• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತೆಲುಗು ಚಿತ್ರರಂಗದಿಂದ ಕನ್ನಡ ಚಿತ್ರರಂಗ ಕಲಿಯಬೇಕಿದೆ..

ಪ್ರತಿಧ್ವನಿ by ಪ್ರತಿಧ್ವನಿ
December 15, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಪುಷ್ಪಾ 2 ಸಿನಿಮಾ ಪ್ರೀಮಿಯರ್‌ ಶೋ ವೇಳೆ ಮಹಿಳಾ ಅಭಿಮಾನಿ ಕಾಲ್ತುಳಿತಕ್ಕೆ ಬಲಿಯಾದ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್‌ ಒಂದು ದಿನ ಜೈಲುವಾಸ ಅನುಭವಿಸಿದ್ದಾರೆ. ತೆಲುಗು ಸೂಪರ್‌ ಸ್ಟಾರ್‌‌ ಅಲ್ಲು ಅರ್ಜುನ್‌ ಶುಕ್ರವಾರ ಬೇಲ್‌ ಸಿಕ್ಕರೂ ಒಂದು ರಾತ್ರಿ ಜೈಲು ವಾಸ ಅನುಭವಿಸಿದ್ರು. ಶನಿವಾರ ಬೆಳಗ್ಗೆ ಜೈಲಿನಿಂದ ರಿಲೀಸ್ ಆದ ಬಳಿಕ ಅಲ್ಲು ಅರ್ಜುನ್ ಮನೆಗೆ ತೆಲುಗು ಚಿತ್ರ ನಟರ ದಂಡು ಹರಿದು ಬಂದಿತ್ತು. ಹೈದ್ರಾಬಾದ್‌ನ ಜ್ಯುಬಿಲಿ ಹಿಲ್ಸ್‌ ನಿವಾಸಕ್ಕೆ ಸಿನಿಮಾ ಗಣ್ಯರು ಆಗಮಿಸಿ ಧೈರ್ಯ ಹೇಳಿದ್ರು. ಅಲ್ಲು ಅರ್ಜುನ್‌ಗೆ ಇಡೀ ಟಾಲಿವುಡ್ ಬೆಂಬಲ ಸೂಚಿಸಿತು.

ADVERTISEMENT

ಜೈಲಿನಿಂದ ರಿಲೀಸ್ ಆದ ಬಳಿಕ ನಟ ಅಲ್ಲು ಅರ್ಜುನ್ ಪ್ರತಿಕ್ರಿಯೆ ನೀಡಿ, ಉದ್ದೇಶ ಪೂರ್ವಕವಾಗಿ ಆ ಘಟನೆ ನಡೆದಿಲ್ಲ. ನಾನು ಕಳೆದ 20 ವರ್ಷಗಳಿಂದಲೂ ಆ ಥಿಯೇಟರ್​ಗೆ ಹೋಗ್ತಿದ್ದೇನೆ. ಈವರೆಗೆ 30 ಬಾರಿ ಆ ಥಿಯೇಟರ್​ಗೆ ಭೇಟಿ ನೀಡಿದ್ದೇನೆ. ಆದ್ರೆ ಈ ರೀತಿ ಯಾವತ್ತೂ ನಡೆದಿಲ್ಲ. ಇದೊಂದು ಅಚಾನಕ್​ ಆಗಿ ನಡೆದಿರುವ ಘಟನೆ. ರೇವತಿ ಕುಟುಂಬಸ್ಥರಿಗೆ ನನ್ನ ಕೈಯಲ್ಲಿ ಆಗುವಷ್ಟು ಸಹಾಯವನ್ನು ಮಾಡ್ತೇನೆ. ಈ ಘಟನೆಗೂ ನನಗೂ ನೇರ ಸಂಬಂಧ ಇಲ್ಲ. ನಾನು ಕುಟುಂಬದ ಜೊತೆ ಥಿಯೇಟರ್ ಒಳಗೆ ಸಿನಿಮಾ ನೋಡುವಾಗ ಈ ದುರ್ಘಟನೆ ನಡೆದಿದ್ದು, ನನಗೂ ಬೇಸರವಾಗಿದೆ. ಆ ಕುಟುಂಬದ ಜೊತೆ ನಾನಿರ್ತೇನೆ ಎಂದಿದ್ದಾರೆ.

ಅಲ್ಲು ಅರ್ಜುನ್​ ಅರೆಸ್ಟ್ ಆಗಿ ರಿಲೀಸ್ ಆದ ಪ್ರಕರಣದಲ್ಲಿ ಸರ್ಕಾರದ ವಿರುದ್ದ ಟೀಕಾಸ್ತ್ರಗಳು ಬರುತ್ತಿವೆ. ಈ ನಡುವೆ ಚಂಚಲಗೂಡ ಜೈಲಿನಲ್ಲಿ ರಾತ್ರಿ ಕಳೆದಿದ್ದ ನಟ ಅಲ್ಲು ಅರ್ಜುನ್‌ಗೆ ವಿಚಾರಣಾಧೀನ ಕೈದಿನ ನಂ 7697 ನೀಡಲಾಗಿತ್ತು. ಅಲ್ಲು ಅರ್ಜುನ್ ಬಿಡುಗಡೆಗೆ ವಿಳಂಬ ಮಾಡಿದ್ದಕ್ಕೆ ವಕೀಲ ಅಶೋಕ್​ ರೆಡ್ಡಿ ಗರಂ ಆಗಿದ್ದಾರೆ. ಶುಕ್ರವಾರವೇ ಕೋರ್ಟ್ ಜಾಮೀನು ನೀಡಿ ಆದೇಶ ಕೊಟ್ಟರೂ ಬಿಡುಗಡೆ ಮಾಡಿಲ್ಲ. ಉದ್ದೇಶ ಪೂರ್ವಕವಾಗೇ 1 ದಿನ ಜೈಲಿನಲ್ಲಿ ಇಟ್ಟಿದ್ದರು ಎಂದು ಕಿಡಿಕಾರಿದ್ದಾರೆ. ಈ ಬಗ್ಗೆ ಕೋರ್ಟ್‌ನಲ್ಲಿ ಪ್ರಶ್ನೆ ಮಾಡ್ತೀವಿ ಅಂತಾನೂ ವಕೀಲರು ತಿಳಿಸಿದ್ದಾರೆ.

ಒಟ್ಟಾರೆ, ಒಂದು ಘಟನೆ ನಡೆದಾಗ ಇಡೀ ಚಿತ್ರರಂಗ ಒಗ್ಗಟ್ಟು ಪ್ರದರ್ಶನ ಮಾಡಿದೆ. ನಟನದ್ದು ತಪ್ಪು ಇದ್ಯೋ ಇಲ್ವೋ ಅನ್ನೋ ವಿಚಾರ ಪೊಲೀಸ್‌‌ ಠಾಣೆಯಲ್ಲಿ ನಿರ್ಧಾರ ಆಗುವುದಿಲ್ಲ. ಅದು ಏನಿದ್ದರೂ ಕೋರ್ಟ್‌ಗೆ ಇರುವ ಅಧಿಕಾರ. ಈ ಬಗ್ಗೆ ಕೋರ್ಟ್‌ ಏನೇ ನಿರ್ಧಾರ ಮಾಡಲಿ, ಆದರೆ ಚಿತ್ರರಂಗ ಒಂದು ಎನ್ನುವ ಸಂದೇಶ ರವಾನೆ ಮಾಡಿದ್ದಾರೆ.ಇಡೀ ಚಿತ್ರರಂಗ ಅಲ್ಲು ಅರ್ಜುನ್‌ಗೆ ಸಪೋರ್ಟ್‌ ಮಾಡಿದೆ ಅನ್ನೋದು ಮಾತ್ರ ಉಳಿತ ಚಿತ್ರರಂಗಕ್ಕೆ ಮಾದರಿ.

Tags: Actor Allu ArjunHyderabadJubilee Hills residenceKannada cinema should learn from Telugu cinema..Pushpa 2.spent a day in jailTelugu Superstar Allu Arjun spent a night in jail
Previous Post

ಬೇಲ್‌ ಬಳಿಕ ದರ್ಶನ್‌ ನಿರ್ಧಾರ ಚೇಂಜ್‌.. ಸಿನಿ ಮಂದಿ ಏನಂದ್ರು..?

Next Post

ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗುವವರು ಯಾರು?

Related Posts

 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !
Top Story

 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

by ಪ್ರತಿಧ್ವನಿ
May 25, 2026
0

ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಟೀಸರ್ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಕೆಲವರು ಟೀಸರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಚಿತ್ರದ...

Read moreDetails
ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

May 24, 2026
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

‘ಸಿಜೆಪಿ’ ಪೇಜ್ ಹ್ಯಾಕ್‌? ‘ಕಾಕ್ರೋಚ್ ಜನತಾ ಪಕ್ಷ’ ಅಭಿಜಿತ್ ದಿಪ್ಕೆ ಹೇಳಿದ್ದೇನು? 

May 23, 2026
Next Post
ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗುವವರು ಯಾರು?

ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗುವವರು ಯಾರು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada