• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

‘ವೃಷಭ’ ಟೈಟಲ್ ಸಮಸ್ಯೆಮೂಲ ಕನ್ನಡ ಚಿತ್ರಕ್ಕೆ ಸಂಕಷ್ಟ :ಫಿಲಂ ಚೇಂಬರ್ ಬಗೆಹರಿಸಬೇಕಿದೆ..

ಪ್ರತಿಧ್ವನಿ by ಪ್ರತಿಧ್ವನಿ
October 16, 2025
in Top Story, ಅಂಕಣ, ಇದೀಗ, ಕರ್ನಾಟಕ, ವಾಣಿಜ್ಯ, ವಿಶೇಷ, ಸಿನಿಮಾ
0
Share on WhatsAppShare on FacebookShare on Telegram

ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಬಂದ ಮೇಲೆ ಇತ್ತೀಚಿನ ದಿನಗಳಲ್ಲಿ ಒಂದೇ ಹೆಸರಿನಲ್ಲಿ ಎರಡು ಚಿತ್ರಗಳು ತೆರೆ ಕಾಣುತ್ತಿರುವುದು ಮೂಲ ಕನ್ನಡದಲ್ಲಿ ಮಾಡಿದ ಸಿನಿಮಾಗಳಿಗೆ ಸಮಸ್ಯೆಯಾಗುತ್ತಿದೆ. ಬೇರೆ ಭಾಷೆಯವರು ರಿಲೀಸ್ ಹಂತದಲ್ಲಿ ಡಬ್ಬಿಂಗ್ ವರ್ಷನ್ ಗೆ ಟೈಟಲ್ ಕೊಟ್ಟು ಬಿಡುಗಡೆ ಮಾಡುತ್ತಾರೆ.

ADVERTISEMENT

ಅದೇ ರೀತಿ ಯುವ ನಿರ್ದೇಶಕ ಉಮೇಶ್ ಹೆಬ್ಬಾಳ ಅವರು ಕಳೆದ 2-3 ವರ್ಷಗಳಿಂದ ದೊಡ್ಡ ಮಟ್ಟದ ಎಫರ್ಟ ಹಾಕಿ, ಕಷ್ಟಪಟ್ಟು ವೃಷಭ ಎಂಬ ಚಿತ್ರವನ್ನು ಮಾಡಿದ್ದಾರೆ. ಉಮೇಶ್ ಹೆಬ್ಬಾಳ ಅವರೇ ನಾಯಕನಾಗಿ ನಟಿಸಿ ಬಿಗ್ ಬಜೆಟ್ ನಲ್ಲಿ ಈ ಚಿತ್ರ ನಿರ್ಮಾಣ ಸಹ ಮಾಡಿದ್ದಾರೆ. ವೃಷಭ ಚಿತ್ರವೀಗ ಪೋಸ್ಟ ಪ್ರೊಡಕ್ಷನ್ ಕೊನೇ ಹಂತದಲ್ಲಿದ್ದು, ಸಧ್ಯದಲ್ಲೇ ರಿಲೀಸ್ ಮಾಡೋ ಯೋಚನೆಯಲ್ಲಿರೋವಾಗಲೇ, ಮೋಹನ್ ಲಾಲ್ ಅಭಿನಯದ, ನಂದಕಿಶೋರ್ ನಿರ್ದೇಶನದ ಮಲಯಾಳಂನ ಪ್ಯಾನ್ ಇಂಡಿಯಾ ಚಿತ್ರ ವೃಷಭ ಕೂಡ ನ.6ಕ್ಕೆ ರಿಲೀಸಾಗುತ್ತಿದೆ. ಕನ್ನಡದಲ್ಲೂ ಸಹ ಅದೇ ಹೆಸರಲ್ಲಿ ತೆರೆ ಕಾಣುತ್ತಿದೆ. ಈ ಟೈಟಲ್ ವಿವಾದದ ಬಗ್ಗೆ ಕರೆದಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಉಮೇಶ್, ವೃಷಭ ಚಿತ್ರ ನನ್ನ ಬಹುದಿನಗಳ ಕನಸು.

ವರ್ಷದ ಹಿಂದೆ ಏಕ್ತಾ ಕಪೂರ್ ಸಂಸ್ಥೆಗೆ ಲೆಟರ್ ಬರೆದಾಗ ಟೈಟಲ್ ಕೊಡ್ತೀರಾ ಎಂದು ಕೇಳಿದ್ದರು. ಆನಂತರ ನಮ್ಮ ಸಂಪರ್ಕಕ್ಕೆ ಬರಲಿಲ್ಲ. ನಾವು ಕೆ. ಮಂಜು ಅವರ ಮೂಲಕ ನಂದಕಿಶೋರ್ ಸಂಪರ್ಕಿಸಿ ಕೇಳಿದಾಗ ಅವರು ಕನ್ನಡದಲ್ಲಿ ರಿಲೀಸ್ ಮಾಡುತ್ತಿಲ್ಲ, ಎಂದಿದ್ದರು. ಹಾಗಾಗಿ ಎಲ್ಲಾ ರೆಡಿ ಮಾಡಿಕೊಂಡು ರಿಲೀಸ್ಗೆ ಹೋಗಬೇಕೆಂದಾಗ ನಮಗೀ ಸಮಸ್ಯೆ ಎದುರಾಗಿದೆ. ಏಕ್ತಾ ಕಪೂರ್ ಅವರ ಸಂಸ್ಥೆ ನಮ್ಮ ಟೈಟಲ್ ಬಳಸಿಕೊಳ್ತಿದೆ. ಅದು ಸ್ಟಾರ್ ಸಿನಿಮಾ. ನ.6ಕ್ಕೆ ರಿಲೀಸಾಗುತ್ತಿದೆ. ಆಮೇಲೆ ನಾವು ಬಂದರೆ ಜನರಿಗೆ ಕನ್ಫ್ಯೂಸ್ ಆಗುತ್ತೆ. ಫಿಲಂ ಚೇಂಬರ್ ನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿ, ರಿನೆವಲ್ ಕೂಡ ಮಾಡಿಸಿದ್ದೇವೆ. ಅವರು ಕನ್ನಡ ಟೈಟಲ್ ರಿಜಿಸ್ಟರ್ ಮಾಡಿಸದೇ ರಿಲೀಸ್ ಮಾಡಲು ಹೊರಟಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿ ಆ ಸಂಸ್ಥೆಯನ್ನು ಸಂಪರ್ಕಿಸಿ ಇತ್ಯರ್ಥ ಪಡಿಸುವ ಪ್ರಯತ್ನದಲ್ಲಿದೆ ಎಂದರು.


ನಂತರ ವಷಭ ಬಗ್ಗೆ ಮಾತಾಡುತ್ತ ಗೂಳಿ ಥರದ ವ್ಯಕ್ತಿತ್ ಇರೋ ರೈತನೊಬ್ಬನ ಕಥೆ ನಮ್ಮ ಚಿತ್ರದಲ್ಲಿದೆ. ನಾನು ತೋರಿಸ್ತಿರೋ ರೈತನೇ ಬೇರೆ, ಕನ್ನಡ ಶಾಲೆಗಳನ್ನು ಉಳಿಸಲು ಏನು ಪರಿಹಾರವಿದೆ, ಹೀಗೆ ಸಾಕಷ್ಟು ವಿಷಯಗಳನ್ನು ಚಿತ್ರದಲ್ಲಿ ಹೇಳಿದ್ದೇವೆ. ವೃಷಭ ಟೈಟಲ್ ಮೇಲೇ ನಮ್ಮಿಡೀ ಚಿತ್ರ ನಿಂತಿದೆ. ಈಗ ನಂದ ಕಿಶೋರ್ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು. ರೈತ ಎಂದರೆ ಬರೀ ಹೊಲದಲ್ಲಿ ಕೆಲಸ ಮಾಡುವವನಲ್ಲ. ಆತನನ್ನು ಕೆಣಕಿದರೆ ಸುಮ್ಮನಿರಲ್ಲ. ಆತನಿಗೂ ತಾಕತ್ತಿರುತ್ತೆ ಅಂತ ಹೇಳಲು ಹೊರಟಿದ್ದೇವೆ ಎಂದೂ ಮಾಹಿತಿ ನೀಡಿದರು.


ರಾಯ ಬಡಿಗೇರ್ ಚಿತ್ರದ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ‌. ಪ್ರಶಾಂತ್ ಸಾಗರ್ ಚಿತ್ರದ ಕ್ಯಾಮೆರಾ ವರ್ಕ್ ನಿಭಾಯಿಸಿದ್ದು, ಪ್ರಣವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಮಂಡ್ಯ ಸುತ್ತಮುತ್ತ 38 ದಿನ, ಬೆಂಗಳೂರಲ್ಲಿ 8 ದಿನ ಸೇರಿ 46 ದಿನಗಳ ಕಾಲ ವೃಷಭ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

Tags: kannada cinemaMalayalammohan lalPan IndiasandalwoodumeshVrushabha
Previous Post

ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ. ಶಿವಕುಮಾರ್ ಬ್ಲ್ಯಾಕ್‍ಮೇಲ್: ಛಲವಾದಿ ನಾರಾಯಣಸ್ವಾಮಿ

Next Post

117 ಕಿ.ಮೀ. ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಗೆ ಸಂಪುಟ ಅಸ್ತು: ಡಿಸಿಎಂ ಡಿ.ಕೆ. ಶಿವಕುಮಾರ್

Related Posts

ಪ್ಲೇಆಫ್‌ಗೆ ಲಗ್ಗೆ ಇಟ್ಟ ಆರ್‌ಸಿಬಿ : 23 ರನ್‌ಗಳಿಂದ ಪಂಜಾಬ್‌ ಮಣಿಸಿ ಗೆದ್ದು ಬೀಗಿದ ರೆಡ್‌ ಆರ್ಮಿ..
Top Story

ಪ್ಲೇಆಫ್‌ಗೆ ಲಗ್ಗೆ ಇಟ್ಟ ಆರ್‌ಸಿಬಿ : 23 ರನ್‌ಗಳಿಂದ ಪಂಜಾಬ್‌ ಮಣಿಸಿ ಗೆದ್ದು ಬೀಗಿದ ರೆಡ್‌ ಆರ್ಮಿ..

by ಪ್ರತಿಧ್ವನಿ
May 17, 2026
0

ಬೆಂಗಳೂರು : ಪಂಜಾಬ್​ ಕಿಂಗ್ಸ್​ ವಿರುದ್ಧ ನಡೆದ ಐಪಿಎಲ್​ 2026ರ 61ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ನೀಡಿದ್ದು ಗೆಲುವಿನ ರಣಕೇಕೆ ಹಾಕಿದೆ...

Read moreDetails
ಚಂಡ ಮಾರುತ ಬರುವ ಮುನ್ನ ಶಾಂತವಾಗಿರುತ್ತೆ : ಇರಾನ್‌ ಮೇಲೆ ಟ್ರಂಪ್ ಮತ್ತೆ ದಾಳಿಯ ಮುನ್ಸೂಚನೆ..!

ಚಂಡ ಮಾರುತ ಬರುವ ಮುನ್ನ ಶಾಂತವಾಗಿರುತ್ತೆ : ಇರಾನ್‌ ಮೇಲೆ ಟ್ರಂಪ್ ಮತ್ತೆ ದಾಳಿಯ ಮುನ್ಸೂಚನೆ..!

May 17, 2026
ಅಬ್ಬರಿಸಿದ ಆರ್‌ಸಿಬಿ ರನ್‌ ಮಷಿನ್‌ ಕೊಹ್ಲಿ : ಪಂಜಾಬ್‌ಗೆ ಬೃಹತ್‌ ಮೊತ್ತದ ಟಾರ್ಗೆಟ್‌..!

ಅಬ್ಬರಿಸಿದ ಆರ್‌ಸಿಬಿ ರನ್‌ ಮಷಿನ್‌ ಕೊಹ್ಲಿ : ಪಂಜಾಬ್‌ಗೆ ಬೃಹತ್‌ ಮೊತ್ತದ ಟಾರ್ಗೆಟ್‌..!

May 17, 2026
ಮತ್ತೆ ಡಿಸಿಎಂ ಆಗ್ತಾರಾ ಅಥಣಿ ಶಾಸಕ..? : ಬೆಳಗಾವಿ ಜಿಲ್ಲೆಗೆ ಮಹತ್ವದ ಸ್ಥಾನದ ಬಗ್ಗೆ ಸವದಿ ಹೇಳಿದ್ದೇನು..?

ಮತ್ತೆ ಡಿಸಿಎಂ ಆಗ್ತಾರಾ ಅಥಣಿ ಶಾಸಕ..? : ಬೆಳಗಾವಿ ಜಿಲ್ಲೆಗೆ ಮಹತ್ವದ ಸ್ಥಾನದ ಬಗ್ಗೆ ಸವದಿ ಹೇಳಿದ್ದೇನು..?

May 17, 2026
KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!

KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!

May 17, 2026
Next Post
117 ಕಿ.ಮೀ. ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಗೆ ಸಂಪುಟ ಅಸ್ತು: ಡಿಸಿಎಂ ಡಿ.ಕೆ. ಶಿವಕುಮಾರ್

117 ಕಿ.ಮೀ. ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಗೆ ಸಂಪುಟ ಅಸ್ತು: ಡಿಸಿಎಂ ಡಿ.ಕೆ. ಶಿವಕುಮಾರ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada