದ್ದು ನಾನು , ಆದ್ರೆ ಅಂದು ಯಾರು ಸರಕಾರವನ್ನು ತೆಗೆದರಲ್ಲ ಅವರ ಮನೆಗೆ ಇಂದು ಕುಮಾರಸ್ವಾಮಿ ಹೋಗ್ತಿದ್ದಾರೆ. ನಾನು ಏನು ವಿಷ ಹಾಕಿದ್ದೀನಿ ಎಂದು ಹೇಳಲಿ. ನಾನು ವಿಷ ಹಾಕಿದ್ದೀನೋ ಇಲ್ವೋ ಎಂಬುದು ನನ್ನ ಆತ್ಮ ಸಾಕ್ಷಿಗೆ ಗೊತ್ತಿದೆ , ನಾನು ನಂಬುವ ಶಕ್ತಿಗೆ ಗೊತ್ತಿದೆ ಎಂದು ಹೇಳಿದ್ರು. ಇದಕ್ಕೆ ಟಕ್ಕರ್ ಕೊಟ್ಟಿರುವ ಕುಮಾರಸ್ವಾಮಿ, ವಿಷ ಅಲ್ಲದೆ ಅಮೃತ ಹಾಕಿದ್ರಾ ?? ಅದಿಕ್ಕೆ ಅಲ್ವಾ ಸರ್ಕಾರ ಬಿದ್ದುಹೋಗಿದ್ದು ಎಂದು ಮತ್ತೆ ಡಿಕೆಶಿಯನ್ನ ವ್ಯಂಗ್ಯ ಮಾಡಿದ್ದಾರೆ.