
ಜಾತಿ ಜಾತಿ ಮಧ್ಯ ಸಂಘರ್ಷ ಮಾಡಿ, ಸಿದ್ದರಾಮಯ್ಯ ರಾಜ್ಯವನ್ನು ಸರ್ವನಾಶ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಎಂದಿಗೂ ಜ್ಯಾತ್ಯಾತೀತ ಅಂತ ಹೇಳುತ್ತದೆ. ಆದ್ರೆ ರಾಜ್ಯದಲ್ಲಿ ಈಗ ನಡೆಯುತ್ತಿರೋದು ಏನು? ಜಾತಿ ಸಂಘರ್ಷಕ್ಕೆ ಏನೇನು ಬೇಕು ಅದಕ್ಕೆ ವೇದಿಕೆ ಸಿದ್ಧ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ. ಇವರು ಬಂದು ಎರಡು ವರ್ಷ ಆಯ್ತು, ಆವಾಗಿನಿಂದ ಯಾಕೆ ವರದಿ ಜಾರಿ ಮಾಡಲಿಲ್ಲ..? ಚೇರ್ ಉಳಿಸಿಕೊಳ್ಳಬೇಕಂತ ಈ ಡ್ರಾಮಾ ಆರಂಭ ಮಾಡಿದ್ದಾರೆ ಎಂದಿದ್ದಾರೆ ಕೇಂದ್ರ ಸಚಿವ ಕುಮಾರಸ್ವಾಮಿ. ಒಬಿಸಿ ಮೀಸಲಾತಿ ಏರಿಕೆ ವಿಚಾರದ ಬಗ್ಗೆ ಮಾತನಾಡಿ, ಏನೇನು ಮಾಡುತ್ತಾರೆ ನೋಡೋಣ ಎಂದಿದ್ದಾರೆ ಕುಮಾರಸ್ವಾಮಿ.
ದುಡ್ಡಿನಿಂದ ಏನು ಬೇಕಾದರೂ ಗೆಲ್ಲಬಹುದು ಎಂದು ಕಾಂಗ್ರೆಸ್ ಸರ್ಕಾರ ತಿಳಿದುಕೊಂಡಿದೆ. ಬೆಂಗಳೂರಿನಲ್ಲಿ ನಾಗರಿಕರ ಬದುಕನ್ನು ಎಲ್ಲಿಗೆ ತೆಗೆದುಕೊಂಡು ಹೋಗ್ತಿದ್ದೀರಿ ಎಂದು ಪ್ರಶ್ನಿಸಿರುವ ಕೇಂದ್ರ ಸಚಿವರು, ಕಳೆದ ಎರಡು ವರ್ಷದಿಂದ ಬೆಂಗಳೂರಿನಲ್ಲಿ ಏನು ಅಭಿವೃದ್ಧಿ ಕೆಲಸ ಆಗಿದೆ..? ಬೆಂಗಳೂರಿನ ನಾಗರಿಕರ ಮೇಲೆ ತೆರಿಗೆ ಹೊರೆ ಹಾಕುತ್ತಿದ್ದೀರಿ. ಮನೆ ಆವರಣದಲ್ಲಿ ಕಾರ್ ಪಾರ್ಕಿಂಗ್ ತೆರಿಗೆ ಹಾಕ್ತಿದ್ದೀರಿ ಅಂದ್ರೆ ಇದಕ್ಕೆ ಅರ್ಥ ಇದೆಯಾ..? ಸರ್ಕಾರ ಬೆಲೆ ಏರಿಕೆ ಅಷ್ಟೇ ಅಲ್ಲ, ಸಂಪೂರ್ಣ ರಾಜ್ಯ ನಾಶ ಮಾಡ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.

ಮೊನ್ನೆ ನಾನು ಹೇಳಿದ್ದೆ, ನನ್ನ ಬಳಿ ಟನ್ ಗಟ್ಟಲೆ ದಾಖಲೆ ಇದೆ ಅಂತಾ. ಅದಕ್ಕೆ ಪ್ರತಿಭಟನೆ ಮಾಡ್ತಿದ್ದೀರಿ, ನಿಮಗೆ ಯೋಗ್ಯತೆ ಇದ್ದರೆ ಮರ್ಯಾದೆಯಿಂದ ಆಡಳಿತ ನಡೆಸಿ. ನಾನು ಸುಮ್ಮನೇ ಹೇಳಿಲ್ಲ, ದಾಖಲೆ ಇದೆ ಅಂತ. ಈ ಸರ್ಕಾರ ರಾಜ್ಯವನ್ನ ಲೂಟಿ ಹೊಡೆಯುತ್ತಿದೆ. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಿಬೇಕು ಅಂದ್ರೆ ಐದು ವರ್ಷದ ಅಧಿಕಾರ ನಮ್ಮ ಕೈಗೆ ಕೊಡಿ. ರಾಜ್ಯದಲ್ಲಿನ ಸಂಪತ್ತು ಸುಭದ್ರವಾಗಿದ್ದರೆ, ಕೇಂದ್ರದ ಬಳಿ ಭಿಕ್ಷೆ ಕೇಳುವ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಕುಟುಕಿದ್ದಾರೆ.

ಜಾತಿ ಗಣತಿ ವರದಿ ಮಂಡನೆ ವಿಚಾರದ ಬಗ್ಗೆ ಕಿಡಿಕಾರಿದ್ದು, ಜಾತಿ ಜನಗಣತಿಗೆ ಅರ್ಥ ಇಲ್ಲ, ಕಾಂತರಾಜು ವರದಿ ಸಿದ್ದ ಮಾಡಿ ಹತ್ತು ವರ್ಷ ಆಗಿದೆ. ಗ್ಯಾರಂಟಿ ಸ್ಕೀಮ್ನಿಂದ ಬಡವರ ಆರ್ಥಿಕತೆ ಸ್ಥಿತಿ ವೃದ್ಧಿ ಮಾಡಿಲ್ಲವೇ ಎಂದು ವ್ಯಂಗವಾಡಿದ್ದಾರೆ ಕುಮಾರಸ್ವಾಮಿ. ಹೊಸದಾಗಿ ನೀವು ವರದಿ ಕೊಡಬೇಕಾಗುತ್ತದೆ. ಹತ್ತು ವರ್ಷದಲ್ಲಿ ಬಹಳ ಡೆವಲಪ್ಮೆಂಟ್ ಆಗಿದೆ ಎಂದು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.