ದರ್ಶನ ವಿಚಾರದಲ್ಲಿ ಭಕ್ತರು ಮತ್ತು ದೇವಸ್ಥಾನದ ಸಿಬ್ಬಂದಿ ಜೊತೆ ಹೊಡೆದಾಟ ನಡೆದ ಘಟನೆ ಉತ್ತರ ಪ್ರದೇಶದ ವಾರಣಾಸಿಯ ಕಾಶಿ ದೇವಸ್ಥಾನದಲ್ಲಿ ನಡೆದಿದೆ.
ಕಾಶಿ ದೇವಸ್ಥಾನದಲ್ಲಿ ಹಾಕಿರುವ ಸಿಸಿಟಿವಿಯಲ್ಲಿ ಹೊಡೆದಾಟದ ದೃಶ್ಯ ಸೆರೆಯಾಗಿದ್ದು, ಇಬ್ಬರು ಭಕ್ತರು ಹಾಗೂ ನಾಲ್ವರು ದೇವಸ್ಥಾನದ ಸಿಬ್ಬಂದಿ ನಡುವೆ ಹೊಡೆದಾಟವಾಗಿದೆ.
ಶನಿವಾರ ಸಂಜೆ ಆರತಿ ನಡೆಯುವ ವೇಳೆ ಈ ದೇವಸ್ಥಾನದ ಬಾಗಿಲು ಮುಚ್ಚಲಾಗಿದ್ದು, ಈ ವೇಳೆ ದೇವಸ್ಥಾನದ ಒಳಗೆ ಇಬ್ಬರು ಭಕ್ತರು ಇದ್ದರು. ಅವರು ಹೊರಗೆ ಹೋಗುವಂತೆ ಸಿಬ್ಬಂದಿ ತಳ್ಳಿದಾಗ ಹೊಡೆದಾಟ ಶುರುವಾಗಿದೆ.
ಕೆಲವು ದಿನಗಳ ಹಿಂದೆ ಇದೇ ರೀತಿ ಭಕ್ತರ ನಡುವೆ ಘರ್ಷಣೆ ಉಂಟಾಗಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.