ಕೊಪ್ಪಳ ಜಿಲ್ಲೆ ಕುಕುನೂರು ಬಳಿ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ 5 ಜನ ಮೃತಪಟ್ಟಿದ್ದು 4 ಮಂದಿ ಗಾಯಗೊಂಡಿದ್ದಾರೆ.
ಮೃತಪಟ್ಟವರನ್ನು ದೇವರ ಕೊಪ್ಪದ(62), ಗಿರಿಜಮ್ಮ(45), ಶಾಂತಮ್ಮ(32), ಪಾರ್ವತಮ್ಮ(32), ಕಸ್ತೂರಿ(22) ಎಂದು ಗುರುತಿಸಲಾಗಿದೆ.

ಗಾಯಗೊಂಡವರನ್ನು ಭೂಮಿಕಾ (5), ಪಲ್ಲವಿ (28), ಪುಟ್ಟರಾಜು (7) ವಾಹನ ಚಾಲಕ ಹರ್ಷವರ್ಧನ್ (35) ಎಂದು ಗುರುತಿಸಲಾಗಿದೆ.
ಗಾಯಗೊಂಡವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಮಹಿಳಾ ಹಾಗೂ ಮಕ್ಕಳ ಅಭಿವೃದ್ದಿ ಇಲಾಖೆ ಸಚಿವ ಹಾಲಪ್ಪ ಆಚಾರ್ ಮುಖ್ಯಮಂತ್ರಿಗಳು ಮೃತರ ಕುಟುಂಬಗಳಿಗೆ ತಲಾ 5ಲಕ್ಷ ರೂಪಾಯಿ ಪರಿಹಾರ ಘೋಷಿಸಿರುವುದಾಗಿ ತಿಳಿಸಿದ್ದಾರೆ.