ಪೊಲೀಸರು ವಿಚಾರಣೆ ವೇಳೆ ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದ ರಿಮ್ಯಾಂಡ್ ಅಪ್ಲಿಕೇಷನ್ ಹಿಡಿದು ಓದಿರುವ ದರ್ಶನ್ ಪರ ವಕೀಲ ಸಿವಿ ನಾಗೇಶ್, ರಿಮ್ಯಾಂಡ್ ಅರ್ಜಿಗಳನ್ನ ಓದಿ ಹೇಳಿದ್ದಾರೆ. ಜೂನ್ 11 ರಿಂದ ಜೂನ್ 22 ವರೆಗೆ ಯಾವುದೇ ಸಾಕ್ಷಿಗಳ ಹೇಳಿಕೆ ಬಗ್ಗೆ ಉಲ್ಲೇಖಿಸಿಲ್ಲ. ಆದರೆ ಜೂನ್ 22 ರಿಮ್ಯಾಂಡ್ ಅರ್ಜಿಯಲ್ಲಿ ಮ್ಯಾಜಿಕ್ ಆಗಿದೆ ಎಂದು ಕುಹಕವಾಡಿದ್ದಾರೆ.

ಜೂನ್ 22ನೇ ತಾರೀಕಿನಲ್ಲಿ ರಿಮ್ಯಾಂಡ್ ಅರ್ಜಿಯಲ್ಲಿ ಸಾಕ್ಷಿಗಳ ಹೇಳಿಕೆ ಯಾಕೆ ದಾಖಲಿಸಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ. ಸಾಕ್ಷಿಗಳಿಗೆ ಬೆದರಿಕೆ ಹಾಕಬಹುದು, ಅಂತ ಅವರ ಹೆಸರು ಹೇಳಿಲ್ಲ ಅಂತ ಬರೆದಿದ್ದಾರೆ. ಆದರೆ ಇದು ಕಾನೂನಿನ ಸ್ಪಷ್ಟವಾದ ಉಲ್ಲಂಘನೆ. ಅವರು ಯಾವುದೇ ವಿಟ್ನೆಸ್‌ಗಳ ಹೆಸರು, ಹೇಳಿಕೆ ಉಲ್ಲೇಖಿಸಿಲ್ಲ ಅಂತನೂ ತಿಳಿಸಿದ್ದಾರೆ.

ಇನ್ನು ವಿನಯ್ ಮತ್ತು ದೀಪಕ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಆಗಿದೆ. ದೀಪಕ್ ಜಾಮೀನು ಅರ್ಜಿಗೆ ಎಸ್‌ಪಿಪಿ ಪ್ರಸನ್ನ ಕುಮಾರ್ ಆಕ್ಷೇಪಣೆ ಸಲ್ಲಿಸಿದ್ದು, ಆಕ್ಟೋಬರ್ 8 ಕ್ಕೆ ವಿಚಾರಣೆ ಮುಂದೂಡಿಕೆ ಆಗಿದೆ. ಇನ್ನು ಅನುಕುಮಾರ್ ಪರವಾಗಿ ವಕೀಲ ರಾಮ್ ಸಿಂಗ್ ವಾದ ಮಂಡಿಸಿದ್ದು, ಅನುಕುಮಾರ್ ಜಾಮೀನು ಅರ್ಜಿ ಕೂಡ ಆಕ್ಟೋಬರ್ 8 ಕ್ಕೆ ಮುಂದೂಡಿಕೆ ಆಗಿದೆ.










