ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾಗೌಡ ಸೇರಿ 7 ಆರೋಪಿಗಳಿಗೆ ಬೇಲ್ ಸಿಕ್ಕಿದೆ.. ಈಗಾಗಲೇ ಮಧ್ಯಂತರ ಬೇಲ್ ಪಡೆದು ಆಸ್ಪತ್ರೆಯಲ್ಲಿರುವ ದರ್ಶನ್ ಸೋಮವಾರದ ಬಳಿಕ ಸ್ವತಂತ್ರ ಆಗಲಿದ್ದಾರೆ. ಇನ್ನು ಸೋಮವಾರ ಪವಿತ್ರಾಗೌಡ ಸೇರಿ ಉಳಿದ 6 ಆರೋಪಿಗಳಿಗೆ ಜಾಮೀನು ಆದೇಶ ಸಲ್ಲಿಸಿ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ.. ಅದಕ್ಕೂ ಮೊದಲು ಬೇಲ್ ಷರತ್ತುಗಳನ್ನ ಪೂರೈಸಬೇಕಿದೆ. ಆ ನಂತ್ರ ಆರೋಪಿಗಳು ಜೈಲಿನಿಂದ ರಿಲಿಸ್ ಆಗಲಿದ್ದಾರೆ..
ಕೊಲೆ ಆರೋಪಿ ದರ್ಶನ್ಗೆ ಬೇಲ್ ಸಿಕ್ಕ ಖುಷಿಯಲ್ಲಿದ್ದು ಬೆನ್ನುನೋವಿಗೆ ಆಪರೇಷನ್ ಮಾಡಿಸೋದು ಡೌಟ್ ಅಂತಾ ಹೇಳಲಾಗ್ತಿದೆ.. ರೆಗ್ಯುಲರ್ ಬೇಲ್ ಸಿಕ್ಕಿದ ಹಿನ್ನೆಲೆಯಲ್ಲಿ ಸರ್ಜರಿ ಬೇಡ ಅನ್ನೋ ನಿರ್ಧಾರಕ್ಕೆ ದರ್ಶನ್ ಬಂದಿದ್ದಾರಂತೆ.. ದರ್ಶನ್ ಮಾತಿಗೆ BGS ಡಾಕ್ಟರ್ಸ್ ಕೂಡ ಒಪ್ಪಿದ್ದು, ಇನ್ನು ಕೆಲವು ದಿನಗಳ ಕಾಲ ಫಿಸಿಯೋಥೆರಪಿ ಚಿಕಿತ್ಸೆ ಮುಂದುವರಿಯಲಿದೆ ಎನ್ನಲಾಗಿದೆ.
ದರ್ಶನ್ ಜಾಮೀನು ವಿಚಾರದ ಬಗ್ಗೆ ಗಾಯಕ ಸರಿಗಮ ವಿಜಿ ಪ್ರತಿಕ್ರಿಯೆ ನೀಡಿದ್ದು, ದರ್ಶನ್ ಒಳಗೆ ಹೋದ್ಮೇಲೆ ಯಾವ ಸಿನಿಮಾಗಳು ಬಂದ್ವು..? ರಾಜಕೀಯ ವ್ಯಕ್ತಿಗಳು ಎಷ್ಟು ಜನ ಕೊಲೆ ಮಾಡಿ ಆರಾಮಾಗಿ ಇರ್ತಾರೆ. ದರ್ಶನ್ ತಪ್ಪು ಮಾಡಿದ್ದಾರೆ ಇಲ್ಲ ಅಂತ ಹೇಳಲ್ಲ. ಆದ್ರೆ ಇದನ್ನೇ ಪದೇ ಪದೆ ತೋರಿಸಿ ನೆಗೆಟಿವ್ ಮಾಡಿದ್ದು ಸರಿಯಲ್ಲ.ದರ್ಶನ್ ಬೇಕು ಅಂತ ಅವರನ್ನ ಕರೆದು ಚುಚ್ಚಿ ಸಾಯಿಸಿದ್ದಲ್ಲ. ಅಚಾನಕ್ ಆಗಿ ನಡೆದು ಹೋಗಿದೆ ಎಂದಿದ್ದಾರೆ.
ದರ್ಶನ್ ಬೇಲ್ ಬಗ್ಗೆ ಹಿರಿಯ ನಟ ಸುಂದರ್ ರಾಜ್ ಕೂಡ ಪ್ರತಿಕ್ರಿಯೆ ನೀಡಿದ್ದು, ಈ ರೀತಿ ಘಟನೆಯಾದಾಗ ಯಾರನ್ನು ದೂಷಣೆ ಮಾಡಲು ಆಗಲ್ಲ. ರೇಣುಕಾಸ್ವಾಮಿ ಸಾವು ಕೂಡ ತುಂಬಾ ನೋವು ಕೊಡುತ್ತೆ. ಸದ್ಯಕ್ಕೆ ಕೋರ್ಟ್ ನಿರ್ಬಂಧ ಹಾಕಿ ಬೇಲ್ ಕೊಟ್ಟಿದೆ ಎಂದಿದ್ದಾರೆ. ಇನ್ನು ಇದೇ ವಿಚಾರವಾಗಿ ಸಾರಾ ಗೋವಿಂದ್ ಮಾತನಾಡಿದ್ದು, ನ್ಯಾಯಾಲಯ ಏನೇ ತೀರ್ಪು ಕೊಟ್ರು ನಾವು ಗೌರವಿಸ್ತೇವೆ ಎಂದಿದ್ದಾರೆ.