ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ (Renuka swamy murder case), ಪರಪ್ಪನ ಅಗ್ರಹಾರ ಜೈಲಲ್ಲಿ ಇರುವ ಆರೋಪಿ ದರ್ಶನ್‌ಗೆ (Actor darshan) ಆತಿಥ್ಯ ನೀಡಲು ರೌಡಿ ಗ್ಯಾಂಗ್ ಗಳಲ್ಲಿ ಪೈಪೋಟಿ ಶುರುವಾಗಿದೆ. ಆರೋಪಿ ದರ್ಶನ್‌ರನ್ನ ನಾ ನೋಡಿ ಕೊಡ್ತೀನಿ..ತಾ ನೋಡಿ ಕೊಡ್ತೀನಿ ಅಂತಾ ಈ ರೌಡಿ ಗ್ಯಾಂಗ್‌ಗಳು ಕಾಂಪಿಟೇಷನ್‌ಗೆ ಇಳಿದಿವ್ಯಂತೆ.

ವಿಲ್ಸನ್ ಗಾರ್ಡನ್ ನಾಗ (Wilson garden naga) ಮತ್ತು ಸೈಕಲ್ ರವಿ (Cycle ravi gang) ಗ್ಯಾಂಗ್ ನಡುವೆ ಈ ಪೈಪೋಟಿ ಶುರುವಾಗಿದೆ. ಸದ್ಯ ಪರಪ್ಪನ ಅಗ್ರಹಾರ ಜೈಲಲ್ಲೇ ಇರುವ ವಿಲ್ಸನ್ ಗಾರ್ಡನ್ ನಾಗ, ದರ್ಶನ್ ಜೈಲು ಆತಿಥ್ಯ ವಹಿಸಿಕೊಳ್ಳಲು ಮುಂದಾಗಿದ್ರೆ ಇತ್ತ ಸೈಕಲ್ ರವಿ ಜೈಲಲ್ಲಿ ಇಲ್ಲ, ಆದ್ರೆ ಅಲ್ಲಿರೋ ರವಿ ಹುಡುಗರು, ತಾವು ದರ್ಶನ್ ನ ನೋಡಿಕೊಳ್ತಿವಿ ಅಂತಾ ಪೈಪೋಟಿಗೆ ಇಳಿದಿದ್ದಾರೆ.ಇನ್ನು ಇದಕ್ಕಾಗಿ ರವಿಯ ಬಂಟ ಹಳೆ ಕೇಸಲ್ಲಿ ಜೈಲು ಸೇರೋ ಸಾಧ್ಯತೆ ಕೂಡ ಇದೆ ಅಂತ ಹೇಳಲಾಗ್ತಿದೆ.

ಈ ಹಿಂದೆ 2011ರಲ್ಲಿ ದರ್ಶನ್ ಪತ್ನಿ ಮೇಲಿನ ಹಲ್ಲೆ ಕೇಸಿನಲ್ಲಿ ಜೈಲು ಪಾಲಾಗಿದ್ದಾಗ, ಇದೇ ಸೈಕಲ್ ರವಿ ಅಂದು ನಟ ದರ್ಶನ್‌ಗೆ ಜೈಲಿನಲ್ಲಿ ಆತಿಥ್ಯ ನೀಡಿದ್ದ. ಅದೇ ರೀತಿ ಈಗಲೂ ತಾನೇ ನೋಡಿಕೊಳ್ಳುತ್ತೇನೆ ಎಂದು ಸೈಕಲ್ ರವಿ ಗ್ಯಾಂಗ್ ಮುಂದಾಗಿದೆ. ಆದರೆ ವಿಲ್ಸನ್ ಗಾರ್ಡನ್ ನಾಗ ಜೈಲಲ್ಲಿದ್ದು, ನಾನಿದ್ದೀನಿ, ನಿಮಗೆ ಏನೆಲ್ಲಾ ಅತಿಥ್ಯ ಬೇಕು ಆ ಜವಾಬ್ದಾರಿ ನಂದು ಅಂತಾ ಮುಂದೆ ಬಂದಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗಿದೆ.






