ರಾಯಚೂರು ಜಿಲ್ಲೆಯಲ್ಲಿ ಶನಿವಾರ (ಆಗಸ್ಟ್ 12) ನಡೆದ ಕರ್ನಾಟಕ ಸಹಕಾರಿ ಎಣ್ಣೆಬೀಜಗಳ ಬೆಳೆಗಾರರ ಒಕ್ಕೂಟದ (ಕೆಒಎಫ್) ಅಕ್ರಮ ಎಸಗಲಾಗಿದೆ ಎಂದು ಪರೀಕ್ಷೆ ಬರೆದ ಅಭ್ಯರ್ಥಿಗಳು ಆರೋಪಿಸಿದ್ದಾರೆ ಎಂದು ವರದಿಯಾಗಿದೆ.
ನಗರದ ವೇದಾಂತ ಕಾಲೇಜಿನಲ್ಲಿ ಶನಿವಾರ ಕೆಒಎಫ್ ಅರ್ಹತಾ ಪರೀಕ್ಷೆ ಆಯೋಜಿಸಲಾಗಿತ್ತು. ರಾಯಚೂರು ವಿಶ್ವವಿದ್ಯಾಲಯಕ್ಕೆ ಪರೀಕ್ಷೆಯ ಹೊಣೆಗಾರಿಕೆಯನ್ನು ನೀಡಲಾಗಿತ್ತು. ಈ ಪರೀಕ್ಷೆಯಲ್ಲಿ ಹಲವು ಅಭ್ಯರ್ಥಿಗಳು ಹಾಜರಾಗಿದ್ದರು. ಆದರೆ ಕೆಲ ವಿದ್ಯಾರ್ಥಿಗಳು ಕೊನೆಯ 15 ನಿಮಿಷ ಇದ್ದಾಗ ಪರೀಕ್ಷಾ ಕೊಠಡಿಗೆ ಬಂದಿದ್ದಾರೆ. ಅವರನ್ನು ಬೇರೆ ಕೋಣೆಯಲ್ಲಿ ಕೂರಿಸಿ ಪರೀಕ್ಷೆಯನ್ನು ಬರಿಸಲಾಗಿದೆ ಎಂದು ಉಳಿದ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ನಿಯಮ ಪ್ರಕಾರ ಪರೀಕ್ಷೆ ಆರಂಭಕ್ಕೂ 15 ನಿಮಿಷ ಮುಂಚಿತವಾಗಿ ಕೋಣೆಗೆ ಬರಬೇಕು ಆದರೆ ರಾಯಚೂರು ಜಿಲ್ಲೆಯಲ್ಲಿ ನಡೆದ ಕೆಒಎಫ್ ಪರೀಕ್ಷೆಯಲ್ಲಿ ಪರೀಕ್ಷೆ ವೇಳೆ ಐದು ಜನ ಅಭ್ಯರ್ಥಿಗಳು ಕೊನೆಯ 15 ನಿಮಿಷಗಳಿದ್ದಾಗ ಬಂದಿದ್ದಾರೆ. ಇದು ಅಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ ಬೆಂಕಿ ದುರಂತ | ಮೂವರನ್ನು ವಶಕ್ಕೆ ಪಡೆದ ಪೊಲೀಸರು
ಘಟನೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಅಲ್ಲಿಗೆ ಆಗಮಿಸಿದಂತಹ ಪರೀಕ್ಷೆ ನಡೆಸುವ ಅಧಿಕಾರಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಐದು ಜನ ಅಭ್ಯರ್ಥಿಗಳು ಕೂಡ ಅಲ್ಲಿಂದ ಕಾಣೆಯಾಗಿದ್ದಾರೆ. ಇದರಿಂದ ಅಸಮಾಧಾನಗೊಂಡ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಮುಂದೆ ಸಾಮೂಹಿಕವಾಗಿ ಜಮಾಯಿಸಿ ರಾಯಚೂರು ವಿದ್ಯಾಲಯದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಪರೀಕ್ಷೆ ಅಕ್ರಮ ಸಂಬಂಧ ಅಸಮಾಧಾನಿತ ಅಭ್ಯರ್ಥಿಗಳು ಕರ್ನಾಟಕ ಎಣ್ಣೆಬೀಜಗಳ ಒಕ್ಕೂಟದ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಅತನೂರು ಅವರಿಗೆ ದೂರಿದ್ದಾರೆ. ಆದರೆ ಅವರು ಪರೀಕ್ಷೆ ನಡೆಸುವ ಬಗ್ಗೆ ತಮಗೆ ಯಾವುದೇ ರೀತಿೈ ಸಂಬಂಧ ಇರುವುದಿಲ್ಲ. ಪರೀಕ್ಷೆ ನಡೆಸಲು ಒಂದು ವಿಶ್ವವಿದ್ಯಾಲಯಕ್ಕೆ ಏಜೆನ್ಸಿ ರೂಪದಲ್ಲಿ ನೀಡಿರುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. .