ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಿಎಂ ಸಿದ್ದರಾಮಯ್ಯರನ್ನು ಹಾಡಿಹೊಗಳಿದ್ದಾರೆ. ಖಾಸಗಿ ಮಾಧ್ಯಮವೊಂದರ ಸಿನಿಮಾ ಸಮಾರಂಭದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಔಚಿತ್ಯ ಪ್ರಜ್ಞೆ ಹೇಗಿತ್ತು ಅನ್ನೋದನ್ನು ವರ್ಣಿಸಿದ್ದಾರೆ.
ಸಾಮಾನ್ಯವಾಗಿ ಅಧಿಕಾರರೂಢ ಮಂತ್ರಿಗಳು ಯಾವ ಸಭೆಗೇ ಹೋಗಲಿ ಮೈಕು ಸಿಕ್ಕೊಡನೆ “ನಮ್ಮ ಸರ್ಕಾರದಲ್ಲಿ…” ಎಂದು ತಮ್ಮ ಪಕ್ಷದ ತುತ್ತೂರಿ ಊದಿಯೇಬಿಡುತ್ತಾರೆ. ಆದರೆ ಪ್ರಜಾವಾಣಿಯ ಸಿನಿಮಾ ಸಮಾರಂಭದಲ್ಲಿ ಸಿದ್ದರಾಮಯ್ಯನವರು ಅಪ್ಪಿತಪ್ಪಿ ಒಂದಕ್ಷರವನ್ನೂ ಸಿನಿಮಾದ ಆಚೆಗೆ ಮಾತನಾಡಲಿಲ್ಲ. ಈ ಸಮಯಪ್ರಜ್ಞೆ ಮತ್ತು ಔಚಿತ್ಯಪ್ರಜ್ಞೆ ರಾಜಕಾರಣಕ್ಕೆ ಅಗತ್ಯ. pic.twitter.com/76gkm5dd10
— Nagathihalli Chandrashekara (@NomadChandru) June 3, 2023
ಈ ಸಂಬಂಧ ಟ್ವೀಟ್ ಮಾಡಿರುವ ನಾಗತಿಹಳ್ಳಿ ಚಂದ್ರಶೇಖರ್, ಸಾಮಾನ್ಯವಾಗಿ ಅಧಿಕಾರರೂಢ ಮಂತ್ರಿಗಳು ಯಾವ ಸಭೆಗೇ ಹೋಗಲಿ ಮೈಕು ಸಿಕ್ಕೊಡನೆ “ನಮ್ಮ ಸರ್ಕಾರದಲ್ಲಿ…” ಎಂದು ತಮ್ಮ ಪಕ್ಷದ ತುತ್ತೂರಿ ಊದಿಯೇಬಿಡುತ್ತಾರೆ. ಆದರೆ ಪ್ರಜಾವಾಣಿಯ ಸಿನಿಮಾ ಸಮಾರಂಭದಲ್ಲಿ ಸಿದ್ದರಾಮಯ್ಯನವರು ಅಪ್ಪಿತಪ್ಪಿ ಒಂದಕ್ಷರವನ್ನೂ ಸಿನಿಮಾದ ಆಚೆಗೆ ಮಾತನಾಡಲಿಲ್ಲ. ಈ ಸಮಯಪ್ರಜ್ಞೆ ಮತ್ತು ಔಚಿತ್ಯಪ್ರಜ್ಞೆ ರಾಜಕಾರಣಕ್ಕೆ ಅಗತ್ಯ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಇದೀಗ ವೈರಲ್ ಆಗಿದೆ.