ನಾವು ನೋಡದಕ್ಕೆ ಚಂದ ಕಾಣಬೇಕು ಅಂದ್ರೆ ತ್ವಚೆಯ ಬಗ್ಗೆ ಅಷ್ಟೇ ಕಾಳಜಿ ವಹಿಸಬೇಕು.ಇದಲ್ಲದರ ಜೊತೆಗೆ ನಮ್ಮ ತುಟಿ ಕೂಡ ಕೆಂಪಾಗಿ ಇದ್ರೆ ಮುಖದ ಅಂದವನ್ನ ಹೆಚ್ಚಿಸುತ್ತದೆ.. ಆದ್ರೆ ಕೆಲವರ ತುಟಿಯ ಬಣ್ಣ ಕಂದಾಗಿರುತ್ತದೆ..ಕಂದು ಬಣ್ಣವನ್ನು ಮರೆಮಾಚುವುದಕ್ಕೆ ರೆಡ್ ಲಿಪಸ್ಟಿಕ್ ನ ಹಚ್ಚುತ್ತಾರೆ..ಇದಕ್ಕೆ ಪ್ರಮುಖ ಕಾರಣ ದೇಹದಲ್ಲಿ ಮೆಲನಿನ್ ಶೇಖರಣೆ ಹೆಚ್ಚಾದಾಗ.ತುಟಿಗಳು ಹಾಗೂ ಅದರ ಸುತ್ತಲಿನ ಚರ್ಮ ಡಾರ್ಕ್ ಆಗುತ್ತದೆ.

ಅತಿಯಾಗಿ ಸ್ಮೋಕ್ ಮಾಡುವುದರಿಂದ,ಬೀಸಿನಲ್ಲಿ ಹೆಚ್ಚು ಇರುವುದರಿಂದ ,ನಮ್ಮ ಲೈಫ್ ಸ್ಟೈಲ್,ಹಾಗೂ ಆಹಾರ ಸೇವನೆ..ಇವೆಲ್ಲವೂ ಮೆಲನಿನ್ ಶೇಖರಣೆಯನ್ನು ಹೆಚ್ಚು ಮಾಡುತ್ತದೆ. ಹಾಗಿದ್ರೆ ಸಿಂಪಲ್ ಆಗಿ ಈ ತುಟಿಗಳಲ್ಲಿರುವಂತಹ ಈ ಕಪ್ಪು ಕಲೆಗಳನ್ನು ಶಮನ ಮಾಡುವುದು ಎಂಬುವುದರ ಮಾಹಿತಿ ಹೇಗಿದೆ.
ಪಪಾಯ
ಪಪ್ಪಾಯ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಶ ಹೆಚ್ಚಿರುವುದರಿಂದ ತುಟಿ ಮೇಲಾಗಿರುವ ಕಪ್ಪು ಕಲೆಗಳನ್ನ ನಿವಾರಣೆ ಮಾಡುವುದಕ್ಕೆ ತುಂಬಾನೇ ಸಹಾಯಕಾರಿ. ಪಪ್ಪಾಯವನ್ನ ಚಿಕ್ಕ ಚಿಕ್ಕ ಸ್ಲೈಸ್ ಆಗಿ ಕಟ್ ಮಾಡಿ ಅದಕ್ಕೆ ಸ್ವಲ್ಪ ರೋಜ್ ವಾಟರ್ ಅನ್ನ ಬೆರೆಸಿ ಚೆನ್ನಾಗಿ ಪೇಸ್ಟ್ ಮಾಡಿ ನಂತರ ಆ ಪೇಸ್ಟ್ ಅನ್ನ ತುಟಿಗಳಿಗೆ ಹಚ್ಚಿ ಅರ್ಧ ಗಂಟೆಗಳ ಕಾಲ ಹಾಗೆ ಬಿಟ್ಟು ತಣ್ಣೀರಿನಿಂದ ತುಟಿಯನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಕಲೆಗಳು ಬೇಗನೆ ನಿವಾರಣೆ ಆಗುತ್ತದೆ.

ಅಲೋವೆರಾ
ಚರ್ಮದಲಾಗುವ ಯಾವುದೇ ಕಲೆಗಳನ್ನ ನಿವಾರಣೆ ಮಾಡುವುದಕ್ಕೆ ಅಲೋವೆರಾ ತುಂಬಾನೇ ಒಳ್ಳೆಯದು. ಅಲೋವೆರಾದ ಸಿಪ್ಪೆಯನ್ನು ತೆಗೆದು ಅದರೊಳಗಿರುವ ಜಲ್ ಅನ್ನು ತುಟಿಯ ಭಾಗಕ್ಕೆ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ತಣ್ಣಗಿನ ನೀರಿನಿಂದ ವಾಶ್ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ತುಟಿಯ ಬಣ್ಣ ಬದಲಾಗಿ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಆದರೆ ಅಲೋವೆರಾ ತುಂಬಾನೇ ಕಹಿಯಾಗಿರುತ್ತದೆ ಹೆಚ್ಚು ಜನ ತುಟಿಗೆ ಹಚ್ಚಲು ಇಷ್ಟಪಡುವುದಿಲ್ಲ ಆದರೆ ಇದರಿಂದ ಪ್ರಯೋಜನಗಳು ಹೆಚ್ಚಿವೆ.

ನಿಂಬೆರಸ
ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಸಿಡ್ ಅಂಶ ಹೆಚ್ಚಿದ್ದು ತುಟಿಗಳ ಕಪ್ಪು ಕಲೆಗಳನ್ನ ನಿವಾರಣೆ ಮಾಡುವುದಕ್ಕೆ ತುಂಬಾನೇ ಸಹಕಾರಿ. ಅರ್ಧ ಹೋಳು ನಿಂಬೆ ಹಣ್ಣನ್ನ ನಿಮ್ಮ ತುಟಿಗಳಿಗೆ ಹಚ್ಚಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ವಾಷ್ ಮಾಡಿ. ಬೇಕಾದಲ್ಲಿ ನಿಂಬೆಹಣ್ಣಿನ ರಸದೊಂದಿಗೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ರಾತ್ರಿ ಮಲಗೋದಕ್ಕಿಂತ ಮುಂಚೆ ತುಟಿಗೆ ಹಚ್ಚಿ ಮರುದಿನ ಬೆಳಗ್ಗೆ ವಾಷ್ ಮಾಡುವುದರಿಂದ ಬೇಗನೆ ರಿಸಲ್ಟ್ ದೊರೆಯುತ್ತದೆ.
