ಬೆಂಗಳೂರು : ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಕುರ್ಚಿ ಕದನ ನಿಲ್ಲುವ ಹಾಗೆ ಲಕ್ಷಣಗಳು ಕಾಣುತ್ತಿಲ್ಲ. ತಮ್ಮ ದಾಖಲೆಯ ಬಜೆಟ್ ಮಂಡಿಸಲು ಸಿಎಂ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ.

ಆದರೆ ಈ ನಡುವೆಯೇ ಡಿನ್ನರ್ ಪಾಲಿಟಿಕ್ಸ್ ಕೂಡ ಮುಂದುವರೆದಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಭಾರಿ ದೊಡ್ಡ ಬೆಳವಣಿಗೆಗಳು ಮುಂದುವರೆದಿವೆ. ಒಂದೆಡೆ ಸಿದ್ದರಾಮಯ್ಯ ಅವರ ಬಣ ಫಾರಿನ್ ಟ್ರಿಪ್‌ಗೆ ತೆರಳಿದರೆ, ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಬಣದಿಂದ ಕುರ್ಚಿ ದಂಗಲ್ ಕುರಿತು ರಣತಂತ್ರ ಚುರುಕಾಗಿದ್ದು, ಮಾಗಡಿ ಶಾಕಸಕ ಹಾಗೂ ಡಿಸಿಎಂ ಆಪ್ತ ಬಾಲಕೃಷ್ಣ ಹುಟ್ಟು ಹಬ್ಬ ಆಚರಣೆ ನೆಪದಲ್ಲಿ 35 ಕ್ಕೂ ಹೆಚ್ಚು ಭಾಗಿಯಾಗಿ ಮಹತ್ವದ ಚರ್ಚೆ ನಡೆಸಿರುವುದು ಸಿಎಂ ಸಿದ್ದರಾಮಯ್ಯ ಬಣಕ್ಕೆ ಟೆನ್ಷನ್ ತಂದಿದೆ.
ಇದನ್ನೂ ಓದಿ : ಹೊಸ ರೀತಿಯ ಹನಿಟ್ರಾಪ್: ಯುವಕನ ಮೇಲೆ ಹಲ್ಲೆ!
ಕಳೆದ ರಾತ್ರಿ ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಸಭೆ ಸೇರಿದ್ದ ಡಿಕೆ ಬಣದ ಶಾಸಕರು ಮುಂದಿನ ರಾಜಕೀಯ ಲೆಕ್ಕಚಾರಗಳ ಬಗ್ಗೆ ಸಮಾಲೋಚಿಸಿದ್ದಾರೆ. ಶಾಸಕರಾದ ಇಕ್ವಾಲ್ ಹುಸೇನ್. ನಯನಾ ಮೋಟಮ್ಮ. ಮಾಗಡಿ ಬಾಲಕೃಷ್ಣ. ಸಿಪಿ ಯೋಗೇಶ್ವರ್, ರವಿ ಗಣಿಗ, ಗಣೇಶ್ ಹುಕ್ಕೇರಿ, ಬಸವರಾಜ ಶಿವಗಂಗಾ ಸೇರಿ ಹಲವರು ಭಾಗಿಯಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಆಗಾಗ್ಗೆ ದಲಿತ ಸಿಎಂ ವಿಚಾರ ಮುನ್ನೆಲೆಗೆ ಬಂದು ವ್ಯಾಪಕ ಚರ್ಚೆಯಾಗುತ್ತದೆ. ಅದರಂತೆ ಈ ಬಾರಿಯೂ ಸಿಎಂ ಸಿದ್ದರಾಮಯ್ಯ ಬಣದ ದಲಿತಾಸ್ತ್ ಪ್ರಯೋಗದ ನಡುವೆ ಡಿಕೆ ಬಣದಿಂದ ಶಕ್ತಿ ಪ್ರದರ್ಶನ ನಡೆದಿರುವುದು ತೀವ್ರ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.






