• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, July 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನದಿಪಾತ್ರಗಳಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭೇಟಿ: ಪ್ರವಾಹ ನಿರ್ವಹಣೆ ಸಿದ್ಧತೆ ಪರಿಶೀಲನೆ

ಪ್ರತಿಧ್ವನಿ by ಪ್ರತಿಧ್ವನಿ
July 18, 2024
in Top Story, ಇತರೆ / Others, ಕರ್ನಾಟಕ
0
ನದಿಪಾತ್ರಗಳಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭೇಟಿ: ಪ್ರವಾಹ ನಿರ್ವಹಣೆ ಸಿದ್ಧತೆ ಪರಿಶೀಲನೆ
Share on WhatsAppShare on FacebookShare on Telegram

ಬೆಳಗಾವಿ: ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ವಿವಿಧೆಡೆ ಭೇಟಿ ನೀಡಿ ಘಟಪ್ರಭಾ, ಕೃಷ್ಣಾ ಹಾಗೂ ಹಿರಣ್ಯಕೇಶಿ ನದಿಪಾತ್ರದ ವಿವಿಧ ಪ್ರದೇಶಗಳನ್ನು ಪರಿಶೀಲಿಸಿದರು.ಸುತಗಟ್ಟಿ ಬಳಿ ಘಟಪ್ರಭಾ ನದಿಯ ಸೇತುವೆ ಬಳಿ ನದಿಯ‌ ಒಳಹರಿವು ಪ್ರಮಾಣ ಹಾಗೂ ಪ್ರಸ್ತುತ ನೀರಿನ ಪ್ರಮಾಣದ ಬಗ್ಗೆ ಅಧಿಕಾರಿಗಳಿಂದ‌ ಮಾಹಿತಿಯನ್ನು ಪಡೆದುಕೊಂಡರು.

ADVERTISEMENT

ಇದಾದ ನಂತರ ಸಂಕೇಶ್ವರ ಪಟ್ಟಣಕ್ಕೆ‌ ತೆರಳಿದ ಅವರು, ಸಂಭವನೀಯ ಪ್ರವಾಹದಿಂದ ಬಾಧಿತಗೊಳ್ಳಬಹುದಾದ ಪ್ರದೇಶಗಳನ್ನು ವೀಕ್ಷಿಸಿದರು.ಕಳೆದ ಬಾರಿ ಪ್ರವಾಹ ಬಂದಾಗ‌ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಅವರು, ಸಂಭವನೀಯ ಪ್ರವಾಹ ನಿರ್ವಹಣೆಗೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಹಶೀಲ್ದಾರರು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮೊಹಮ್ಮದ್ ರೋಷನ್ ಅವರು ನಿರ್ದೇಶನ ನೀಡಿದರು.

ಕೆಳಹಂತದಲ್ಲಿರುವ ಸೇತುವೆಗಳು ಮುಳುಗಡೆಯಾದಾಗ ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಜನರು ದಾಟದಂತೆ ಬ್ಯಾರಿಕೇಡ್ ಹಾಕಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.2019 ರ ಪ್ರವಾಹ ಸಂದರ್ಭದಲ್ಲಿ ಸ್ಥಾಪಿಸಲಾಗಿದ್ದ‌ ಕಾಳಜಿ ಕೇಂದ್ರಗಳಂತೆ ಈ ಬಾರಿಯೂ ಈಗಾಗಲೇ ಕಾಳಜಿ ಕೇಂದ್ರಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿರುತ್ತದೆ ಎಂದು ಹುಕ್ಕೇರಿ ತಹಶೀಲ್ದಾರ ಮಂಜುಳಾ ನಾಯಕ ವಿವರಿಸಿದರು.

ಚಿಕ್ಕೋಡಿ ತಾಲ್ಲೂಕಿನ ಮಾಂಜರಿ‌ಯ ಸೇತುವೆ ಬಳಿ ಕೃಷ್ಣಾ‌ ನದಿಯ ಒಳಹರಿವು ವೀಕ್ಷಿಸಿದರು. ನಂತರ ಯಡೂರ ಗ್ರಾಮದ ಬಳಿ ಬೋಟ್ ಮೂಲಕ ಕೃಷ್ಣಾ ನದಿಯಲ್ಲಿ ಸಂಚರಿಸಿದ ಜಿಲ್ಲಾಧಿಕಾರಿಗಳು, ತುರ್ತು ಸಂದರ್ಭದಲ್ಲಿ ಜನರು ಮತ್ತು ಜಾನುವಾರುಗಳ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.ನೆರೆಯ ಮಹಾರಾಷ್ಟ್ರದಲ್ಲಿ ವ್ಯಾಪಕ‌ ಮಳೆಯಾಗುತ್ತಿದ್ದು, ಅದೇ ರೀತಿ ಜಿಲ್ಲೆಯಲ್ಲಿಯೂ ಹಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ಸದಾ ಎಚ್ಚರಿಕೆ ವಹಿಸಬೇಕು. ನದಿಯ ಒಳ ಹರಿವಿನ ಮೇಲೆ ನಿರಂತರ ನಿಗಾ ವಹಿಸವುದರ ಜತೆಗೆ ತುರ್ತು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಬೋಟ್ ಗಳು ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಸದ್ಯಕ್ಕಿಲ್ಲ ಪ್ರವಾಹ ಭೀತಿ:ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ‌ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಸದ್ಯಕ್ಕೆ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ‌ಉದ್ಭವಿಸಿಲ್ಲ; ಆದಾಗ್ಯೂ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.ಈಗಾಗಲೇ 26 ಬೋಟ್ ಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಅಗತ್ಯಬಿದ್ದರೆ ಹೆಚ್ಚುವರಿ ಬೋಟ್ ಗಳನ್ನು ಕಾರವಾರದಿಂದ ತರಿಸಲಾಗುವುದು ಎಂದು ಹೇಳಿದರು.ಚಿಕ್ಕೋಡಿ ಉಪ ವಿಭಾಗಾಧಿಕಾರಿ ಬಸವರಾಜ ಸಂಪಗಾವಿ, ತಹಶೀಲ್ದಾರ ಕುಲಕರ್ಣಿ ಸೇರಿದಂತೆ ಕಂದಾಯ‌ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags: Congress PartyDivision of Belgaum Districtಸಿದ್ದರಾಮಯ್ಯ
Previous Post

ಬೆಂಗಳೂರು | ಹೊಸ ಮೆಟ್ರೋ ಮಾರ್ಗ ಡಬಲ್ ಡೆಕ್ಕರ್ ಮಾದರಿಯಲ್ಲಿ ನಿರ್ಮಾಣ : ಡಿ.ಕೆ.ಶಿವಕುಮಾರ್

Next Post

ಮಗನ ತಲೆಯನ್ನು ನೆಲಕ್ಕೆ ಚಚ್ಚಿ, ನೀರು ಕೇಳಿದರು ಕೊಡದೇ ಕ್ರೂರವಾಗಿ ಹಲ್ಲೆ ಮಾಡಿದ ತಾಯಿ: ವೀಡಿಯೋ

Related Posts

Toxic Ladies Teaser: ಪವರ್​ಫುಲ್ ಲೇಡಿಗಳ ಎಂಟ್ರಿ: ಟಾಕ್ಸಿಕ್‌ ಟೀಸರ್‌ ರಿಲೀಸ್..!
Top Story

Toxic Ladies Teaser: ಪವರ್​ಫುಲ್ ಲೇಡಿಗಳ ಎಂಟ್ರಿ: ಟಾಕ್ಸಿಕ್‌ ಟೀಸರ್‌ ರಿಲೀಸ್..!

by ಪ್ರತಿಧ್ವನಿ
July 1, 2026
0

ಯಶ್‌ ಅಭಿನಯದ ಟಾಕ್ಸಿಕ್ ಸಿನಿಮಾದ ಹೊಸ ಟೀಸರ್‌ ರಿಲೀಸ್‌ ಆಗಿದೆ. ಈ ಟೀಸರ್‌ ನಲ್ಲಿ ಲೇಡಿಸ್‌ ಗ್ಯಾಂಗ್‌ ಅಬ್ಬರವಿದೆ. ವಿಶೇಷವೆಂದರೆ ಟೀಸರ್‌ ಮಕ್ಕಳು ನೋಡುವಂತಿಲ್ಲ! ಯೆಸ್‌, ಟೀಸರ್​​...

Read moreDetails
₹10 ಪಿನ್‌ ಮಾರಿ ಬದುಕುತ್ತಿದ್ದ ಅಜ್ಜಿಯ ಹೊಟ್ಟೆಪಾಡು ಕಸಿದ ಸೇಫ್‌ ಫುಟ್‌ಪಾತ್ ಅಭಿಯಾನ!

₹10 ಪಿನ್‌ ಮಾರಿ ಬದುಕುತ್ತಿದ್ದ ಅಜ್ಜಿಯ ಹೊಟ್ಟೆಪಾಡು ಕಸಿದ ಸೇಫ್‌ ಫುಟ್‌ಪಾತ್ ಅಭಿಯಾನ!

July 1, 2026
ಟೌನ್‌ಶಿಪ್ ವಿರುದ್ಧ ಹೈಕೋರ್ಟ್‌ಗೆ PIL: ಸರ್ಕಾರದ ಮಹತ್ವದ ಯೋಜನೆಗೆ ಬೀಳುತ್ತಾ ಬ್ರೇಕ್‌..?

ಟೌನ್‌ಶಿಪ್ ವಿರುದ್ಧ ಹೈಕೋರ್ಟ್‌ಗೆ PIL: ಸರ್ಕಾರದ ಮಹತ್ವದ ಯೋಜನೆಗೆ ಬೀಳುತ್ತಾ ಬ್ರೇಕ್‌..?

July 1, 2026
Ram Mandir Theft

ರಾಮನಿಗೆ ನಾಮ ಹಾಕಿದ್ದವರಾರು..? : ಹೃದಯವಂತ ಕರುನಾಡಿಗೆ ಹುಂಡಿ ಕಳ್ಳತನದ ಕಳಂಕ ತಂದರೇ ದುರುಳರು..?

July 1, 2026
ಬಂಡಿಪುರ, ನಾಗರಹೊಳೆ ಸಫಾರಿಗೆ ಗ್ರೀನ್ ಸಿಗ್ನಲ್: ಸುರಕ್ಷತೆಗೆ ಮೊದಲ ಆದ್ಯತೆ

ಬಂಡಿಪುರ, ನಾಗರಹೊಳೆ ಸಫಾರಿಗೆ ಗ್ರೀನ್ ಸಿಗ್ನಲ್: ಸುರಕ್ಷತೆಗೆ ಮೊದಲ ಆದ್ಯತೆ

June 30, 2026
Next Post

ಮಗನ ತಲೆಯನ್ನು ನೆಲಕ್ಕೆ ಚಚ್ಚಿ, ನೀರು ಕೇಳಿದರು ಕೊಡದೇ ಕ್ರೂರವಾಗಿ ಹಲ್ಲೆ ಮಾಡಿದ ತಾಯಿ: ವೀಡಿಯೋ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada