ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಸದ್ಯ ಪರಪ್ಪನ ಜೈಲು ಸೇರಿದ್ದು, ಇದೀಗ ಈ ಬೆನ್ನಲ್ಲೇ ರಾಜ್ಯದಲ್ಲಿ ಸೌಜನ್ಯ ಪ್ರಕರಣ ಮತ್ತೆ ಸದ್ದು ಮಾಡಲು ಆರಂಭಿಸಿದೆ. ಈ ಕುರಿತು ಕೆಲವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ನಮ್ಮ ರಾಜ್ಯದ ಮುಖ್ಯಮಂತ್ರಿ ಅದಾ Siddaramaiah ಸರ್ ರವರಿಗೆ ಒಂದು ಮನವಿ ನಮ್ಮ ಹೆಮ್ಮೆಯ ಪೊಲೀಸ್ ಅಧಿಕಾರಿಗಳು ನಟ ದರ್ಶನ್ ಅವರ ಕೇಸ್ ನಲ್ಲಿ ಯಾರೋ ಒತ್ತಡೋಕು ಮಣಿಯದೆ ಒಳ್ಳೆ ರೀತಿಯ ತನಿಖೆಯನ್ನು ಮಾಡಿದ್ದಾರೆ.. ಅದಕ್ಕೆ ನಮ್ಮ ಹೃದಯಪೂರ್ವಕ ಅಭಿನಂದನೆಗಳು ಹಾಗೆ ನಮ್ಮದೊಂದು ಸಣ್ಣ ಮನವಿ..🙏 ನಮ್ಮ ಸೌಜನ್ಯ ಹೆಣ್ಣು ಮಗಳ ಕೇಸನ್ನು ಇದೇ ತಂಡಕ್ಕೆ ನೀಡಿ ನಮಗೆ ಅಧಿಕಾರಿಗಳ ಮೇಲೆ ನಂಬಿಕೆ ಇದೆ ಅವರಿಗೆ ನ್ಯಾಯ ಒದಗಿಸುತ್ತಾರೆ .
ಹೀಗೆ ಪತ್ರ ಬರೆದು, ಇದೇ ತನಿಖಾ ತಂಡ ಕಾರ್ಯನಿರ್ವಹಿಸಿದರೆ ಸೌಜನ್ಯ ಸಾವಿಗೆ ನ್ಯಾಯ ಸಿಗುವಂತಾಗಲಿದೆ. ಹೀಗಾಗಿ ದಯವಿಟ್ಟು ಆ ಪ್ರಕರಣದ ತನಿಖೆಯನ್ನು ಈ ಅಧಿಕಾರಿಗಳಿಗೆ ವಹಿಸಿ ಎಂದು ಹಲವು ನೆಟ್ಟಿಗರು ಸಿಎಂ ರನ್ನ ಮನವಿ ಮಾಡಿದ್ದಾರೆ.