ಕಲ್ಕತ್ತಾ: ದೀದಿ ಮಮತಾ ಬ್ಯಾನರ್ಜಿ ನಾಡಿನಲ್ಲಿ ನಿರಂತರ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಲೇ ಇದೆ. ಇತ್ತೀಚಿಗೆ ಟಿಎಂಸಿ ನಾಯಕನೋರ್ವ ನಡು ರಸ್ತೆಯಲ್ಲಿ ಯುವತಿಯನ್ನು ಥಳಿಸಿದ ಕುಕೃತ್ಯಮಾಸುವ ಮುನ್ನವೇ ಮತ್ತೊಂದು ಹಿಂಸಾತ್ಮಕ ಪ್ರಕರಣ ಬೆಳಕಿಗೆ ಬಂದಿದೆ.
ಕಮರ್ ಹಟಿಯಲ್ಲಿ ಎಂಎಲ್ ಎ ಮದನ್ ಲಾಲ್ ಆಪ್ತ ತಲ್ತಲಾ ಕ್ಲಬ್ ನಲ್ಲಿ ಯುವತಿಯೊಬ್ಬಳಿಗೆ ಮನಸೋ ಇಚ್ಛೆ ದೊಣ್ಣೆಯಿಂದ ಥಳಿಸಿದ್ದಾನೆ. ಯುವತಿ ನೋವಿನಿಂದ ಚೀರುತ್ತಿದ್ದರೂ ಆತ ಬಿಡದೇ ಹೊಡೆದು ಹೊಡೆದು ಸಹಚರರ ಜತೆ ನಗುತ್ತಾ ವಿಕೃತ ಸಂತೋಷ ಪಟ್ಟಿದ್ದಾನೆ. ಎಂಎಲ್‌ಎ ಆಪ್ತನೆಂದು ಹೇಳಲಾಗುತ್ತಿರುವ ಜಯಂತ್ ಸಿಂಘ್‌ನ ಈ ಕೃತ್ಯದ ವಿಡಿಯೋ ವೈರಲ್ ಆಗಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ.
ಬಿಜೆಪಿ ಪಶ್ಚಿಮ ಬಂಗಾಳ ಕೂಡ ಈ ವೀಡಿಯೋ ಹಂಚಿಕೆ ಮಾಡಿಕೊಂಡು ಆಕ್ರೋಶ ವ್ಯಕ್ತಪಡಿಸಿದೆ. ಮಹಿಳೆಯರ ಹಕ್ಕುಗಳನ್ನು ಪ್ರತಿಪಾದನೆ ಮಾಡುವ ಮಮತಾ ಸರ್ಕಾರದ ಅಡಿಯಲ್ಲಿ ಈ ಅಮಾನುಷ ಕೃತ್ಯ ನಡೆದಿದ್ದು, ಮಾನವ ಸಮಾಜಕ್ಕೇ ಕಳಂಕವಾಗಿದೆ ಎಂದು ಬಿಜೆಪಿ ಆಕ್ರೋಶ ಹೊರಹಾಕಿದೆ.