ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ (Darshan) ಎಡಗೈ ಶಸ್ತ್ರಚಿಕಿತ್ಸೆ ಸಕ್ಸಸ್ ಆಗಿದೆ. ಸಿನಿಮಾ ಚಿತ್ರೀಕರಣ ವೇಳೆ ದರ್ಶನ್ ಕೈಗೆ ಪೆಟ್ಟಾಗಿತ್ತು. ಕಳೆದ 1 ವಾರದಿಂದ ಕೈಗೆ ಪಟ್ಟಿ ಕಟ್ಟಿಕೊಂಡೆ ಓಡಾಡುತ್ತಿದ್ರು ಇದೀಗ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದರ್ಶನ್ ಕೈ ಸರ್ಜರಿ ಯಶಸ್ವಿಯಾಗಿ ನೆರವೇರಿದೆ. ಡಿ ಬಾಸ್ಗೆ ಮುಂದಿನ 10 ದಿನಗಳ ಕಾಲ ವಿಶ್ರಾಂತಿಗೆ ಸೂಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಏ.4ರಂದು ಮಂಡ್ಯದಲ್ಲಿ ನಡೆದ ಸುಮಲತಾ ಅವರ ಬಹಿರಂಗ ಸಭೆಯಲ್ಲಿ ದರ್ಶನ್ ಕೂಡ ಭಾಗಿಯಾಗಿದ್ದರು. ಈ ವೇಳೆ, ದರ್ಶನ್ ಅವರೇ ಹೇಳಿಕೊಂಡಿದ್ದಾರೆ. ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು ಆಸ್ಪತ್ರೆಗೆ ಅಡ್ಮಿಟ್ ಆಗಿ ಆಪರೇಷನ್ಗೆ ಒಳಗಾಗಲಿದ್ದೇನೆ ಎಂದು ತಿಳಿಸಿದ್ದರು. ಡಿಬಾಸ್ ದರ್ಶನ್ ಅಭಿಮಾನಿಗಳು ಕಳೆದ 15 ದಿನದಿಂದ ತೀವ್ರ ಕೈ ನೋವಿನಿಂದ ಬಳಲುತ್ತಿದ್ರು.
ಶೀಘ್ರ ಚೇತರಿಕೆಗೆ ಅಭಿಮಾನಿಗಳು ಹಾರೈಸುತ್ತಿದ್ದಾರೆ . ಸದ್ಯ ಕಾಟೇರ ಸಕ್ಸಸ್ ನಂತ್ರ ದರ್ಶನ್ ಡೆವಿಲ್ ಸಿನಿಮಾದಲ್ಲಿ ನಟನೆ ಮಾಡ್ತಿದ್ದಾರೆ. ಈಗಾಗಲೇ ಕೆಲದಿನಗಳ ಚಿತ್ರೀಕರಣ ಕೂಡ ಮುಗಿದಿದೆ. ಮಿಲನ ಪ್ರಕಾಶ್ ಈ ಸಿನಿಮಾಗೆ ನಿರ್ದೇಶನ ಮಾಡ್ತಿದ್ದಾರೆ.ಮೂಲಗಳ ಪ್ರಕಾರ ಮೇ 2ನೇ ವಾರದಿಂದ ದರ್ಶನ್ ಮತ್ತೆ ಶೂಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ . ನವೆಂಬರ್- ಡಿಸೆಂಬರ್ನಲ್ಲಿ ಚಿತ್ರ ತೆರೆಕಾಣುವ ನಿರೀಕ್ಷೆ ಇದೆ.