ನಟ ದರ್ಶನ್ (Actor darshan) ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದಾರೆ. ಆದರೂ ಕನ್ನಡ ಚಿತ್ರರಂಗ (Kannada film industry) ದರ್ಶನ್ ಕೃತ್ಯವನ್ನು ಖಂಡಿಸುವ ಧೈರ್ಯ ಮಾಡುತ್ತಿಲ್ಲ. ಕನಿಷ್ಟ ಪಕ್ಷ ದರ್ಶನ್ ಮಾಡಿರೋದು ತಪ್ಪು, ಭಾರತದ ಕಾನೂನು ಪ್ರಕಾರ ದರ್ಶನ್‌ಗೆ ಶಿಕ್ಷೆ ಆಗಲಿ ಎಂದು ಹೇಳುವ ಗಟ್ಟಿತನವೂ ಸಿನಿ ರಂಗದ ನಾಯಕ ನಟರು ಹಾಗು ನಟಿಯರೂ ಸೇರಿದಂತೆ ಹಿರಿಯ ಕಲಾವಿದರ ಬಾಯಿಯಿಂದ ಬರುತ್ತಿಲ್ಲ. ಇದಕ್ಕೆ ಕಾರಣ ಏನು ಅಂತಾ ಹುಡುಕುತ್ತಾ ಹೋದ್ರೆ ಕಣ್ಣಿಗೆ ಕಾಣಿಸುವುದು ಮುಂದಿರುವ ಬದುಕು.
ಕನ್ನಡ ಚಿತ್ರರಂಗ ಈಗಾಗಲೇ ಸೋಲಿನ ಸುಳಿಯಲ್ಲಿ ಸಿಲುಕಿದೆ. ಯಾವುದೇ ಚಿತ್ರಗಳು ಗೆಲು ಕಂಡಿಲ್ಲ. ಇನ್ನು ಬರುತ್ತಿರುವ ಸಿನಿಮಾಗಳು ಕೂಡ ನಿರೀಕ್ಷೆ ಹುಟ್ಟಿಸುತ್ತಿಲ್ಲ. ಚಿತ್ರರಂಗದ ನಾಯಕ ನಟರು, ನಿರ್ದೇಶಕರು ಪ್ಯಾನ್ ಸಿನಿಮಾ (Pan india) ನಿರ್ಮಾಣದ ಕಡೆಗೆ ಹೋಗಿದ್ದಾರೆ. ಇರುವ ಒಂದಿಬ್ಬರು ನಾಯಕರು ವರ್ಷಕ್ಕೆ ಒಂದೆರಡು ಸಿನಿಮಾಗಳನ್ನು ಮಾತ್ರ ಮಾಡುತ್ತಾರೆ. ಚಿತ್ರರಂಗವನ್ನೇ ನಂಬಿಕೊಂಡು ಇರುವ ಜನರು ಜೀವನ ಮಾಡುವುದು ಹೇಗೆ..? ಅನ್ನೋ ಪ್ರಶ್ನಾರ್ಥಕ ಚಿಹ್ನೆ ಕಾಡುತ್ತಿತ್ತು. ಈ ನಡುವೆ ದರ್ಶನ್ ಕೊಲೆ ಕೇಸ್ ಹೊರಬಿದ್ದಿದೆ.
ದರ್ಶನ್ ವಿರುದ್ಧ ನಟಿ ರಮ್ಯಾ (Actress ramya) ಮಾತ್ರ ಗುಡುಗಿದ್ದಾರೆ. ಇತೀಚೆಗೆ ದರ್ಶನ್ ಕೊಲೆ ಪ್ರಕರಣ ಕುರಿತು ರೀಟ್ವೀಟ್ (Re-tweet) ಮಾಡಿದ್ದ ಮೋಹಕ ತಾರೆ ರಮ್ಯಾ, ಈಗ ಮತ್ತೆ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ (Instagram story) ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ (Social media) ಬ್ಲಾಕ್ ಅನ್ನೋ ಆಪ್ಶನ್ ಇದೆ. ನಮಗೆ ಇಷ್ಟ ಇಲ್ಲದವರು, ಟ್ರೋಲ್ (Troll) ಮಾಡುವವರು, ಕೆಟ್ಟ ಕಾಮೆಂಟ್ಸ್ ಮೂಲಕ ಕಿರುಕುಳ ಕೊಡುವವರು ಇದ್ದೇ ಇರ್ತಾರೆ. ನನ್ನನು ಸೇರಿ ಹಲವು ನಟ ನಟಿಯರನ್ನು ಟ್ರೋಲ್ ಮಾಡೋ ಜನರಿದ್ದಾರೆ. ಕೆಟ್ಟ ಮೆಸೇಜ್ ಕಳಿಸಿದ್ರೆ ಕೊಲ್ಲುವ ಶೋಚನೀಯ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ಎಂದು ಕಿಡಿಕಾರಿದ್ದಾರೆ.
ಕೆಲವೊಮ್ಮೆ ಟ್ರೋಲ್ ಮಾಡುವವರಿಗೆ ಪೊಲೀಸರಿಂದ ಎಚ್ಚರಿಕೆಯ ಕೊಡಿಸಬೇಕಾಗುತ್ತದೆ. ಟ್ರೋಲ್ ಮಾಡೋ ಮೂಲಕ ತಮ್ಮ ಜೀವನವನ್ನು ಹಾಳು ಮಾಡಿಕೊಳ್ತಿದ್ದಾರೆ. ಯಾರೂ ಕಾನೂನಿಗಿಂತ ಮೇಲಲ್ಲ. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಹೊಡೆಯಲು ಮತ್ತು ಕೊಲ್ಲಲು ಯಾರಿಗೂ ಹಕ್ಕು ಇಲ್ಲ. ಟ್ರೋಲ್ ಮಾಡಿದಾಗ ಒಂದು ಕಂಪ್ಲೇಂಟ್ ಕೊಡಿ ಸಾಕು. ನ್ಯಾಯ ಸಿಗುತ್ತದೆ. ಪೊಲೀಸರು ತಮ್ಮ ಕೈಲಾದಷ್ಟು ಸಹಕಾರ ಮಾಡುತ್ತಿದ್ದಾರೆ. ಪೊಲೀಸರು ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿಯುವುದಿಲ್ಲ ಮತ್ತು ಕಾನೂನು ಮತ್ತು ನ್ಯಾಯದಲ್ಲಿ ಜನರ ನಂಬಿಕೆಯನ್ನು ಉಳಿಸುತ್ತಾರೆ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ನಟಿ ರಮ್ಯಾ ಸಿನಿಮಾ ರಂಗದಿಂದ ಈಗಾಗಲೇ ದೂರ ಉಳಿದಿದ್ದಾರೆ. ಆ್ಯಪಲ್ ಬಾಕ್ಸ್ ಸ್ಟುಡಿಯೋಸ್ ಸ್ಥಾಪನೆ ಮಾಡಿ ಚಿತ್ರ ನಿರ್ಮಾಣಕ್ಕೆ ಇಳಿದಿದ್ದಾರೆ. ನಟ ದರ್ಶನ್ನಿಂದ ಆಗಬೇಕಿರುವುದು ಏನೂ ಇಲ್ಲ. ಹೀಗಾಗಿ ನಟ ದರ್ಶನ್ ಕೃತ್ಯವನ್ನು ಖಂಡಿಸಿದ್ದಾರೆ. ಆದರೆ ಉಳಿದೆಲ್ಲಾ ಕಲಾವಿದರು, ನಟ, ನಟಿಯರು ಇಷ್ಟೊಂದು ಕಟುವಾಗಿ ಹೇಳುವುದಕ್ಕೆ ಸಾಧ್ಯವೇ ಇಲ್ಲ. ಅವರು ಕನ್ನಡ ಚಿತ್ರರಂಗವನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದಾರೆ. ನಟ ದರ್ಶನ್ ಜೈಲುಪಾಲದರೆ ಗತಿ ಏನು ಅನ್ನೋ ರೀತಿಯಲ್ಲೂ ಕೆಲವರು ಯೋಚಿಸುತ್ತಿದ್ದಾರೆ. ಹಾಗಂದ ಮಾತ್ರಕ್ಕೆ ತಪ್ಪು ಮಾಡಿದವರನ್ನು ರಕ್ಷಣೆ ಮಾಡಲು ಸಾಧ್ಯವೇ..? ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲೇ ಬೇಕು ಅಲ್ಲವೇ..?