ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renuka swamy murder case) ಸಂಬಂಧಪಟ್ಟಂತೆ ಮೈಸೂರಿನ (Mysore) ರಾಡಿಸನ್ ಬ್ಲೂ (Radison blue) ಹೋಟೆಲ್‌ನಲ್ಲಿ ಪೋಲಿಸರು ಸ್ಥಳ ಮಹಜರು ನಡೆಸಲು ಮುಂದಾಗಿದ್ದಾರೆ. ಇಬ್ಬರು ಆರೋಪಿಗಳನ್ನ ಕರೆತಂದು ಪೊಲೀಸರಿಂದ ಮಹಜರು ಪ್ರಕ್ರಿಯೆ ಆರಂಭವಾಗಿದೆ.

ಕೊಲೆ ಪ್ರಕರಣದಲ್ಲಿ ಪೋಲಿಸರು ಆರೋಪಿಗಳನ್ನ ಕೆರೆತಂದಿದ್ದಾರೆ ಎಂದು ತಿಳಿಯುತ್ತಿದ್ದಂತೆ ರಾಡಿಸನ್ ಬ್ಲೂ ಹೋಟೆಲ್ ಬಳಿ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ ಘಟನೆಯೂ ನಡೆದಿದೆ. ಇದೇ ಕಾರಣಕ್ಕೆ ಆರೋಪಿ ದರ್ಶನ್ (Actor darshan) ರನ್ನ ಮೈಸೂರಿಗೆ ಕರೆದೊಯ್ಯುವ ಪ್ಲಾನ್ ನ ಪೋಲಿಸರು ಕೈಬಿಟ್ಟಿದ್ದರು.

ನಟ ದರ್ಶನ್ ಆಪ್ತ ನಾಗರಾಜ್, ಕಾರು ಚಾಲಕ ಲಕ್ಷ್ಮಣ್ ಕರೆತಂದ ಪೊಲೀಸರು, ಇಲ್ಲಿ ಕೊಲೆಯ ನಂತರ ಏನೆಲ್ಲಾ ಚರ್ಚೆ ಮಾಡಲಾಯ್ತು, ಹೇಗೆ ಪ್ರಕರಣದಿಂದ ದರ್ಶನ್ ತಪ್ಪಿಸಿಕೊಳ್ಳಲು ಉಪಾಐ ಮಾಡಲಾಗಿತ್ತು ಎಂಬ ಚರ್ಚೆಗಳು ಇಲ್ಲೇ ನಡೆದಿದ್ದು ಎನ್ನಲಾಗ್ತಿದ್ದು, ಇನ್ನುಳಿದ ಮಾಹಿತಿಗಳನ್ನ ತನಿಖಾಧಿಕಾರಿಗಳು ಕಲೆಹಾಕಲಿದ್ದಾರೆ.
ದರ್ಶನ್ ಉಳಿದುಕೊಂಡಿದ್ದ ಕೊಠಡಿಯಲ್ಲಿ ತೀವ್ರ ಶೋಧ ನಡೆಸಿದ್ದು, ದರ್ಶನ್ ಮಲಗಿದ್ದ ಬೆಡ್ ಅಡಿಯಲ್ಲಿ ಶೋಧ ನಡೆಸಿದ್ದಾರೆ. ಕೊಠಡಿಯಲ್ಲಿ ಇಂಚಿಂಚು ಶೋಧ ಕಾರ್ಯ ನಡೆಸುತ್ತಿರುವ ಪೊಲೀಸರು, ಲಕ್ಷ್ಮಣ್ ಹಾಗೂ ನಾಗ ನಿಂದ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.