• Home
  • About Us
  • ಕರ್ನಾಟಕ
Tuesday, December 23, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ. ಶಿವಕುಮಾರ್ ಬ್ಲ್ಯಾಕ್‍ಮೇಲ್: ಛಲವಾದಿ ನಾರಾಯಣಸ್ವಾಮಿ

ಪ್ರತಿಧ್ವನಿ by ಪ್ರತಿಧ್ವನಿ
October 16, 2025
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ
0
Share on WhatsAppShare on FacebookShare on Telegram

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರ ಹೇಳಿಕೆ ಬಹುಶಃ ಸುಳ್ಳಿನ ಕಟ್ಟು ಕಥೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chaluvarayaswamy) ಅವರು ಆಕ್ಷೇಪಿಸಿದ್ದಾರೆ.

ADVERTISEMENT


ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆಶಿ ಅವರು ಮುಖ್ಯಮಂತ್ರಿ ಆಗಬೇಕೆಂಬ ಕನಸು ಕಾಣುತ್ತಿದ್ದರೆ ನಮ್ಮದೇನೂ ಅಭ್ಯಂತರ ಇಲ್ಲ; ಆದರೆ, ಬಿಜೆಪಿಯಿಂದ ಬೆದರಿಕೆ ಕರೆ ಬಂದಿತ್ತು ಎಂದಿದ್ದಾರೆ. ಬೆದರಿಕೆ ಕರೆ ಆಗಿದ್ದರೆ ಅವರು ದೂರು ಕೊಡಬೇಕಿತ್ತು. ಸತ್ಯ ಹೊರಕ್ಕೆ ಬರುತ್ತಿತ್ತು ಎಂದು ನುಡಿದರು. ಅವರ ಹೇಳಿಕೆ ಒಂದು ರೀತಿಯ ಅಭಾಸ ಎಂದು ಟೀಕಿಸಿದರು. ಈ ಮೂಲಕ ಅವರು ಕಾಂಗ್ರೆಸ್ ಪಕ್ಷವನ್ನು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾರೆ ಎಂದು ನನ್ನ ಅನಿಸಿಕೆ ಎಂದು ನುಡಿದರು.


ಮುಖ್ಯಮಂತ್ರಿ ಹುದ್ದೆ ಬಯಸುವವರು ಹಲವು ತಂತ್ರಗಳನ್ನು ಹೂಡುವುದು ಸಹಜ. ಬಿಜೆಪಿ ವಿರುದ್ಧ ಆಪಾದನೆ ಮಾಡಿ, ಕಾಂಗ್ರೆಸ್ ಪಕ್ಷ ಅಥವಾ ಹೈಕಮಾಂಡಿಗೆ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾರೆ ಎಂದು ನನ್ನ ಅನಿಸಿಕೆ ಎಂದರು. ಕನ್ನೇರಿ ಸ್ವಾಮೀಜಿಯವರಿಗೆ ವಿಜಯಪುರ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸರಕಾರವು ಬೇಡದ್ದಕ್ಕೆಲ್ಲ ಬಾಯಿ ಮಾಡುತ್ತದೆ. ಸಾಮಾನ್ಯ ಜನರ ಬಾಯಿ ಮುಚ್ಚಿಸುತ್ತದೆ ಎಂದು ಟೀಕಿಸಿದರು. ಇದು ಡಿ.ಸಿ.ಯವರು ಸ್ವಯಂಪ್ರೇರಿತವಾಗಿ ಮಾಡಿದ್ದಲ್ಲ; ಇದು ಸರಕಾರದ ತಂತ್ರಗಾರಿಕೆ. ಇದು ಸರಿಯಾದ ಕ್ರಮವಲ್ಲ; ಆದರೆ, ಇದು ಮೊಂಡು ಸರಕಾರ ಎಂದು ಆಕ್ಷೇಪಿಸಿದರು.


ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯೇತರ ಸಂಘಟನೆಗಳಲ್ಲಿ ಯಾವುದೇ ಅಧಿಕಾರಿ, ಸಾಮಾನ್ಯ ಜನರು ಭಾಗವಹಿಸಲು ಕಾನೂನಿನಲ್ಲಿ ಅಡೆತಡೆ ಇಲ್ಲ. ಅಧಿಕಾರಿಗಳು ರಾಜಕೀಯ ಚಟುವಟಿಕೆ ಹೊರತುಪಡಿಸಿ ಯಾವುದೇ ಸಂಘಟನೆಗಳ ಚಟುವಟಿಕೆಯಲ್ಲಿ ಭಾಗವಹಿಸುಬಹುದೆಂದು ಕಾನೂನಿನಲ್ಲಿ ಇದೆ. ಈ ಸರಕಾರ, ಸಚಿವರು ಅವಿವೇಕತನ ಪ್ರದರ್ಶಿಸಿ ಕಾನೂನುಗಳಿಗೂ ಮೀರಿದ ಸರಕಾರ ತಮ್ಮದೆಂದು ತೋರ್ಪಡಿಸಲು ಹೊರಟಿದ್ದಾರೆ. ಇತಿಮಿತಿ ಇಲ್ಲದಂತೆ ಆಡುತ್ತಿರುವ ಈ ಸರಕಾರಕ್ಕೆ ಕಾನೂನಿನ ಇತಿಮಿತಿಯನ್ನು ಯಾರಾದರೂ ತೋರಿಸಿ ಕೊಡಬೇಕಿದೆ ಎಂದು ತಿಳಿಸಿದರು.


ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ; ಜನರಿಗೆ ಸೌಲಭ್ಯಗಳು ಸಿಗುತ್ತಿಲ್ಲ; ಅತಿವೃಷ್ಟಿ, ಅನಾವೃಷ್ಟಿ ಆಗಿದೆ. ಅದಕ್ಕೆ ಹಣ ಕೊಡಲು ಹಣ ಇಲ್ಲ; ರಸ್ತೆ ಗುಂಡಿ ಮುಚ್ಚಲು ಇವರಿಗೆ ಯೋಗ್ಯತೆ ಇಲ್ಲ. ಮಳೆ ಬಂದಾಗ ನಗರ ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಜನರಿಗೆ ತೊಂದರೆ ಆಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಕೈಗಾರಿಕೆದಾರರೂ ಬೇರೆ ರಾಜ್ಯಕ್ಕೆ ಹೋಗುವ ಬೆದರಿಕೆ ಹಾಕಿದ್ದಾರೆ. ಇಲ್ಲಿ ಬರಬೇಕಿದ್ದ ಗೂಗಲ್ ಎಐ ಸಂಸ್ಥೆಯು ಆಂಧ್ರ ಪ್ರದೇಶಕ್ಕೆ ಹೋಗಿದೆ. ಕರ್ನಾಟಕದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಎದ್ದು ಕಾಣುವ ಸಂದರ್ಭದಲ್ಲಿ ಇದರ ಕುರಿತು ಚರ್ಚೆ ಆಗಬಾರದೆಂಬ ಉದ್ದೇಶಕ್ಕೆ ಕೆಲವು ಅವಿವೇಕಿ ಸಚಿವರು ತಮ್ಮ ಕೆಲಸ ಮಾಡದೇ ಬೇರೆ ಬೇರೆ ಕಡೆಗೆ ವಿಷಯಾಂತರ ಮಾಡುವ ಕೆಲಸ ಮಾಡುತ್ತಾರೆ ಎಂದರು.

ಇದು ಮೈಗಳ್ಳತನದ ಸರಕಾರ
ಈ ಸರಕಾರದಲ್ಲಿ ವರ್ಗಾವಣೆಗೊಬ್ಬ ಸಚಿವರು ಇದ್ದಾರೆಂದು ಕೆಲವರು ಹೇಳುತ್ತಾರೆ. ಅವರು ಮೈಸೂರು ಕಡೆಯ ಎಂಎಲ್‍ಸಿ. ಇನ್ನೊಬ್ಬರು ಗೊಂದಲದ ಸಚಿವರು. ಅವರ ಇಲಾಖೆ ಬಿಟ್ಟು ಬರೀ ಗೊಂದಲ ಸೃಷ್ಟಿಸುವವರು. ಜೊತೆಗೆ ವಿಷಯಾಂತರ ಮಾಡುವವರು. ಇನ್ನು ಕೆಲವರು ಬಾಯಿಬಡುಕ ಸಚಿವರು. ಲೊಟಲೊಟ ಬಡ್ಕೊಳ್ತ ಇರ್ತಾರೆ ಎಂದು ಟೀಕಿಸಿದರು. ಇದು ಮೈಗಳ್ಳತನದ ಸರಕಾರ ಎಂದು ದೂರಿದರು.

Tags: Chalavadi Narayanaswamychalavadi narayanaswamy bjpchalavadi narayanaswamy mlcchaluvadi narayanaswamychaluvadi narayanaswamy about lakshmi hebbalkarchaluvadi narayanaswamy dharmasthala casechaluvadi narayanaswamy dharmasthala reactionchaluvadi narayanaswamy latest newschaluvadi narayanaswamy newschaluvadi narayanaswamy on congresschaluvadi narayanaswamy on dharmasthala casechaluvadi narayanaswamy on dk shivakumarchaluvadi narayanaswamy reactionchaluvadi narayanaswamy speech
Previous Post

DK Shivakumar: ಹಸಿಕಸದಿಂದ ಗ್ಯಾಸ್ ಉತ್ಪಾದನೆ; ಗೇಲ್ ಸಂಸ್ಥೆ ಜೊತೆ ಸರ್ಕಾರದ ಒಪ್ಪಂದ..!!

Next Post

‘ವೃಷಭ’ ಟೈಟಲ್ ಸಮಸ್ಯೆಮೂಲ ಕನ್ನಡ ಚಿತ್ರಕ್ಕೆ ಸಂಕಷ್ಟ :ಫಿಲಂ ಚೇಂಬರ್ ಬಗೆಹರಿಸಬೇಕಿದೆ..

Related Posts

Top Story

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 23, 2025
0

"ಮನಮೋಹನ್ ಸಿಂಗ್ ಅವರು ಅನೇಕ ಅಧ್ಯಯನ ನಡೆಸಿ ನರೇಗಾ ಯೋಜನೆ ಜಾರಿಗೆ ತಂದಿದ್ದರು. ಮೋದಿ ಸರ್ಕಾರ ಇಂತಹ ನಿರ್ಧಾರ ಕೈಗೊಳ್ಳುತ್ತದೆ ಎಂದು ಭಾವಿಸಿರಲಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್...

Read moreDetails

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

December 23, 2025

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

December 23, 2025

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

December 23, 2025
ಹೊಸಕೋಟೆಗೆ ಬಿರಿಯಾನಿ ತಿನ್ನಲು ಹೋದವರ ಸುಲಿಗೆ..

ಹೊಸಕೋಟೆಗೆ ಬಿರಿಯಾನಿ ತಿನ್ನಲು ಹೋದವರ ಸುಲಿಗೆ..

December 23, 2025
Next Post

'ವೃಷಭ' ಟೈಟಲ್ ಸಮಸ್ಯೆಮೂಲ ಕನ್ನಡ ಚಿತ್ರಕ್ಕೆ ಸಂಕಷ್ಟ :ಫಿಲಂ ಚೇಂಬರ್ ಬಗೆಹರಿಸಬೇಕಿದೆ..

Recent News

Top Story

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 23, 2025
Top Story

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

by ಪ್ರತಿಧ್ವನಿ
December 23, 2025
Top Story

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

by ಪ್ರತಿಧ್ವನಿ
December 23, 2025
Top Story

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

by ಪ್ರತಿಧ್ವನಿ
December 23, 2025
Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!
Top Story

Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!

by ಪ್ರತಿಧ್ವನಿ
December 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

December 23, 2025

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

December 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada