ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದ ಜಾವೆಲಿನ್ ಸ್ಪರ್ಧಿ ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದು ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ದಾಖಲೆ ಬರೆದಿದ್ದಾರೆ.
ಇಂಗ್ಲೆಂಡ್ ನಲ್ಲಿ ಶನಿವಾರ ತಡರಾತ್ರಿ ನಡೆದ ಪುರುಷರ ಜಾವೆಲಿನ್ ಫೈನಲ್ ನಲ್ಲಿ ನೀರಜ್ ಚೋಪ್ರಾ 4ನ ಪ್ರಯತ್ನದಲ್ಲಿ ಗರಿಷ್ಠ 88.13 ಮೀ. ದೂರ ಎಸೆದು ಎರಡನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕ ಗಳಿಸಿದರು.
ವಿಶ್ವ ಅಥ್ಲೆಟಿಕ್ಸ್ ನಲ್ಲಿ ಜಾವೆಲಿನ್ ವಿಭಾಗದಲ್ಲಿ ಭಾರತಕ್ಕೆ ಬಂದ ಎರಡನೇ ಬೆಳ್ಳಿ ಪದಕ ಇದಾಗಿದೆ. ಇದಕ್ಕೂ ಮುನ್ನ ಅಂಜು ಬಾಬಿ ಜಾರ್ಜ್ 2003ರಲ್ಲಿ ಮಹಿಳೆಯರ ವಿಭಾಗದಲ್ಲಿ ಈ ಸಾಧನೆ ಮಾಡಿದ್ದರು.
ಜರ್ಮನಿಯ ಆಂಡರ್ಸನ್ ಪೀಟರ್ಸ್ 90.54ಮೀ. ದೂರ ಎಸೆದು ಚಿನ್ನದ ಪದಕಕ್ಕೆ ಮುತ್ತಿಟ್ಟರೆ, ಜೆಕ್ ಗಣರಾಜ್ಯದ ಜಾಕೆಬ್ ವಡೆಲಿಚ್ 88.09 ಮೀ. ಕಂಚಿನ ಪದಕ ಗಳಿಸಿದರು.