ಚಿಕ್ಕಮಗಳೂರು : ಬಿಜೆಪಿ ಭದ್ರಕೋಟೆ ಚಿಕ್ಕಮಗಳೂರಿನಲ್ಲಿ ಬಿಜೆಪಿಗೆ ಇಂದು ದೊಡ್ಡ ಆಘಾತವಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಚುನಾವಣೆಯಲ್ಲಿ ಸೋಲನ್ನು ಕಂಡಿದ್ದಾರೆ.
ಸಿ.ಟಿ ರವಿಗೆ ಪ್ರಬಲ ಪೈಪೋಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ ತಿಮ್ಮಯ್ಯ 64552 ಮತಗಳನ್ನು ಪಡೆಯುವ ಮೂಲಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದಾರೆ. ಸಿ.ಟಿ ರವಿ ಕೇವಲ 55678 ಮತಗಳನ್ನು ಗಳಿಸುವಲ್ಲಿ ಮಾತ್ರ ಶಕ್ತರಾಗಿದ್ದು ಚುನಾವಣೆಯಲ್ಲಿ ಸೋಲನ್ನು ಕಂಡಿದ್ದಾರೆ .
