
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಪದೇ ಪದೇ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗ್ತಿದೆ ಅನ್ನೋ ಆರೋಪ ಮಾಡ್ತಾರೆ. ನಾನು ಈ ಸಂಧರ್ಭದಲ್ಲಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ಅವರ ಹೇಳಿಕೆ ಉಲ್ಲೇಖ ಮಾಡ್ತೀನಿ, ಕೇಂದ್ರ ಸರ್ಕಾರದ ಜೊತೆ ಅನ್ಯೋನ್ಯ ಸಂಬಂಧ ಇಟ್ಟುಕೊಂಡು ಕೇಂದ್ರದ ಬಗ್ಗೆ ಒಳ್ಳೆಯ ಮಾತಾಡ್ತಾ ಇದ್ದಾರೆ. ಆದರೆ ದುರಾದೃಷ್ಟವಶಾತ್ ನಮ್ಮ ಸಿಎಂ ಪದೇ ಪದೇ ಕೇಂದ್ರದ ಮೇಲೆ ಆರೋಪ ಮಾಡ್ತಾರೆ. ಗುಜರಾತ್ಗಿಂತ ಹೆಚ್ಚು ತೆರಿಗೆ ಪಾಲು ನಮ್ಮ ರಾಜ್ಯಕ್ಕೆ ಬಂದಿದೆ ಎಂದಿದ್ದಾರೆ ಬಿ.ವೈ ವಿಜಯೇಂದ್ರ.
ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಮಾತು ಹೇಳಿದ್ದಾರೆ. ಕೇಂದ್ರ ಸರ್ಕಾರ ಇನ್ನೂರು ಲಕ್ಷ ಕೋಟಿ ಸಾಲ ಮಾಡಿದ್ದಾರೆ ಅಂತಾ ಹೇಳಿದ್ದಾರೆ. ಜಿಡಿಪಿ ರೇಷಿಯೋ ಹಿಂದಿನ ಯುಪಿಎ ಸರ್ಕಾರಕ್ಕಿಂತ ಕಡಿಮೆ ಇದೆ. ಭಾರತ ಜಗತ್ತಿನ ಐದನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ರಾಜ್ಯದ ಹಣಕಾಸು ಸಚಿವರು ಆಗಿರುವ ಸಿಎಂ ಸಿದ್ದರಾಮಯ್ಯ ಮಂಡನೆ ಮಾಡಿರುವ ಬಜೆಟ್ ಯಾರಿಗೂ ಉಪಯೋಗ ಇಲ್ಲ. ಎಲ್ಲರ ನಿರೀಕ್ಷೆ ಹುಸಿಯಾಗಿದೆ. ರಾಜ್ಯದ ಅಭಿವೃದ್ಧಿ ಗೆ ಪೂರಕವಾಗಿ ಇಲ್ಲ. ರೈತರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಯಾರಿಗೂ ಸಹಾ ಉಪಯೋಗ ಇಲ್ಲ ಎಂದಿದ್ದಾರೆ.

ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ರಾಜ್ಯಪಾಲರ ಭಾಷಣದ ಮೇಲೆ ನಾವೆಲ್ಲ ಮಾತಾಡಿದೆವು. ಅದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ಕೊಡಬೇಕಿತ್ತು. ಬೆಳಗ್ಗೆ 10:30ಕ್ಕೆ ಸ್ಟಾರ್ಟ್ ಮಾಡಿದ್ರು. ಒಂದು ಗಂಟೆಯಲ್ಲಿ ಕೊಡುವ ಉತ್ತರವಾಗಿತ್ತು. ಆದರೆ ಹೇಳಿದ್ದೆ ಹೇಳಿದ್ದಾರೆ, ಐದಾರು ಬಾರಿ ಹೇಳಿದ್ದೆ ಹೇಳಿದ್ದಾರೆ. ಸರಿಯಾಗಿ ರೆಡಿಯಾಗಿ ಬಂದಂತೆ ಕಾಣಿಸಲಿಲ್ಲ. ವಿಷಯವನ್ನು ಅವರು ಹೇಳಿಲ್ಲ. ನಾವೇನು ಪ್ರಸ್ತಾಪ ಮಾಡಿದ್ದೆವು, ಎಸ್ಸಿ ಎಸ್ಟಿ ಹಣದ ಬಗ್ಗೆ ನಾನು ಬಜೆಟ್ ಮೇಲೆ ಮಾತಾಡಿದ್ದೆ. ಲಾ ಅಂಡ್ ಆರ್ಡರ್, ಬೀದರ್ ಪ್ರಕರಣದ ಬಗ್ಗೆ ಮಾತಾಡಿದ್ದೆ. ಮೈಸೂರು ಪ್ರಕರಣ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟದ ಬಗ್ಗೆ ಮಾತನಾಡಿದ್ದೆ. ಮೈಕ್ರೋ ಫೈನಾನ್ಸ್, ಹುಬ್ಬಳ್ಳಿ ಕೇಸ್ ವಾಪಸ್ ವಿಚಾರ ಮಾತಾಡಿದ್ದೆ, ಆದರೆ ಇದರ ಬಗ್ಗೆ ಸಿಎಂ ಮಾತಾಡಿಲ್ಲ ಎಂದು ದೂರಿದ್ದಾರೆ.

ಎಸ್ಸಿ ಎಸ್ಟಿ ಹಣ ದುರುಪಯೋಗ ಮುಚ್ಚಾಕೋ ಪ್ರಯತ್ನ ಇದು ಎಂದಿರುವ ಆರ್. ಅಶೋಕ್, ಸಿಎಂ ಐದು ಗಂಟೆಯ ಭಾಷಣ ಮಾಡಿದ್ದಾರೆ. ಇದು ಸಂತೆಯ ಭಾಷಣ, ಸಿಎಂ ಭಾಷಣದಲ್ಲಿ ಏನೂ ಇಲ್ಲ. ಕೇವಲ ಕಾಲ ಹರಣ ಮಾಡಿದ್ದಾರೆ. ಸದನ ನಡೆಯಬಾರದು, ದಲಿತರ ಹಣ ದುರುಪಯೋಗ ಮಾಡಿರೋದು ಹೈಲೈಟ್ ಆಗಬಾರದು ಎಂದು ಹೀಗೆ ಮಾತಾಡಿದ್ರು. ರಾಜ್ಯಪಾಲರ ಭಾಷಣದಲ್ಲಿ RSS ಪ್ರಸ್ತಾಪ ಇಲ್ಲ. ನಾವು ಮಾತಾಡುವಾಗ RSS ಬಗ್ಗೆ ಪ್ರಸ್ತಾಪಿಸಿಲ್ಲ. ಹೀಗಿದ್ದರೂ ಗಲಭೆಗೆ RSS ಕಾರಣ ಎಂದು ಹೇಳಿಕೆ ಮಾಡಿರೋದು ಎಷ್ಟು ಸರಿ..? ಎಂದು ಪ್ರಶ್ನಿಸಿದ್ದಾರೆ. ದಲಿತರ ಹಣ ದುರುಪಯೋಗ ಮಾಡಿರೋದು ದಲಿತರಿಗೆ ಗೊತ್ತಾಗಬಾರದು ಅನ್ನೋ ಪ್ರಯತ್ನ ಇದು. ನಾವು ಕೇಳಿರೋ ಪ್ರಶ್ನೆಗೆ ಉತ್ತರ ಕೊಡಬೇಕಿತ್ತು. ಆದರೆ RSS ಬಗ್ಗೆ ಸುಮ್ನೆ ಪ್ರಸ್ತಾಪ ಮಾಡಿದ್ದಾರೆ. RSS ದೇಶಪ್ರಮಿ ಸಂಘಟನೆ ಎಂದಿದ್ದಾರೆ.

PFI ಕೇಸ್ ವಾಪಸ್ ತೆಗೆದುಕೊಂಡಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎಂದರೆ ಏನ್ ಕ್ರಮ ಇವರದ್ದು..? ಕಾಂಗ್ರೆಸ್ ಮನಸ್ಥಿತಿ ಏನು ಅನ್ನೋದು ಇದರಿಂದಲೇ ಗೊತ್ತಾಗುತ್ತದೆ. ಸಧನ ನಡೆಸಲು ಅವರಿಗೆ ಮನಸಿಲ್ಲ. ಸದನ ಮುಂದೂಡಲು ಏನ್ ಮಾಡಬೇಕೋ ಅದನ್ನ ಮಾಡ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ದೂರಿದ್ದಾರೆ. ಆದರೆ ಸಿಎಂ ಭಾಷಣವನ್ನು ಬಹಿಷ್ಕಾರ ಮಾಡಿ ಬಿಜೆಪಿ ಸಭಾತ್ಯಾಗ ಮಾಡಿದೆ. ಸಿಎಂ ಭಾಷಣದ ಮೇಲೆ ಸದನದಲ್ಲಿ ಚರ್ಚೆ ಮಾಡಲು ಅವಕಾಶವಿತ್ತು. ಆದರೆ ಸಿಎಂ ಉತ್ತರವನ್ನೇ ಕೇಳದೆ ಸಭಾತ್ಯಾಗ ಮಾಡಿ ಹೊರ ಬಂದಿದ್ದಾರೆ.












