• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕಂದಹಾರ್, ಹೆರಾತ್‌ನ್ನು ವಶಪಡಿಸಿಕೊಂಡಿದೆಯೇ ತಾಲಿಬಾನ್?

ಫಾತಿಮಾ by ಫಾತಿಮಾ
August 13, 2021
in ದೇಶ, ವಿದೇಶ
0
ಕಂದಹಾರ್, ಹೆರಾತ್‌ನ್ನು ವಶಪಡಿಸಿಕೊಂಡಿದೆಯೇ ತಾಲಿಬಾನ್?
Share on WhatsAppShare on FacebookShare on Telegram

ಅಂದುಕೊಂಡಿರುವುದಕ್ಕಿಂತ 90 ದಿನಗಳ ಮೊದಲೇ ತಾಲಿಬಾನ್ ಕಾಬೂಲ್‌ನ್ನು ವಶಪಡಿಸಿಕೊಳ್ಳಲಿದೆ ಎಂಬ ಅಮೆರಿಕ ಗುಪ್ತಚರ ಇಲಾಖೆಯ ವರದಿಗಳ ನಡುವೆಯೇ ಗುರುವಾರ ಅಫಘಾನಿಸ್ತಾನದ ಮೂರನೇ ಅತಿದೊಡ್ಡ ನಗರವಾದ ಹೆರಾತ್‌ನ್ನು ವಶಪಡಿಸಿಕೊಳ್ಳುವ ಹಾದಿಯಲ್ಲಿ ಅಫ್ಘಾನ್ ಮಿಲಿಟರಿಯೊಂದಿಗೆ ಭಾರಿ ಹೋರಾಟ ನಡೆಸಿದೆ. ಈ ನಗರ ರಾಜಧಾನಿ ಕಾಬೂಲ್‌ನಿಂದ ಕೇವಲ 150 ಕಿಮೀ ದೂರದಲ್ಲಿದೆ.

ADVERTISEMENT

ತಾಲಿಬಾನ್ ಇರಾನ್ ಗಡಿಯ ಸಮೀಪವಿರುವ ಹೆರಾತ್ ನ ನಿಯಂತ್ರಣವನ್ನು ಪಡೆದುಕೊಂಡಿದೆ ಎಂದು‌‌ ಪ್ರತಿಪಾದಿಸುತ್ತಿದೆ. ಮೇ ತಿಂಗಳಲ್ಲಿ ದೇಶದೊಳಗೆ ತನ್ನ ನೆಲೆಯನ್ನು ಮರುಸ್ಥಾಪನೆ ಮಾಡಲು  ಆರಂಭಿಸಿದಾಗಿನಿಂದ ಹೆರಾತ್ ಮತ್ತು ಕಂದಹಾರ್‌ನ ಗೆಲುವು ತಾಲಿಬಾನ್‌ಗೆ ಅತ್ಯಂತ ಮಹತ್ವದ್ದಾಗಿದೆ. ಅಫ್ಘಾನಿಸ್ತಾನದ ಎರಡನೇ ಅತಿ ದೊಡ್ಡ ನಗರವಾದ ಕಂದಹಾರ್ ಈ ಗುಂಪಿನ ಆಧ್ಯಾತ್ಮಿಕ ನೆಲೆಯಾಗಿಯೂ ಗುರುತಿಸಿಕೊಂಡಿದೆ. ರಾಜಧಾನಿಯಿಂದ 150 ಕಿಮೀ ದೂರದಲ್ಲಿರುವ, ಕಂದಹಾರ್‌ ಮತ್ತು ಕಾಬೂಲ್ ರಸ್ತೆಯಲ್ಲಿರುವ ಘಜ್ನಿಯನ್ನು ಗುರುವಾರ ವಶಪಡಿಸಿಕೊಂಡ ನಂತರ ಕೂಡಾ ತಾಲಿಬಾನ್ ಸರ್ಕಾರದೊಂದಿಗೆ ಅಧಿಕಾರ ಹಂಚಿಕೊಳ್ಳುವಿಕೆಯ ವರದಿಗಳನ್ನು ತಳ್ಳಿಹಾಕಿದೆ.

ಹಿಂಸಾಚಾರಕ್ಕೆ ಹೆದರಿ ದೇಶದ ಎಲ್ಲೆಡಯಿಂದ ರಾಜಧಾನಿಗೆ ಜನ ಪಲಾಯನ ಮಾಡುತ್ತಿದ್ದು ಕಾಬೂಲಿನ ಪ್ರವೇಶ ದ್ವಾರದಲ್ಲಿ ಉಸಿರುಗಟ್ಟುವ ಪರಿಸ್ಥಿತಿ ಇದೆ ಎಂದು ಕೆಲವು ಪಾಶ್ಚಾತ್ಯ ಭದ್ರತಾ ಸಂಸ್ಥೆಗಳು ತಿಳಿಸಿವೆ.

ತನ್ನ ನಾಗರಿಕರನ್ನು ದೇಶವನ್ನು ತೊರೆಯುವಂತೆ ಒತ್ತಾಯಿಸಿದ ಯುಎಸ್ ರಾಯಭಾರ ಕಚೇರಿಯು, ಭದ್ರತಾ ಪರಿಸ್ಥಿತಿಗಳು ಉತ್ತಮವಾಗಿಲ್ಲ ಎಂದಿದೆ. “ಅಫ್ಘಾನಿಸ್ತಾನದಲ್ಲಿ ಯುಎಸ್ ನಾಗರಿಕರಿಗೆ ಸಹಾಯ ಮಾಡುವ ಸಾಮರ್ಥ್ಯವು ಕಾಬೂಲ್‌ನೊಳಗೆ ಕೂಡ ಅತ್ಯಂತ ಸೀಮಿತವಾಗಿದೆ” ಎಂದು ತನ್ನ ವೆಬ್‌ಸೈಟ್‌ನಲ್ಲಿನ ಸೂಚನೆಯಲ್ಲಿ ತಿಳಿಸಿದೆ. ಜರ್ಮನಿ ಸಹ ತನ್ನ ನಾಗರಿಕರಿಗೆ ಇದೇ ರೀತಿಯ ಎಚ್ಚರಿಕೆಯನ್ನು ನೀಡಿದೆ.

ಈ ಮಧ್ಯೆ ಹಿಂಸಾಚಾರ ನಿಲ್ಲುವವರೆಗೂ ತಾಲಿಬಾನ್‌ಗಳಿಗೆ ಅಧಿಕಾರದಲ್ಲಿ ಪಾಲು ನೀಡಲು ಸರ್ಕಾರ ಮುಂದಾಗಿದೆ ಎಂದು ಅಲ್ ಜಜೀರಾ ಹೇಳಿದೆ. ಅಫಘಾನ್ ಸರ್ಕಾರದ ವಕ್ತಾರರು ತಕ್ಷಣ ಪ್ರತಿಕ್ರಿಯಿಸಲು ಲಭ್ಯರಾಗಿಲ್ಲ ಮತ್ತು ಕತಾರ್‌ನಲ್ಲಿ ಸ್ಥಗಿತಗೊಂಡ ಮಾತುಕತೆಯಲ್ಲಿ ಈಗಾಗಲೇ ಚರ್ಚಿಸಲಾದ ನಿಯಮಗಳಿಗಿಂತ ಅಲ್‌ಜಝೀರಾದಲ್ಲಿ ವರದಿಯಾದ ಕೊಡುಗೆ ಎಷ್ಟು ಮಟ್ಟಿಗೆ ಭಿನ್ನವಾಗಿದೆ ಎಂಬುವುದು ಸ್ಪಷ್ಟವಾಗಿಲ್ಲ.

ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರು ಅಂತಹ ಯಾವುದೇ ಪ್ರಸ್ತಾಪವನ್ನು ಮತ್ತು ಅಧಿಕಾರ ಹಂಚಿಕೆಯ ಸುದ್ದಿಯನ್ನು ತಳ್ಳಿಹಾಕಿದರು.

“ನಾವು ಈ ರೀತಿಯ ಯಾವುದೇ ಪ್ರಸ್ತಾಪವನ್ನು ಸ್ವೀಕರಿಸುವುದಿಲ್ಲ ಏಕೆಂದರೆ ನಾವು ಕಾಬೂಲ್ ಆಡಳಿತದೊಂದಿಗೆ ಪಾಲುದಾರರಾಗಲು ಬಯಸುವುದಿಲ್ಲ.  ನಾವು ಅದರೊಂದಿಗೆ ಒಂದು ದಿನವೂ ಕೆಲಸ ಮಾಡಲು ಸಾಧ್ಯವಿಲ್ಲ”ಎಂದು ಅವರು ಹೇಳಿದ್ದಾರೆ.

Tags: HeratKandaharTaliban
Previous Post

ಕ್ಷೇತ್ರದ ಬಗ್ಗೆ ನಿರ್ಲಕ್ಷ್ಯ: ತನ್ನ ಪಕ್ಷದ ವಿರುದ್ಧ ಏಕಾಂಗಿ ಪ್ರತಿಭಟನೆಗೆ ನಿಂತ ಬಿಜೆಪಿ ಶಾಸಕ ಕುಮಾರಸ್ವಾಮಿ

Next Post

ಮೇಕೆದಾಟು ವಿಷಯದಲ್ಲಿ ತಮಿಳುನಾಡು ಬಿಜೆಪಿ ನಿಲುವಿಗೆ ಸಿಟಿ.ರವಿ ಬೆಂಬಲ: ಸಿದ್ದರಾಮಯ್ಯ ಆಕ್ರೋಶ

Related Posts

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌
Top Story

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

by ಪ್ರತಿಧ್ವನಿ
May 20, 2026
0

ಬೆಂಗಳೂರು : ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ (SEC) ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ಅಂತಿಮ ಅವಕಾಶವಾಗಿ ಆಗಸ್ಟ್ 31ರವರೆಗೆ ಹೆಚ್ಚುವರಿ ಕಾಲಾವಕಾಶ...

Read moreDetails
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

May 20, 2026
“ರಸ್ತೆ ಗುಂಡಿ ಮುಚ್ಚಿಲ್ಲ, ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ, ಕೇವಲ ಜಾಹೀರಾತಿನಿಂದಷ್ಟೇ ಯಶಸ್ಸನ್ನು ಬಿಚ್ಚಿಡುವ ಕೆಲಸ”

“ರಸ್ತೆ ಗುಂಡಿ ಮುಚ್ಚಿಲ್ಲ, ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ, ಕೇವಲ ಜಾಹೀರಾತಿನಿಂದಷ್ಟೇ ಯಶಸ್ಸನ್ನು ಬಿಚ್ಚಿಡುವ ಕೆಲಸ”

May 19, 2026
Next Post
ಮೇಕೆದಾಟು ವಿಷಯದಲ್ಲಿ ತಮಿಳುನಾಡು ಬಿಜೆಪಿ ನಿಲುವಿಗೆ ಸಿಟಿ.ರವಿ ಬೆಂಬಲ: ಸಿದ್ದರಾಮಯ್ಯ ಆಕ್ರೋಶ

ಮೇಕೆದಾಟು ವಿಷಯದಲ್ಲಿ ತಮಿಳುನಾಡು ಬಿಜೆಪಿ ನಿಲುವಿಗೆ ಸಿಟಿ.ರವಿ ಬೆಂಬಲ: ಸಿದ್ದರಾಮಯ್ಯ ಆಕ್ರೋಶ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada