
ಬೆಳಗಾವಿ: ಪಂಚಮಸಾಲಿ ಲಿಂಗಾಯತರ ಮೇಲಿನ ಲಾಠಿಚಾರ್ಚ್ ಖಂಡಿಸಿ ಧರಣಿ ನಡೆಯುತ್ತಿದ್ದು, ಮುಂದಿನ ಹೋರಾಟದ ಚರ್ಚೆ ನಡೆಸಲು ಸಭೆ ಕರೆಯಲಾಗಿತ್ತು.ಮಾಜಿ ಸಚಿವ ಸಿ.ಸಿ ಪಾಟೀಲ್, ವಿನಯ್ ಕುಲಕರ್ಣಿ ಸೇರಿ ಅನೇಕರು ಸಭೆಯಲ್ಲಿ ಭಾಗಿಯಾಗಿದ್ದರು. ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡಲಾಗಿದೆ.ಗುರುವಾರ ಮಧ್ಯಾಹ್ನ ಒಂದು ಗಂಟೆಗೆ ಪ್ರತಿಭಟನೆ ವೇದಿಕೆಯಲ್ಲಿ ಮತ್ತೊಂದು ಸಭೆ ಮಾಡ್ತಿವಿ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಹೋರಾಟದ ಮುಂದಿನ ಗುರಿ, ಇನ್ನೂ ಮಾತುಕತೆ ಮಾಡಬೇಕಿತ್ತು. ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್ ಅಧಿವೇಶನದಲ್ಲಿ ಇರೋದ್ರಿಂದ ನಾಳೆ ಮಧ್ಯಾಹ್ನ ಸಭೆ ಮಾಡಲಾಗುತ್ತದೆ. ಮೀಸಲಾತಿ ಪಡೆಯಲು ಮುಂದಿನ ಹೋರಾಟ ಬಗ್ಗೆ ಚರ್ಚೆ ಮಾಡ್ತಿವಿ ಎಂದಿದ್ದಾರೆ. ಮೀಸಲಾತಿ ಕೊಡಲು ಆಗಲ್ಲ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೀಸಲಾತಿ ಪಡೆಯಲು ಏನು ಮಾಡಬೇಕು ಅನ್ನೋ ಬಗ್ಗೆ ಗುರುವಾರದ ಸಭೆಯಲ್ಲಿ ಚರ್ಚೆ ಮಾಡ್ತಿವಿ ಎಂದಿದ್ದಾರೆ.

ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಕೂಡ ಸಭೆಗೆ ಬಂದಿದ್ದರು. ಡಿಸೆಂಬರ್ 21ರಂದು ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದಾರೆ ಎಂದು ಹೇಳಿದ್ದಾರೆ. ಶಾಸಕರು, ಮಾಜಿ ಶಾಸಕರ ಸಭೆಯ ಬಗ್ಗೆ ಮಾಹಿತಿ ನೀಡಿದ್ದಾರೆ.ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳುವವರೆಗೆ ನಮ್ಮ ಹೋರಾಟ ಮುಂದುವರಿಸುತ್ತೇವೆ.ನನಗೆ ಸಿಎಂ ಸಭೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ.ನನಗೆ ಯಾವುದೇ ಆಮಂತ್ರಣ ಬಂದಿಲ್ಲ. ನಮ್ಮ ಮೇಲೆ ಮಾರಣಾಂತಿಕ ಹಲ್ಲೆಯನ್ನು ಸರ್ಕಾರ ಮಾಡಿದೆ.ಘಟನೆ ಬಳಿಕ ಸಾಂತ್ವನ ಮಾತನ್ನು ಹೇಳುವ ಯತ್ನವನ್ನೂ ಯಾರೊಬ್ಬರು ಮಾಡಿಲ್ಲ. ನಮ್ಮ ಹೋರಾಟವನ್ನೇ ಅಸವಿಂಧಾನಕ ಎಂದು ಹೇಳಿದ್ದಾರೆ ಎಂದು ಕಿಡಿಕಾರಿದ್ದಾರೆ.
ಒಬ್ಬರು ಸಚಿವರು ಹೋರಾಟ ಆರಂಭ ಆದಗಿನಿಂದ ಈ ಕಡೆ ಮುಖ ಹಾಕಿಲ್ಲ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ ಸಿಎಂ ಒತ್ತಡದ ಕಾರಣಕ್ಕೆ ಬಂದಿಲ್ಲ. ಅನೇಕ ಸಲ ಬಂದು ಬೆಂಬಲ ಕೊಟ್ಟಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ ಮನಸ್ಸಿಗೆ ನೋವು ಆಗೋ ಹಾಗೆ ಸಿಎಂ ಒತ್ತಡ ಹಾಕಿದ್ದಾರೆ. ಲಿಂಗಾಯತ ಶಾಸಕರು ನೋವನ್ನು ನುಂಗಿಕೊಂಡು ಮೌನವಾಗಿದ್ದಾರೆ. ಸಚಿವೆ ಹೆಬ್ಬಾಳ್ಕರ್ ಗೊಂದಲಕ್ಕೆ ಒಳಪಟ್ಟಿದ್ದಾರೆ. ಕುಲಕರ್ಣಿ, ಕಾಗೆ ಇಬ್ಬರ ನಿಲುವು ಕೂಡ ಸ್ಪಷ್ಟವಾಗಿದೆ. ಈ ಸರ್ಕಾರದಲ್ಲಿ ಗಟ್ಟಿಯಾಗಿ ಇರೋದು ಪುಣ್ಯ ಎಂದಿದ್ದಾರೆ.










