ಬ್ಯೂಟಿ ಕಾಂಶಿಯಸ್ ಇರೋರು ತುಂಬಾ ಪ್ರಾಮುಖ್ಯತೆ ಕೊಡೊದು ಒಂದು ಸ್ಕಿನ್ ಬಗ್ಗೆ ಮತ್ತೊಂದು ಹೇರ್ ಬಗ್ಗೆ.. ಆದ್ರೆ ಇವತ್ತಿನ ಬ್ಯುಸಿ ಲೈಫ್‌ಸ್ಟೈಲ್‌ನಲ್ಲಿ ಅದನ್ನ ಪ್ರಾಪರ್ ಆಗಿ ಮೈಟೈನ್ ಮಾಡೋದಿಕ್ಕೆ ಆಗಲ್ಲಾ.. ಅದರಲ್ಲೂ ಸ್ಕಿನ್ ಮೇಲೆ ಅಲ್ಪ ಸ್ವಲ್ಪ ಕೇರ್ ಮಾಡಿದ್ರೂ ಕೂದಲು ಬಗ್ಗೆ ಹೆಚ್ಚು ಕಾಳಜಿ ವಹಿಸಲ್ಲಾ.. ಹಾಗಾಗಿ ಈ ತಲೆಹೊಟ್ಟಿನ ಸಮಸ್ಯ ಶುರುವಾಗತ್ತೆ..ಈ ತಲೆ ಹೊಟ್ಟನ್ನು ನಿವಾರಣೆ ಮಾಡಿಕೊಳ್ಳಲು ಸಾಕಷ್ಟು ಮನೆ ಮದ್ದುಗಳು ಇವೆ..ಆದ್ರೆ ಮುಖ್ಯವಾಗಿ ಈ ಡ್ಯಾಂಡ್ರಫ್ ಶುರುವಾಗಲು ಕಾರಣವೇನು ಗೊತ್ತಾ.
ಡ್ರೈನೆಸ್
ಚರ್ಮ ಹೇಗೆ ಡ್ರೈ ಆಗುತ್ತದೆಯೋ ಅದೇ ರೀತಿ ಡ್ರೈ ಆದಾಗ ಡ್ಯಾಂಡ್ರಫ್ ಸಮಸ್ಯೆ ಹೆಚ್ಚಾಗುತ್ತದೆ ಹಾಗಾಗಿ ನಾವು ಯಾವಾಗಲೂ ನಮ್ಮ ತಲೆ ಕೂದಲು ಹಾಗೂ ಮಾಯಿಶ್ಚರೈಸ್ ಮಾಡುತ್ತಲೇ ಇರಬೇಕು. ವಾರಕ್ಕೊಮ್ಮೆ ಅಥವಾ ಎರಡು ಬಾರಿ ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ಡ್ಯಾಂಡ್ರಫ್ ಸಮಸ್ಯೆ ನಿವಾರಣೆ ಆಗುತ್ತದೆ.
ಶಾಂಪು ಬಳಕೆ
ನಮ್ಮ ಕೂದಲಿಗೆ ಯಾವ ಶ್ಯಾಮ್ಪು ಸರಿಹೊಂದುತ್ತದೆ ಎಂಬುದನ್ನು ಗಮನಿಸಿ ನಂತರ ಉಪಯೋಗಿಸುವುದು ಉತ್ತಮ ವಾರಕ್ಕೊಂದಂತೆ ಶಾಂಪೂವನ್ನ ಬದಲಾಯಿಸುತ್ತಿದ್ದರೆ ತಲೆ ಹೊಟ್ಟಿನ ಸಮಸ್ಯೆ ಹೆಚ್ಚಾಗುತ್ತದೆ. ಹಾಗೂ ಮುಖ್ಯವಾಗಿ ವಾರಕ್ಕೆ ಮೂರು ಬಾರಿಯಾದ್ರೂ ತಲೆ ಸ್ನಾನ ಮಾಡುವುದು ಉತ್ತಮ ಇಲ್ಲವಾದರೆ ಡ್ಯಾಂಡ್ರಫ್ ಶುರುವಾಗುತ್ತದೆ.
ಆಯ್ಲಿ ಹೇರ್
ಸಾಕ್ಲ್ಪ್ ನಲ್ಲಿ ಉತ್ಪತ್ತಿಯಾಗುವ ಆಯಿಲ್, ತಲೆಯ ಕೂದಲಿನ ರೂಟ್ಸ್ ಅನ್ನು ವೀಕ್ ಮಾಡುತ್ತದೆ.ಇದರಿಂದ ಕೂದಲು ಉದುರುವಿಕೆ ಹಾಗೂ ಡ್ಯಾಮೇಜ್ ಜಾಸ್ತಿ ಆಗುತ್ತದೆ. ಹಾಗಾಗಿ ಆಗಾಗ ತಲೆಗೆ ಸ್ನಾನ ಮಾಡುತ್ತಿರುವುದು ಉತ್ತಮ ಇಲ್ಲವಾದಲ್ಲಿ ಹೆಚ್ಚಾಗುತ್ತದೆ.
ಒತ್ತಡ ಹೆಚ್ಚಾದಾಗ
ಕೆಲಸದ ಒತ್ತಡ ಅಥವಾ ಇನ್ಯಾವುದೋ ಸ್ಟ್ರೆಸ್ ಇಂದಾಗಿ ನಮ್ಮಲ್ಲಿ ಮೋಡ್ ಥಿಂಗ್ಸ್ ಹೆಚ್ಚಾಗುತ್ತದೆ ಹಾಗೂ ಟೆಂಪರರಿ ಹಾರ್ಮೋನ್ ಚೇಂಜಸ್ ಕೂಡ ಆಗುತ್ತದೆ. ಈ ರೀತಿ ಹೈ ಸ್ಟ್ರೆಸ್ ಇಂದಾಗಿ ಡ್ಯಾಂಡ್ರಫ್ ಸಮಸ್ಯೆ ಶುರುವಾಗುತ್ತದೆ.
ಡಯಟ್
ನಾವು ಸೇವಿಸುವ ಆಹಾರ ನಮ್ಮ ದೇಹದ ಪ್ರತಿಯೊಂದು ಅಂಗದ ಮೇಲು ಕೂಡ ಪರಿಣಾಮವನ್ನು ಬೀರುತ್ತದೆ. ಕೆಲವೊಂದು ಪದಾರ್ಥಗಳನ್ನ ಸೇವಿಸುವುದು ನಮ್ಮ ವಚನ ಆರೋಗ್ಯಕ್ಕಾಗಿ ಮೊಳೆ ಆರೋಗ್ಯಕ್ಕಾಗಿ ಹೀಗೆ ನಾವು ಸೇವಿಸುವ ಆಹಾರದಿಂದ ನಮ್ಮ ದೇಹಕ್ಕೆ ಮುಖ್ಯವಾಗಿ ಎಲ್ಲ ರೀತಿಯ ಪೋಷಕಾಂಶಗಳು ದೊರಕಬೇಕು. ಹಾಗೂ ಕೂದಲ ಆರೋಗ್ಯಕ್ಕಾಗಿ ನೆಲ್ಲಿಕಾಯಿ ಕರಿಬೇವು ಬಾದಾಮಿ ಇವುಗಳನ್ನು ಸೇವಿಸುವುದರಿಂದ ಕೂದಲು ಆರೋಗ್ಯವಾಗಿರುತ್ತದೆ ಹಾಗೂ ಡ್ಯಾಂಡ್ರಫ್ ಸಮಸ್ಯೆ ನಿವಾರಣೆ ಆಗುತ್ತದೆ.