ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಸ್ಟೇಷನ್ (Annapoorneshwari nagar police station) ಶಾಮಿಯಾನ ಹಾಕಿದ್ದ ಹಿಂದಿನ ಕಾರಣ ಬಯಲಾಗಿದೆ. ಎ2 ಆರೋಪಿಯಾಗಿರೋ ದರ್ಶನ್ (Darshan) ಕೋರಿಕೆ ಮೇರೆಗೆ ಶಾಮಿಯಾನ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪೋಲಿಸರ (Police) ನಡವಳಿಕೆಯ ವಿರುದ್ಧ ಸಾರ್ವಜನಿಕರು ಗರಂ ಆಗಿದ್ದಾರೆ.

ಈ ಬಗ್ಗೆ ಪೋಲಿಸ್ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿರುವ ನಟ ದರ್ಶನ್, ನನಗೆ ಒಂದೇ ಕಡೆ ಕುಳಿತು ಇರಲು ಆಗ್ತಾ ಇಲ್ಲ. ನಾನು ವಾಕ್ ಮಾಡಬೇಕು, ಬಾಡಿಯನ್ನ ಫ್ರೀ ಮಾಡಿಕೊಳ್ಳಬೇಕೆಂದು ದರ್ಶನ್ ಮನವಿ ಮಾಡಿದ್ರಂತೆ.

ಹೀಗಾಗಿ ನಟ ದರ್ಶನ್‌ಗೆ ಅನ್ನಪೂರ್ಣೇಶ್ವರಿ ಪೋಲಿಸ್ ಠಾಣೆಯ ಕಾರಿಡಾರ್‌ನಲ್ಲಿ ಓಡಾಡಿಕೊಂಡಿರಲು ವ್ಯವಸ್ಥೆ ಮಾಡಿದ್ದು, ಹೀಗಾಗಿ ಠಾಣೆ ಒಳಗೆ ಓಡಾಡಲು ಜಾಗವಿಲ್ಲ, ಅದಕ್ಕೆ ಸೈಡ್ ವಾಲ್ ಅಳವಡಿಕೆ ಮಾಡಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿದ್ದು, ರಾಜ್ಯದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ.