ನಿನ್ನೆ (ಜ.30) ವಿಧಾನಸೌಧದಲ್ಲಿ (Vishal’a soudha) ಎಸ್‌ಸಿ,ಎಸ್‌ಟಿ (Sc ST) ಸಮುದಾಯದದ ಸಚಿವರು ಸಭೆ ನಡೆಸಿದ್ದಾರೆ. ಫೆಬ್ರವರಿ 8 ಮತ್ತು 9 ರಂದು ಬೃಹತ್ ರಾಜ್ಯ ಮಟ್ಟದ ವಾಲ್ಮೀಕಿ ಜಾತ್ರಾ ಮಹೋತ್ಸವ ಹಿನ್ನೆಲೆ, ಸಚಿವರನ್ನ ಆಹ್ವಾನಿಸಲು ವಾಲ್ಮೀಕಿ ಪ್ರಸನ್ನನಾಂದ ಸ್ವಾಮೀಜಿ ಆಗಮಿಸಿದ್ರು.
ಈ ವೇಳೆ ಎಸ್‌ಟಿ ಸಮುದಾಯದ ಸ್ವಾಮೀಜಿ ಆಗಮಿಸಿದ್ದ ಹಿನ್ನಲೆ, ಸಚಿವರಾದ ಪರಮೇಶ್ವರ್, ರಾಜಣ್ಣ, ಮಹಾದೇವಪ್ಪ, ಸತೀಶ್ ಜಾರಕಿಹೊಳಿ ಒಟ್ಟಿಗೆ ಸೇರಿ ಸಭೆ ಮಾಡಿದ್ದಾರೆ.ವಿಧಾನಸೌಧದಲ್ಲಿ ಸುಮಾರು 20 ನಿಮಿಷಗಳ ಕಾಲ ನಾಲ್ವರು ಸಚಿವರು ಚರ್ಚೆ ನಡೆಸಿದ್ದಾರೆ.ಹೀಗೆ ನಿನ್ನೆ ನಾಲ್ವರು ಸಚಿವರು ಒಟ್ಟಿಗೆ ಸೇರಿ ಮಾತುಕತೆ ನಡೆಸಿದ್ದು ಸದ್ಯ ಹಲವು ಅನುಮಾನಗಳಿಗೆ ಕಾರಣವಾಗ್ತಿದೆ.
ಈ ಹಿಂದೆ ಇದೇ ರೀತಿ ದಲಿತ ನಾಯಕರು ಡಿನ್ನರ್ ಹೆಸರಲ್ಲಿ ಸಭೆ ಸೇರಲು ಮುಂದಾಗಿದ್ದು, ಆ ವೇಳೆ ಈ ಮಾಹಿತಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ಹೈ ಕಮಾಂಡ್ ಗೆ ನೀಡಿದ್ದ ಕಾರಣ, ಪ್ರತ್ಯೇಕ ಸಭೆ ನಡೆಸದಂತೆ ಹೈ ಕಮಾಂಡ್ ಆದೇಶಿಸಿತ್ತು.