
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಎಪಿ ಅರ್ಜುನ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿದೆ. ಅದ್ಧೂರಿ ಮೇಕಿಂಗ್, ಆಕ್ಷನ್ ಹಾಗೂ ಧ್ರುವ ಪರ್ಫಾರ್ಮನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ.

ಮೊದಲ ದಿನ ಮಾರ್ನಿಂಗ್ ಶೋ ವಿಚಾರದಲ್ಲಿ ಒಂದಷ್ಟು ಗೊಂದಲ ಮೂಡಿತ್ತು. ಬಳಿಕ ಸಿನಿಮಾ ಪ್ರದರ್ಶನ ಆರಂಭವಾಗಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಕೆಲವರು ಓಕೆ ಓಕೆ ಚೆನ್ನಾಗಿದೆ ಎಂದು ಹೇಳಿದ್ದಾರೆ. ಮತ್ತೆ ಕೆಲವರು ಚೆನ್ನಾಗಿಲ್ಲ ಎಂದು ಷರಾ ಬರೆದುಬಿಟ್ಟಿದ್ದಾರೆ. ಒಟ್ಟಾರೆ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ.
ಈ ಬಗ್ಗೆ ಧ್ರುವ ಸರ್ಜಾ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬುಕ್‌ಮೈ ಶೋನಲ್ಲಿ ಬುಕ್ಕಿಂಗ್ ಚೆನ್ನಾಗಿ ಆಗುತ್ತಿದೆ. ನಾಳೆ(ಅಕ್ಟೋಬರ್ 13) ಚಿತ್ರಕ್ಕೆ ನಿರ್ಣಾಯಕವಾಗಲಿದೆ. ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸುಧಾಕರ್ ಗೌಡ ಎಂಬುವವರು ಕೆಟ್ಟದಾಗಿ ರಿವ್ಯೂ ಮಾಡಿ ಇದೀಗ ಕ್ಷಮೆ ಕೇಳಿದ್ದಾರೆ.
ತಮ್ಮ ಕಾಮಿಡಿ ವೀಡಿಯೋಗಳ ಮೂಲಕ ಸುಧಾಕರ್ ಗೌಡ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದವರು. ‘ಮಾರ್ಟಿನ್’ ಸಿನಿಮಾ ನೋಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ವೇಳೆ ಕಚಡಾ ಸಿನಿಮಾ, ಚಿತ್ರತಂಡವೇ ಥಿಯೇಟರ್‌ಗಳಲ್ಲಿ ಫೇಕ್ ಬುಕ್ಕಿಂಗ್ ಮಾಡಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ. ದಿಢೀರನೆ ಸುಧಾಕರ್ ಮಾಡಿದ್ದ ‘ಮಾರ್ಟಿನ್’ ರಿವ್ಯೂ ವೀಡಿಯೋ ವೈರಲ್ ಆಗಿತ್ತು.
Stop This Paid Revives.. Face to Face Madii dudd kottu bere movie bagge negative madsodna Bidi…#kannada #DhruvaSarja #MartinTheMovie #MartinBlockBuster #ActionPrinceDhruvaSarja @DhruvaSarja pic.twitter.com/UW03f16Tp6
— 𝙈𝘼𝙍𝙏𝙄𝙉 𝘾𝙊𝙈𝙈𝘼𝙉𝘿𝙊 (@Dhruva_sarja06) October 12, 2024
ಸದ್ಯ ಸುಧಾಕರ್ ಗೌಡ ಮತ್ತೊಂದು ವೀಡಿಯೋ ಮಾಡಿ ಧ್ರುವ ಸರ್ಜಾ ಹಾಗೂ ಅವರ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ. ‘ಮಾರ್ಟಿನ್’ ಸಿನಿಮಾ ನೋಡಿ ನನಗೆ ಅನ್ನಿಸಿದ ಅಭಿಪ್ರಾಯವವನ್ನು ರಿವ್ಯೂ ವೀಡಿಯೋದಲ್ಲಿ ಹೇಳಿದ್ದೆ. ಆದರೆ ಅದು ಕೆಲವರಿಗೆ ಬೇಸರ ತಂದಿದೆ. ಹಾಗಾಗಿ ನಾನು ಅವರ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.